ವಿಶೇಷ

ಕೇರಳ: ತರಬೇತುಗೊಂಡ 22 ಮಹಿಳಾ ಅರ್ಚಕರು ಪೂಜಾ ಕೈಂಕರ್ಯ ನೆರವೇರಿಸಲು ಸಿದ್ಧ

Harshavardhan M

ತಿರುವನಂತಪುರ: ತರಬೇತಿ ಪಡೆದ 22 ಮಹಿಳಾ ಅರ್ಚಕರು ಕೇರಳ ರಾಜ್ಯದಲ್ಲಿ ಪೂಜಾ ಕಾರ್ಯಗಳನ್ನು ಕೈಗೊಳ್ಳಲು ಅಧಿಕೃತವಾಗಿ ಸನ್ನದ್ಧರಾಗಿದ್ದಾರೆ. ಇತ್ತೀಚಿಗಷ್ಟೆ ಅವರಿಗೆ ದೀಕ್ಷೆ ದೊರೆತಿತ್ತು.

ಇದುವರೆಗೂ ಪುರುಷರು ಮಾತ್ರವೇ ನಿರ್ವಹಿಸುತ್ತಿದ್ದ ಅರ್ಚಕ ವೃತ್ತಿಯಲ್ಲಿ ಮುಂದಿನ ದಿನಗಳಲ್ಲಿ ಮಹಿಳೆಯರೂ ಸಕ್ರಿಯರಾಗಿ ಪಾಲ್ಗೊಳ್ಳಲಿದ್ದಾರೆ.

ಮುವಟ್ಟುಪುಳ ಕ್ಷೇತ್ರದ ಪೂಜಾರಿಗಳಾದ ಕೆ.ಸುಭಾಷ್ ತಂತ್ರಿ ಅವರ ನೇತೃತ್ವದಡಿ 22 ಮಹಿಳೆಯರಿಗೆ ಅರ್ಚಕ ತರಬೇತಿಯನ್ನು ನೀಡಲಾಗಿತ್ತು.

ಭಕ್ತವೃಂದದಲ್ಲಿ ಪುರುಷರಿಗೆ ಹೋಲಿಸಿದರೆ, ಮಹಿಳೆಯರ ಪಾಲೇ ಹೆಚ್ಚು. ಹೀಗಿರುವಾಗ ಅರ್ಚಕ ವೃತ್ತಿಯನ್ನು ಮಹಿಳೆಯರು ನಿರ್ವಹಿಸುವುದರಲ್ಲಿ ತಪ್ಪೇನು? ಅರ್ಚಕರಾಗುವ ಅರ್ಹತೆ ಅವರಿಗೂ ಇದೆ ಎಂದು ಗುರುಗಳಾದ ಸುಭಾಷ್ ತಂತ್ರಿ ಹೇಳಿದ್ದಾರೆ.

ಸುಭಾಷ್ ತಂತ್ರಿ ಅವರು ಮತ್ತೂ 13  ಮಂದಿ ಮಹಿಳೆಯರಿಗೆ ಅರ್ಚಕ ತರಬೇತಿಯನ್ನು ನೀಡುತ್ತಿದ್ದಾರೆ. ಈಗಾಗಲೇ ಹಲವೆಡೆಗಲಿಂದ ಮಹಿಳಾ ಅರ್ಚಕರೇ ಪೂಜಾ ವಿಧಾನ ನಡೆಸಿಕೊಡುವಂತೆ ಬೇಡಿಕೆ ಬರುತ್ತಿರುವುದಾಗಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

SCROLL FOR NEXT