ವಿಶೇಷ

ಮಹಾಬೂಬಾಬಾದ್ 24x7 ರಕ್ಷಕಿ: ನರಿಯನ್ನು ರಕ್ಷಿಸಲು ಬಾವಿಗೆ ಇಳಿದ ಮೊಹಮ್ಮದ್ ಸುಮಾ, ಇಲ್ಲಿಯವರೆಗೆ 120 ಪ್ರಾಣಿಗಳ ರಕ್ಷಣೆ

Vishwanath S

ಹೈದರಾಬಾದ್: ಕೇವಲ 21ನೇ ವಯಸ್ಸಿಗೆ ಮೊಹಮ್ಮದ್ ಸುಮಾ ಪ್ರಾಣಿಗಳ ಜೀವ ರಕ್ಷಕಿಯಾಗಿದ್ದಾರೆ. 11ನೇ ವಯಸ್ಸಿನಿಂದ ಪ್ರಾರಂಭಿಸಿ ಈ ಕಾರ್ಯದಲ್ಲಿ ಆಕೆ ಬರೋಬ್ಬರಿ 120 ಪ್ರಾಣಿಗಳನ್ನು ರಕ್ಷಿಸಿದ್ದಾರೆ.

ಅಲ್ಲದೆ ಇತ್ತೀಚೆಗೆ ನರಿಯನ್ನು ರಕ್ಷಿಸಲು 40 ಅಡಿ ಬಾವಿಗೆ ಇಳಿದ್ದಿದ್ದಾರೆ. ಇನ್ನು ತಾವು ರಕ್ಷಿಸಿದ ಪ್ರಾಣಿಗಳ ಚೇತರಿಕೆಗಾಗಿ ತಮ್ಮ ಮನೆಯಲ್ಲೇ ಶೆಡ್ ನಿರ್ಮಿಸಿದ್ದಾರೆ. ಯಾವುದೇ ಸಮಯವಾದರೂ ಪ್ರಾಣಿಗಳನ್ನು ರಕ್ಷಿಸಲು ಅಂಜುವುದಿಲ್ಲ. ಹೆಬ್ಬಾವುಗಳಂತಹ ಅಪಾಯಕಾರಿ ಪ್ರಾಣಿಗಳನ್ನು ರಕ್ಷಿಸಲಾಗಿದೆ.

10 ವರ್ಷಗಳಿಂದ, ಪ್ರಾಣಿಗಳನ್ನು ರಕ್ಷಿಸುವುದು ಮತ್ತು ಗಾಯಗೊಂಡರೆ ಅವರಿಗೆ ಪ್ರಥಮ ಚಿಕಿತ್ಸೆ ನೀಡುವುದು ಮೊಹಮ್ಮದ್ ಸುಮಾ ಅವರ ದಿನಚರಿಯ ಭಾಗವಾಗಿದೆ.

ಮಹಾಬೂಬಾಬಾದ್ ಮೂಲದ ಸುಮಾ ಯಾವುದೇ ಪಕ್ಷಿಗಳು, ಪ್ರಾಣಿಗಳು ತೊಂದರೆಯಲ್ಲಿರುವ ಮಾಹಿತಿ ಸಿಕ್ಕರೆ ಕೂಡಲೇ ಪ್ರತಿಕ್ರಿಯಿಸುತ್ತಾರೆ. ಸರಿಯಾದ ರೀತಿಯಲ್ಲಿ ಅವುಗಳಿಗೆ ಪುನರ್ವಸತಿ ಕಲ್ಪಿಸಲು ಸಹಾಯ ಮಾಡುತ್ತಾಳೆ. ಇಲ್ಲಿಯವರೆಗೆ ಕೋತಿಗಳು, ನಾಯಿಗಳು, ಬೆಕ್ಕುಗಳು, ಹಸುಗಳು, ಗೂಬೆಗಳು ಮತ್ತು ಪಕ್ಷಿಗಳು ಸೇರಿದಂತೆ 120 ಪ್ರಾಣಿಗಳನ್ನು ರಕ್ಷಿಸಿದ್ದಾರೆ.

