ವಿಶೇಷ

5 ಕೆಜಿ ತೂಕದ ಮಗುವಿಗೆ ಜನ್ಮವಿತ್ತ ಮಹಿಳೆ!

Raghavendra Adiga

ಮಾಂಡ್ಲಾ(ಮಧ್ಯಪ್ರದೇಶ): ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ 29 ವರ್ಷದ ಮಹಿಳೆಯೊಬ್ಬರು 5.1 ಕಿಲೋಗ್ರಾಂ ತೂಕದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ,

ನವಜಾತ ಶಿಶುವಿನ ಸಾಮಾನ್ಯ ತೂಕವು 2.5 ನಿಂದ 3.7 ಕೆಜಿ ನಡುವೆ ಇರುತ್ತದೆ. ಆದರೆ ಇದು ಅಪರೂಪದ ಪ್ರಕರಣವಾಗಿದೆ ಎಂದು ವೈದ್ಯರು ಭಾನುವಾರ ತಿಳಿಸಿದ್ದಾರೆ.

"ರಕ್ಷಾ ಕುಶ್ವಹಎಂಬ ಮಹಿಳೆ ಶನಿವಾರ ಅಂಜಾನಿಯಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾಮಾನ್ಯ ಹೆರಿಗೆ ಮಾಡಿಸಿಕೊಂಡಿದ್ದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ತೂಕ 5.1 ಕೆಜಿ, ಇದೆ., ಇದು ನವಜಾತ ಶಿಶುವಿನ ಸರಾಸರಿ ತೂಕದ ದೃಷ್ಟಿಯಿಂದ ಅಪರೂಪ," ಎಂದು  ಆರೋಗ್ಯ ಕೇಂದ್ರದ  ಡಾ.ಅಜಯ್ ತೋಶ್ ಮರಾವಿ ಅವರು ಪಿಟಿಐಗೆ ತಿಳಿಸಿದ್ದಾರೆ.

ಶಿಶು 54 ಸೆಂಟಿಮೀಟರ್ ಎತ್ತರವಿದೆ ಎಂದು ಅವರು ಹೇಳಿದರು.

"ಮಗು ಆರೋಗ್ಯಕರವಾಗಿ ಜನಿಸಿದ್ದರೂ ಅದರ ತೂಕದ ಸಲುವಾಗಿ ಪರೀಕ್ಷೆಗಳು ನಡೆಯಬೇಕಿದೆ. ಭಾನುವಾರ ಮಧ್ಯಾಹ್ನ ಸುಮಾರು ಮಗು ಮೂತ್ರ ವಿಸರ್ಜನೆಯ ಕೆಲವು ಸಮಸ್ಯೆಗಳಿಂದ ಬಳಲುತ್ತಿದೆ. ಆಕೆಯನ್ನು ಮಾಂಡ್ಲಾ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. " ಎಂದು ಅವರು ಹೇಳಿದರು.

ಹೆರಿಗೆ ನೋವಿನಿಂದ ಬಳಲುತ್ತಿದ್ದಾಗ ಮಹಿಳೆಯನ್ನು ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು. ಆಗ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಬದಲು, ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು, ಅಲ್ಲಿ ಅವರು ಮಗುವಿಗೆ ಜನ್ಮ ನೀಡಿದ್ದಾರೆ.ಆಗ ಇಬ್ಬರೂ ಚೆನ್ನಾಗಿಯೇ ಇದ್ದರು ಎಂದು ವೈದ್ಯರು ಹೇಳಿದರು. 

ಸಾಮಾನ್ಯವಾಗಿ, ಸಕ್ಕರೆ, ಬೊಜ್ಜು ಮತ್ತು ಹಾರ್ಮೋನುಗಳ ಸಮಸ್ಯೆಯಿರುವ ಮಹಿಳೆಯರು ಅಧಿಕ ತೂಕದ ಶಿಶುಗಳಿಗೆ ಜನ್ಮ ನೀಡುತ್ತಾರೆ ಎಂದು ಡಾ.ಮರಾವಿ ಹೇಳಿದರು, "ಆದರೆ ಕುಶ್ವಹಾ ಅವರಿಗೆ ಮಧುಮೇಹವಲ್ಲ." ಮೂರು ವರ್ಷಗಳ ಹಿಂದೆ ಅವರು ಒಂದು ಹೆಣ್ಣು ಮಗಿವಿನ ತಾಯಿಯಾಗಿದ್ದರು. ಹಾಗಾಗಿ ಇದು ಅವರ ಎರಡನೇ ಮಗು ಎಂದು ಅವರು ಹೇಳಿದರು.

"ಪುಟ್ಟ ದುಂಡುಮುಖದ ಹೊಸ ಅತಿಥಿಯ ಆಗಮನದಿಂದ ಕುಟುಂಬವು ಸಂತೋಷವಾಗಿದೆ" 

"ನಾನು ಇಂತಹ ತೂಕದ ಮಗುವನ್ನು ಕಂಡದ್ದು ಇದು ಮೊದಲು" ಎಂದು ಆರೋಗ್ಯ ಕೇಂದ್ರದ ಹಿರಿಯ ಸೂಲಗಿತ್ತಿ ಮುನ್ನಿ ಬಾಯಿ ಹೇಳಿದ್ದಾರೆ.
 

SCROLL FOR NEXT