ವಿವೇಕ್‌ ಮೂರ್ತಿ 
ವಿಶೇಷ

ಅಮೆರಿಕಾದ ಸರ್ಜನ್ ಜನರಲ್ ವಿವೇಕ್ ಮೂರ್ತಿ ಕುಟುಂಬದಿಂದ ಮಂಡ್ಯ, ಮಡಿಕೇರಿ ಆಸ್ಪತ್ರೆಗಳಿಗೆ ವೈದ್ಯಕೀಯ ಸರಕು ಪೂರೈಕೆ!

ಅಮೆರಿಕಾದ ಸರ್ಜನ್‌ ಜನರಲ್‌ ಆಗಿ ಸೇವೆ ಸಲ್ಲಿಸುತ್ತಿರುವ ಭಾರತ ಮೂಲದ ವಿವೇಕ್‌ ಮೂರ್ತಿಯವರ ಕುಟುಂಬ ಮಡಿಕೇರಿ ಹಾಗೂ ಮಂಡ್ಯದ ಆಸ್ಪತ್ರೆಗಳಿಗೆ ಕೊರೋನಾ ಸಂಬಂಧಿತ ವೈದ್ಯಕೀಯ ಸರಕುಗಳನ್ನು ರವಾನಿಸಿದೆ. 

ಮೈಸೂರು: ಅಮೆರಿಕಾದ ಸರ್ಜನ್‌ ಜನರಲ್‌ ಆಗಿ ಸೇವೆ ಸಲ್ಲಿಸುತ್ತಿರುವ ಭಾರತ ಮೂಲದ ವಿವೇಕ್‌ ಮೂರ್ತಿಯವರ ಕುಟುಂಬ ಮಡಿಕೇರಿ ಹಾಗೂ ಮಂಡ್ಯದ ಆಸ್ಪತ್ರೆಗಳಿಗೆ ಕೊರೋನಾ ಸಂಬಂಧಿತ ವೈದ್ಯಕೀಯ ಸರಕುಗಳನ್ನು ರವಾನಿಸಿದೆ. 

ಸ್ಕೋಪ್ ಫೌಂಡೇಶನ್ ಅಡಿಯಲ್ಲಿ ವಿವೇಕ್‌ ಮೂರ್ತಿಯವರ ತಂದೆ ಲಕ್ಷ್ಮೀ ನರಸಿಂಹ ಮೂರ್ತಿಯವರು, 70 ಆಕ್ಸಿಜನ್ ಸಾಂದ್ರಕಗಳು, ನಾಲ್ಕು ವೆಂಟಿಲೇಟರ್‌ಗಳು, ಎನ್ 95 ಮಾಸ್ಕ್'ಗಳು, ರೆಸ್ಪಿರೇಟರ್ ಮಾಸ್ಕ್'ಗಳು, ಸ್ಟೆಪ್ ಟ್ರಾನ್ಸ್‌ಫಾರ್ಮರ್ ಪೀಸ್'ಗಳು,ರೂ.1.40 ಕೋಟಿ ಮೌಲ್ಯದ ಶುಚಿಗೊಳಿಸುವ ವಸ್ತುಗಳನ್ನು ಮಂಡ್ಯ ಹಾಗೂ ಮಡಿಕೇರಿ ಆಸ್ಪತ್ರೆಗಳಿಗೆ ರವಾನಿಸಿದ್ದಾರೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಲಕ್ಷ್ಮೀ ನರಸಿಂಹ ಮೂರ್ತಿಯವರು, ವೈದ್ಯಕೀಯ ಸಂಪನ್ಮೂಲಗಳ ಕೊರತೆಯಿರುವ 12 ಸಣ್ಣ ಆಸ್ಪತ್ರೆಗಳಿಗೆ ಈ ವೈದ್ಯಕೀಯ ಸರಕುಗಳನ್ನು ವಿತರಿಸಲಾಗುತ್ತಿದೆ. ಆರಂಭಿಕ ಹಂತವಾಗಿ ಮೊದಲಿಗೆ ಜಿಲ್ಲೆಯ ತಾಲೂಕು ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲಿಯೇ ಫೌಂಡೇಶನ್ ರೂ.70 ಲಕ್ಷ ಮೌಲ್ಯದ ವಸ್ತುಗಳನ್ನು ನವದೆಹಲಿಯ ಮೂಲಕ ನೀಡಿಲಿದ್ದು, ಇತರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ವಿತರಣೆಯಾಗುವಂತೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. 

ಆಡಾಪ್ಟರ್ ಹೊಂದಿರುವ 70 ಆಮ್ಲಜನಕ ಸಾಂದ್ರಕಗಳು, 25 ಡಿಜಿಟಲ್ ಥರ್ಮಾಮೀಟರ್ಗಳು, 1,96,000 ಎನ್95 ಫೇಸ್ ಮಾಸ್ಕ್ಗಳು, 5000 ಫುಲ್ ಫೇಸ್ ಶೀಲ್ಡ್ ಗಳು, 400 ನೈಟ್ರೈಲ್ ಪೌಡರ್ ಫ್ರೀ ಗ್ಲೌಸ್'ಗಳು, 50 ಆಕ್ಸಿಜನ್ ಕ್ಯಾನ್ಯುಲಾ, ಐದು ವೋಲ್ಟೇಜ್ ಟ್ರಾನ್ಸ್ಫಾರ್ಮರ್ಗಳನ್ನು ಇದೀಗ ರವಾನಿಸಲಾಗಿದೆ. ಶೀಘ್ರದಲ್ಲೇ ಈ ವಸ್ತುಗಳು ಬೆಂಗಳೂರು ತಲುಪಲಿದ್ದು, ನಂತರ ಜಿಲ್ಲೆಗೆ ಸರಬರಾಜು ಆಗಲಿದೆ ಎಂದಿದ್ದಾರೆ.

ವಿವೇಕ್ ಮೂರ್ತಿ ಅವರ ಸೋದರಸಂಬಂಧಿ ವಸಂತ್ ಅವರು ಮಾತನಾಡಿ, ತಮ್ಮ ಗ್ರಾಮವಾದ ಹಲ್ಲೆಗೆರೆ, ಮಂಡ್ಯ, ಮದ್ದೂರು, ಮಳವಳ್ಳಿ, ನಾಗಮಂಗಲಾ ಮತ್ತು ಇತರ ಸ್ಥಳಗಳಲ್ಲಿ ವೈದ್ಯಕೀಯ ಸಾಮಗ್ರಿಗಳನ್ನು ಹಸ್ತಾಂತರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ, ಒಂದು ಕೋಟಿ ರೂ ವೆಚ್ಚದಲ್ಲಿ ಕೋವಿಡ್ ವಾರ್ಡ್ ನಿರ್ಮಿಸುವ ಯೋಜನೆ ಕೂಡ ಇದೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್