ಸುಮಾ ತನ್ನ ಪ್ರಾಣವನ್ನೇ ಪಣಕ್ಕಿಟ್ಟು 40 ಅಡಿ ಆಳದ ಬಾವಿಗೆ ಇಳಿದ್ದು ಅದನ್ನು ಹೊರಗೆದಿದ್ದರು. ಆದರೆ ನರಿಯನ್ನು ಬಾವಿಯಿಂದ ಹೊರತೆಗೆಯುವ ಹೊತ್ತಿಗೆ ಅದು ಸತ್ತುಹೋಗಿತ್ತು. 

ತನ್ನ ಮೊಬೈಲ್ ಫೋನ್‌ನಲ್ಲಿ ಅಥವಾ ಟೋಲ್-ಫ್ರೀ ಅನಿಮಲ್ ಮೊಬೈಲ್ ಮೆಡಿಕಲ್ ಆಂಬ್ಯುಲೆನ್ಸ್ ಸಂಖ್ಯೆ (1962) ಮೂಲಕ ತೊಂದರೆಯಲ್ಲಿರುವ ಪ್ರಾಣಿಯ ಬಗ್ಗೆ ಆಕೆಗೆ ಕರೆ ಬಂದ ಕೂಡಲೇ, ಸುಮಾ, ಹಗ್ಗ, ಗೋಣಿ ಚೀಲ ಮತ್ತು ಕೈಗವಸುಗಳಿಂದ ಶಸ್ತ್ರಸಜ್ಜಿತನಾಗಿ, ರಕ್ಷಿಸಲು ಸ್ಥಳಕ್ಕೆ ಹೋಗುತ್ತಾಳೆ ಪ್ರಾಣಿ ಪ್ರಿಯೆ. 

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಸುಮಾ, ಪರಿಸರ ಸಂರಕ್ಷಣೆಗಾಗಿ ಕೆಲಸ ಮಾಡಿದ ತನ್ನ ಪೋಷಕರಿಂದ ಸ್ಫೂರ್ತಿ ಪಡೆದಿದ್ದು ತಾನು 11ನೇ ವಯಸ್ಸಿನಲ್ಲಿ ಪ್ರಾಣಿಗಳನ್ನು ರಕ್ಷಿಸಲು ಪ್ರಾರಂಭಿಸಿದ್ದಾಗಿ ಹೇಳಿದರು. 

5ನೇ ತರಗತಿಯಲ್ಲಿ ಓದುತ್ತಿದ್ದಾಗ ಗಾಯಗೊಂಡ ಹಂದಿಯೊಂದನ್ನು ರಕ್ಷಿಸಿದೆ. ರಾತ್ರಿಯ ಸಮಯದಲ್ಲಿ ನನಗೆ ಕರೆ ಬಂದರೆ ನನ್ನ ತಂದೆ ರಕ್ಷಣಾ ಕಾರ್ಯಾಚರಣೆಗೆ ನನ್ನೊಂದಿಗೆ ಬರುತ್ತಿದ್ದರು ಎಂದು ಅವರು ಹೇಳಿದರು. ಕೆಲವೊಮ್ಮೆ ಅವಳ ಕೆಲಸವು ಸಾಕಷ್ಟು ಅಪಾಯಕಾರಿ. ಕೆಲವು ವರ್ಷಗಳ ಹಿಂದೆ ಸುಮಾ ಹೆಬ್ಬಾವು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದರು.

ಸುಮಾ ರಕ್ಷಿಸಿದ ಪ್ರಾಣಿಗಳಿಗಾಗಿ ತನ್ನ ಮನೆಯಲ್ಲಿ ಶೆಡ್ ನಿರ್ಮಿಸಿದ್ದಾಳೆ. 2018ರಲ್ಲಿ ತಾಯಿಯನ್ನು ಕಳೆದುಕೊಂಡ ಆರು ಬೆಕ್ಕಿನ ಮರಿಗಳನ್ನು ರಕ್ಷಿಸಿ ಅವುಗಳನ್ನು ತನ್ನ ಮನೆಯ ಶೆಡ್ಗೆ ತಂದು ಚಿಕಿತ್ಸೆ ನೀಡಿ ನೋಡಿಕೊಂಡಿರುವುದಾಗಿ ಹೇಳಿದರು.

SCROLL FOR NEXT