ವಿಶೇಷ

ದಾವಣಗೆರೆ: ಅಗತ್ಯವಿರುವವರಿಗೆ ಆಕ್ಸಿಜನ್ ಪೂರೈಸಿ ಜನಮನ ಗೆದ್ದ ವಾಲಿಬಾಲ್ ಆಟಗಾರ್ತಿ!

Shilpa D

ದಾವಣಗೆರೆ: 19 ವರ್ಷದ ವಾಲಿಬಾಲ್ ಆಟಗಾರ್ತಿ ಹಬೀಬುನ್ನೀಸಾ ತನಗಿರುವ ಸೀಮಿತ ಸಂಪನ್ಮೂಲಗಳೊಂದಿಗೆ ರಾಜ್ಯದಲ್ಲಿ ಅಗತ್ಯವಿರುವವರಿಗೆ ಆಮ್ಲಜನಕ ಪೂರೈಸುತ್ತಿದ್ದಾರೆ.

ಕೋವಿಡ್ ಎರಡನೇ ಅಲೆಯಲ್ಲಿ ಲಾಕ್ ಡೌನ್ ಇರುವ ಕಾರಣ ಸಂಕಷ್ಟದಲ್ಲಿರುವವರಿಗೆ ಆಕ್ಸಿಜನ್ ನೀಡುತ್ತಿದ್ದಾರೆ. ಅಂತರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ ಹಲವರ ಹೃದಯಗಳನ್ನು ಗೆದ್ದಿದ್ದಾರೆ. 

ಕಳೆದ ವಾರ ತನ್ನ ಸಹೋದರನ ಬೈಕ್‌ನಲ್ಲಿ ಆಕ್ಸಿಜನ್ ಸಿಲಿಂಡರ್ ತೆಗೆದುಕೊಂಡು ಹೋಗುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಉಸಿರಾಟ ತೊಂದರೆಯಿದ್ದ ಕೋವಿಡ್ ರೋಗಿಗೆ ಸಿಜಿ ಆಸ್ಪತ್ರೆಯಲ್ಲಿ ಹಾಸಿಗೆ ಸಿಕ್ಕಿತು, ಆದರೆ ಆಮ್ಲಜನಕವಿಲ್ಲ ಮತ್ತು ಕುಟುಂಬವನ್ನು ಸಿಲಿಂಡರ್ ಕೇಳಲಾಯಿತು. ಸಕಾಲಕ್ಕೆ ಸರಿಯಾಗಿ ಆಮ್ಲಜನಕ ಸಿಲಿಂಡರ್ ಸಂಗ್ರಹಿಸಿ ಆಸ್ಪತ್ರೆಗೆ ಸಾಗಿಸಿ ರೋಗಿಯ ಪ್ರಾಣ ಉಳಿದಿದ್ಧಕ್ಕೆ ಸಂತೋಷಪಟ್ಟಿದ್ದಾರೆ. ಇದರ ಜೊತೆಗೆ ಇನ್ನೂ ನಾಲ್ಕು ಸಿಲಿಂಡರ್‌ಗಳನ್ನು ಜೋಡಿಸಲು ಮುಂದಾಗಿದ್ದಾಳೆ.

ಆಟೋರಿಕ್ಷಾ ಚಾಲಕನ ಮೊಹಮ್ಮದ್ ಜಬೀರ್ ಮಗಳು ಹಬೀಬುನ್ನಿಸಾ ಹಲವು ರಂಗಗಳಲ್ಲಿ ಸಕ್ರಿಯರಾಗಿದ್ದು ಮಾಸ್ಕ್ ವಿತರಿಸುವುದು, ಆಮ್ಲಜನಕ ಮತ್ತು ರಕ್ತಕ್ಕಾಗಿ ವ್ಯವಸ್ಥೆ ಮಾಡುವುದು ಮತ್ತು ವಲಸಿಗರಿಗೆ ಆಹಾರ ನೀಡುವುದು ಮುಂತಾದ ಜನಹಿತ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ.

ಕೋವಿಡ್ -19 ಸಂದರ್ಭದಲ್ಲಿ ಕರ್ತವ್ಯ ಸಹಾಯ ಮಾಡುವುದು ನನ್ನ ಕರ್ತವ್ಯವಾಗಿದೆ. ನನ್ನ ಈ ಕೆಲಸಕ್ಕೆ ಯೂತ್ ಕಾಂಗ್ರೆಸ್ ಹಣ ಸಹಾಯ ನೀಡುತ್ತಿದೆ. ನನ್ನ ತಂದೆ ಕೂಡ ನನಗೆ ಸಹಾಯ ಮಾಡುತ್ತಿದ್ದಾರೆ.

ಯೂತ್ ಕಾಂಗ್ರೆಸ್ ದಾವಣಗೆರೆ ಘಟಕದ ಉಪಾಧ್ಯಕ್ಷರಾಗಿರುವ ಹಬೀಬುನ್ನಿಸಾ ಅನೇಕ ಹುಡುಗಿಯರು ಮುಂದೆ ಬಂದು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದ್ದಾರೆ. 

ದಾವಣಗೆರೆಯ ಮಿಲ್ಲಟ್ ಕಾಲೇಜಿನಲ್ಲಿ ತನ್ನ ಅಂತಿಮ ವರ್ಷದ ಐಟಿಐ (ಎಲೆಕ್ಟ್ರಿಕಲ್) ಮಾಡುತ್ತಿದ್ದು, ಆಕೆಯ ತಂದೆ ಜಬೀರ್ ಪ್ರತಿದಿನ 800 ರು ಹಣ ಸಂಪಾದಿಸುತ್ತಾರೆ, ಲಾಕ್ ಡೌನ್ ಆರಂಭವಾದಾಗಿನಿಂದ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.
 

SCROLL FOR NEXT