ವಿಶೇಷ

ಜೊತೆಗಾರನಿಲ್ಲದೇ ತಾಯಿಯಾದ ಡೆನಿಯಲ್ ಬಟಲ್!

Nagaraja AB

ಲಂಡನ್ : ಪ್ರತಿಯೊಬ್ಬ ಮಹಿಳೆಯು ತಾಯ್ತನ ಬಯಸೋಕೆ ಇಷ್ಟಪಟ್ತಾಳೆ. ಸಹಜ ತಾಯ್ತನ ಅನುಭವಿಸಲು ನೈಸರ್ಗಿಕವಾಗಿ ಮಗುವನ್ನು ಪಡೆಯೋಕೆ ಜೊತೆಗಾರ (ಗಂಡ)ಬೇಕು ಅಂತ ಬಯಸ್ತಾಳೆ.ಆದರೆ ಇಲ್ಲೊಬ್ಬ ಮಹಿಳೆ ಇದೆಲ್ಲಕ್ಕಿಂತ ಭಿನ್ನವಾಗಿ ಮಗುವನ್ನು ಹೆತ್ತಿದ್ದಾಳೆ. 

ಅದೂ ಯಾವುದೇ ಜೊತೆಯಿಲ್ಲದೆಯೇ ಪರ್ಫೆಕ್ಟ್ ಜೊತೆಗಾರನ ಹುಡುಕಾಟದಲ್ಲಿದ್ದ ಇಂಗ್ಲೆಂಡ್ ನ ಡೆನಿಯಲ್ ಬಟಲ್ ಅನ್ನೋ 30 ವರ್ಷದ ಮಹಿಳೆ ಪರ್ಫೆಕ್ಟ್ ಜೊತೆಗಾರ ಸಿಗದೇ ಇದ್ದಿದ್ದಕ್ಕೆ ಕೊನೆಗೂ ಒಂಟಿಯಾಗಿಯೇ ಮಗುವನ್ನು ಹಡೆದಿದ್ದಾಳೆ.

ಮಿರರ್ ವರದಿ ಪ್ರಕಾರ ಡೆನಿಯಲ್ ಬಟಲ್ ಗೆ  ಮಗುವನ್ನು ಹೆರಬೇಕು, ಅದರ ಪಾಲನೆ ಮಾಡಬೇಕು ಅನ್ನೋ ಆಸೆಯಿತ್ತಾದರೂ ಅವಳು ಒಳ್ಳೆ ಜೊತೆಗಾರ ಸಿಗದ ಕಾರಣ ನೈಸರ್ಗಿಕವಾಗಿ ಮಗುವನ್ನ ಪಡೆಯೋಕೆ ಸಫಲಳಾಗಲಿಲ್ಲ. ಇದರಿಂದ ಬೇಸತ್ತ ಆಕೆ ಒಂದು ನಿರ್ಧಾರಕ್ಕೆ ಬರ್ತಾಳೆ. ಬಟಲ್ ಐವಿಎಫ್ ಸಹಾಯದಿಂದ ಸಿಂಗಲ್ ಮದರ್ ಆಗೋಕೆ ನಿರ್ಧರಿಸ್ತಾಳೆ.ಅದಕ್ಕಾಗಿ ಬಟಲ್ ವೀರ್ಯಾಣು ದಾನಿಯನ್ನು (ಸ್ಪರ್ಮ್ ಡೋನರ್) ಹುಡುಕೋಕೆ ಆರಂಭಿಸುತ್ತಾಳೆ.

ಸ್ಪರ್ಮ್ ಬ್ಯಾಂಕ್ ನಲ್ಲಿ ತನಗೆ ಬೇಕಾದ ಅನಿಸೋ ಅರ್ಜೆಂಟೇನಾ ಮೂಲದ ಸ್ಪರ್ಮ್  ಆಯ್ಕೆ ಮಾಡಿ ಆತನಿಗೆ ಒಂದು ಲಕ್ಷ ರೂ. ನೀಡಿ ಸ್ಪರ್ಮ್ ಪಡೆದು ತಾಯಿಯಾಗಿದ್ದಾಳೆ. 

SCROLL FOR NEXT