ಅರುಣಾಚಲ ಪ್ರದೇಶದ ಉಪ್ಪಿನ ಕಾಯಿ ರಾಣಿ ಯೇಡ್ 
ವಿಶೇಷ

ಅರುಣಾಚಲ ಪ್ರದೇಶ: ಗೃಹಿಣಿಯರು ಸ್ವಾವಲಂಬಿಯಾಗಲು 'ಉಪ್ಪಿನಕಾಯಿ ರಾಣಿ' ನೆರವು!

ಯೇಡ್ ಡುಜೋಮ್, ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಲ್ಲಿ ಮಹತ್ವಾಕಾಂಕ್ಷೆಯ ಉಪ್ಪಿನಕಾಯಿ ಉದ್ಯಮ ಆರಂಭಿಸಿದಾಗ ಅಷ್ಟಾಗಿ ಯಾರ ಗಮನ ಸೆಳೆದಿರಲಿಲ್ಲ. ಆದರೆ, ತನ್ನ ದೃಢ ನಿರ್ಧಾರದಿಂದ ಅದರಲ್ಲಿ ಯಶಸ್ಸು ಸಾಧಿಸಿದ್ದಾರೆ.

ಗುವಾಹಟಿ: ಯೇಡ್ ಡುಜೋಮ್, ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಲ್ಲಿ ಮಹತ್ವಾಕಾಂಕ್ಷೆಯ ಉಪ್ಪಿನ ಕಾಯಿ ಉದ್ಯಮ ಆರಂಭಿಸಿದಾಗ ಅಷ್ಟಾಗಿ ಯಾರ ಗಮನ ಸೆಳೆದಿರಲಿಲ್ಲ ಆದರೆ, ತನ್ನ ದೃಢ ನಿರ್ಧಾರದಿಂದ ಅದರಲ್ಲಿ ಯಶಸ್ಸು ಸಾಧಿಸಿದ್ದಾರೆ.

ತಾಯಿಯ ಅಜ್ಜಿಯ ಪಾಲನೆಯಲ್ಲಿ ಬೆಳೆದ ಡುಜೋಮ್, ತದನಂತರ ಮಲತಾಯಿಯಿಂದ ಸಾಕಷ್ಟು ನೋವು ತಿಂದ್ದರೂ, ಎಲ್ಲಾವನ್ನು ಎದುರಿಸಿ ನಾಳೆಯ ಭವಿಷ್ಯದ ಬಗ್ಗೆ ಯಾವಾಗಲೂ ಸಕಾರಾತ್ಮಕವಾಗಿ ಚಿಂತಿಸುತ್ತಿದ್ದ ಅವರು ಇದೀಗ, ಅರುಣಾಚಲ ಉಪ್ಪಿನಕಾಯಿ ಹೌಸ್ ನ ಹೆಮ್ಮೆಯ ಮಾಲೀಕರಾಗಿದ್ದಾರೆ. ಬಡತನದಿಂದ ಬಳಲುತ್ತಿರುವ ಗೃಹಿಣಿಯರ ಗುಂಪುಗಳು ಸ್ವಾವಲಂಬಿಯಾಗಲು ಸಹಾಯ ಮಾಡುತ್ತಿದ್ದಾರೆ. 

ಸುಬನ್ ಸಿರಿ ಜಿಲ್ಲೆಯ ಲೆಂಯಿ ಎಂಬ ಪುಟ್ಟ ಗ್ರಾಮದ ಯೇಡ್, ನಾಲ್ಕನೇ ವಯಸ್ಸಿನಲ್ಲಿದ್ದಾಗಲೇ, ತಾಯಿಯಿನ್ನು ಕಳೆದುಕೊಂಡು ಸಾಕಷ್ಟು ನೋವು ಅನುಭವಿಸಿದ್ದಾರೆ. ನಂತರ ಅಜ್ಜಿ ಮನೆಯಲ್ಲಿ ಬೆಳೆಯುತ್ತಾರೆ. ಅಜ್ಜಿ ಹೊಲದಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ, 8ನೇ ತರಗತಿಯಲ್ಲಿದ್ದಾಗ ಅವರು ಕೂಡಾ ನಿಧನಹೊಂದಿದ್ದಾಗ ಯೋಡ್ ನೆನಪಿಕೊಳ್ಳುತ್ತಾರೆ.

ಅಜ್ಜಿ ಮರಣದ ನಂತರ ತಂದೆ ಮನೆಯಲ್ಲಿದ್ದಾಗ ಮಲತಾಯಿ ಊಟ ಕೊಡುತ್ತಿರಲಿಲ್ಲ, ಸರಿಯಾದ ಬಟ್ಟೆ ಕೂಡಾ ಇರಲಿಲ್ಲ. 12ನೇ ತರಗತಿ ಪಾಸಾದ ನಂತರ ಉನ್ನತ ಶಿಕ್ಷಣಕ್ಕಾಗಿ ಇಟಾನಗರಕ್ಕೆ ಬಂದು, ಪಾರ್ಟ್ ಟೈಂ ಕೆಲಸ ಮಾಡಿಕೊಂಡು ತನ್ನ ಖರ್ಚನ್ನು ಭರಿಸುತ್ತಿದ್ದಾಗಿ 29 ವರ್ಷದ ಯುವತಿ ಯೇಡ್ ಹೇಳುತ್ತಾರೆ.

ಉಪ್ಪಿನ ಕಾಯಿ ಉದ್ಯಮ ಆರಂಭಕ್ಕೂ ಮುನ್ನ ಸಾಮಾಜಿಕ ಕಾರ್ಯಕರ್ತರಾಗಿದ್ದ ಯೇಡ್, ಹಲವು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು, ಖಾಸಗಿ ಶಾಲೆಯೊಂದಲ್ಲಿ ಶಿಕ್ಷಕಿಯಾಗಿಯೂ ಸ್ವಲ್ಪ ಕಾಲ ಸೇವೆ ಸಲ್ಲಿಸಿದ್ದಾರೆ.

