ಕೊಚ್ಚಿ: ಚಾಯ್ ಮಾರಿದವರು ದೇಶದ ಪ್ರಧಾನಿಯೂ ಆಗಬಹುದು ಎಂದು ಹೇಳಿದ್ದ ನರೇಂದ್ರ ಮೋದಿ ಚಾಯ್ ವಾಲಾಗಳಲ್ಲಿ ಮಾತ್ರವಲ್ಲದೆ ಯುವಪೀಳಿಗೆಯವರಲ್ಲಿ ಸ್ಫೂರ್ತಿಯನ್ನು ತುಂಬಿದ್ದರು.
ಇಲ್ಲೊಬ್ಬ ಮಲಯಾಳಿ ಚಾಯ್ ವಾಲಾ ಸೈಕಲ್ ಏರಿ ದಿಲ್ಲಿಯವರೆಗೂ ಚಾಯ್ ಮಾರುವ ಮೂಲಕ ಸಾಧನೆ ಮಾಡಿದ್ದಾನೆ. ನಿಧಿನ್ ಮಲಿಯೆಕ್ಕಲ್ ಆ ಸಾಧನೆಗೆ ಪಾತ್ರನಾದ ಯುವಕ. 24 ವರ್ಷದ ನಿಧಿನ್ ಚಾಯ್ ಮಾರುವ ವೃತ್ತಿಯಲ್ಲಿದ್ದಾನೆ. ತ್ರಿಶೂರ್ ಆತನ ಊರು.
ಎಲ್ಲರೂ ಬಿಜಿನೆಸ್ ಟ್ರಿಪ್ ಮಾಡಲು ದೇಶ ವಿದೇಶಗಳಿಗೆ ವಿಮಾನದಲ್ಲಿ ತೆರಳಿದರೆ, ತ್ರಿಶೂರ್ ನ ಚಾಯ್ ವಾಲಾ ನಿಧಿನ್ ತನ್ನ ತನ್ನ ಬಿಜಿನೆಸ್ ಟ್ರಿಪ್ ಗಾಗಿ ಸೈಕಲಿನಲ್ಲೇ ದೇಶ ಪ್ರವಾಸ ಮಾಡಿದ್ದಾನೆ.
ಆತನ ಬಿಜಿನೆಸ್ ಟ್ರಿಪ್ ಬುಧವಾರವಷ್ಘ್ಟೇ ಕೊನೆಗೊಂಡಿತ್ತು. ಆತ ಹೋದಲ್ಲೆಲ್ಲಾ ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎನ್ನುತ್ತಾನೆ ಆತ. ಸೆಪ್ಟೆಂಬರ್ 27ರಂದು ಆತ ಸೈಕಲ್ ಏರಿದ್ದ ಎನ್ನುವುದು ಗಮನಾರ್ಹ.
ಇದನ್ನೂ ಓದಿ: ಚಿಕನ್, ಫಿಶ್ ತ್ಯಾಜ್ಯದಿಂದ ಪರಿಸರಸ್ನೇಹಿ ಉತ್ಪನ್ನ ತಯಾರಿ: ಪಿಯುಸಿ ವಿದ್ಯಾರ್ಥಿನಿಗೆ ರಾಷ್ಟ್ರಪತಿ ಪ್ರಶಸ್ತಿ
ಚಾಯ್ ಮಾರಾಟದಿಂದ ಬಂದ ಹಣವನ್ನು ಆತ ಎನ್ ಜಿ ಒ ಸಂಘಟನೆಗೆ ದೇಣಿಗೆಯಾಗಿ ನೀಡುವ ಉದ್ದೇಶವನ್ನು ಹೊಂದಿದ್ದಾನೆ.