 ದೈನಂದಿನ ವೈಯಕ್ತಿಕ ಖರ್ಚುಗಳನ್ನು ನಿಭಾಯಿಸಿ, ಪ್ರತಿ ತಿಂಗಳು ಅಲ್ಪ ಮೊತ್ತವನ್ನು ಉಳಿಸಲು ಪ್ರಾರಂಭಿಸಿ, ಮಣಿಪುರದಲ್ಲಿ ಕೆಲವು ಮಹಿಳೆಯರಿಂದ ಉಪ್ಪಿನಕಾಯಿ ಮಾಡುವುದರಲ್ಲಿ ತರಬೇತಿ ಪಡೆದಿದ್ದು, ತದನಂತರ ಅರುಣಾಚಲ ಪ್ರದೇಶದಲ್ಲಿ ಸೂಕ್ತ ತರಬೇತಿ ಪಡೆದಿದ್ದಾಗಿ ಯೇಡ್ ಹೇಳುತ್ತಾರೆ.

ಈ ವರ್ಷದ ಫೆಬ್ರವರಿ 14 ರಂದು ಅರುಣಾಚಲ ಉಪ್ಪಿನಕಾಯಿ ಹೌಸ್ ಆರಂಭಿಸಿದ ಯೇಡ್, ಎಂಟು ಮಂದಿ ಗೃಹಿಣಿಯರಿಗೆ ಸಹಾಯ ಮಾಡಿದ್ದಾರೆ. ಅವರಲ್ಲಿ ಕೆಲವರು ಕಚ್ಚಾ ಪದಾರ್ಥಗಳನ್ನು ಪೂರೈಸುತ್ತಾರೆ. ಅನೇಕ ಬಡ ಮಹಿಳೆಯರನ್ನು ನೋಡಿದ್ದು, ದಿನನಿತ್ಯದ ಅಗತ್ಯ  ಪೂರೈಸಿಕೊಳ್ಳಲು ಪರದಾಡುತ್ತಿದ್ದಾರೆ. ಅಂತವರಿಗಾಗಿ ಏನಾದರೂ ಮಾಡಬೇಕು ಎನ್ನುತ್ತಾರೆ ಯೇಡ್.

ಉಪ್ಪಿನಕಾಯಿಯನ್ನು ಮಾರಾಟ ಮಾಡಿದ ನಂತರ ಬಂದಂತಹ ಆದಾಯದಲ್ಲಿ ಸ್ವಲ್ಪ ಭಾಗವನ್ನು ಆ ಮಹಿಳೆಯರಿಗೆ ಹಂಚುತ್ತಾರೆ. ವ್ಯವಹಾರವನ್ನು ಮತ್ತಷ್ಟು ಅಧುನೀಕರಿಸಬೇಕಾಗಿದೆ. ಆದರೆ, ಸಾಂಕ್ರಾಮಿಕ ಕಾರಣದಿಂದ ಹೂಡಿಕೆದಾರರ ಬೆಂಬಲ ಸಿಗುತ್ತಿಲ್ಲ. ನಮ್ಮಲ್ಲಿ ಪ್ರತಿಯೊಬ್ಬರೂ ಸರ್ಕಾರಿ ನೌಕರರಾಗಲು ಸಾಧ್ಯವಿಲ್ಲ. ಹಾಗಾದರೆ, ನೀವು ಪ್ರೀತಿಸುವ ಮತ್ತು ಉತ್ಸಾಹಭರಿತ ಕೆಲಸದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಸಾಧ್ಯವಾದಾಗ ಸರ್ಕಾರಿ ಉದ್ಯೋಗ ಹುಡುಕುವ ಸಮಯವನ್ನು ಏಕೆ ವ್ಯರ್ಥಮಾಡುತ್ತೀರಿ?",ಎಂದು ಅವರು ಹೇಳುತ್ತಾರೆ.

ಸಸ್ಯಹಾರಿ ಹಾಗೂ ಮಾಂಸಾಹಾರಿ ಉಪ್ಪಿನಕಾಯಿ ಮಾಡುವುದರಲ್ಲಿ ಆಕೆ ಪರಿಣಿತಿ ಹೊಂದಿದ್ದಾರೆ. ಮೀನು, ಹಂದಿ, ಚಿಕ್ಕನ್, ಹಸು ಮಾಂಸ ಹಾಗೂ ಶುಂಠಿ, ಬಿಳಿಬದನೆ, ಕ್ಯಾಪ್ಸಿಕಂ, ಆಲೂಗಡ್ಡೆ, ಮೂಲಂಗಿ ಮತ್ತು ಹಲಸಿ ಹಣ್ಣಿನಿಂದ ಬಗೆಬಗೆಯ ಉಪ್ಪಿನಕಾಯಿಯನ್ನು ಅವರು ತಯಾರಿಸುತ್ತಾರೆ.

ರಾಜ್ಯಮಟ್ಟದ ಪಾಕಶಾಲೆ ಸ್ಪರ್ಧೆಯಲ್ಲಿ ಎರಡನೇ ರನ್ನರ್ ಆಫ್ ಪ್ರಶಸ್ತಿ ಪಡೆದಿರುವ ಯೇಡ್, ಇದೀಗ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದೇನೆ. ಈ ಉದ್ಯಮವನ್ನು ಮತ್ತಷ್ಟು ಬೆಳೆಸುವ ಅದ್ಯಮ  ಬಯಕೆಯನ್ನು ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT