ವಿಶೇಷ

ಬಿಹಾರ: 90ರ ಇಳಿವಯಸ್ಸಿನಲ್ಲೂ ಕುಗ್ಗದ ಉತ್ಸಾಹ, 2ನೇ ಬಾರಿ ಪಂಚಾಯಿತಿ ಚುನಾವಣೆ ಎದುರಿಸಲಿರುವ ವೃದ್ಧೆ

Srinivas Rao BV

ಪಾಟ್ನಾ: ಊರ್ಮಿಳಾ ದೇವಿಗೆ ಜನಸೇವೆ ವಿಷಯಕ್ಕೆ ಬಂದಾಗ ವಯಸ್ಸು ಅಡ್ಡಿಯಾಗುವುದಿಲ್ಲ. 90 ವರ್ಷದ ಈಕೆ 2 ನೇ ಬಾರಿಗೆ ಪಂಚಾಯಿತಿ ಚುನಾವಣೆಗೆ ಯುವಕರ ರೀತಿಯಲ್ಲಿ ತಯಾರಿ ನಡೆಸುತ್ತಿದ್ದಾರೆ. 

ತಮ್ಮ ಇಳಿ ವಯಸ್ಸಿನಲ್ಲೂ ಈಕೆ ಮನೆಯಿಂದ ಬಹುತೇಕ ಹೊರಗಿದ್ದು ಪುತ್ರ ದಯಾನಂದ್ ಸಿಂಗ್ ಜೊತೆಯಲ್ಲಿ ತೆರಳಿ ಸಾರ್ವಜನಿಕರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸುತ್ತಾರೆ. 

ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಜನರ ಬಗ್ಗೆ ಮನೆಯಲ್ಲಿ ಅಜ್ಜಿ ಕಾಳಜಿ ವಹಿಸುವಂತೆ ನೋಡಿಕೊಳ್ಳುವುದರಿಂದ ಈಕೆ ದಾದಿ ಮುಖಿಯಾಬಿ ಎಂದೇ ಖ್ಯಾತಿ ಪಡೆದಿದ್ದಾರೆ.

ಊರ್ಮಿಳಾ ಅವರು ಬಿಹಾರದ ರೋಹ್ಟಾಸ್ ಜಿಲ್ಲೆಯ ಹಥಿನಿ ಪಂಚಾಯಿತಿಯ ಮುಖ್ಯಸ್ಥರಾಗಿದ್ದು, ಈ ಪಂಚಾಯಿತಿ ಸೆ.24 ರಂದು 6 ಪದವಿಗಳಿಗೆ, ಪಂಚಾಯಿತಿ ಮುಖ್ಯಸ್ಥರ ಪದವಿಯೂ(ಮುಖಿಯಾ) ಇದೆ

ಮಹಿಳಾ ಮುಖಿಯರಾಗಿ ಊರ್ಮಿಳಾ ನೇಮಕವಾದಾಗ ಅವರಿಗೆ ಭರ್ತಿ 85 ವರ್ಷಗಳು! ಆಕೆ ಜನರೊಂದಿಗೆ ಹೊಂದಿದ್ದ ಸಂಪರ್ಕ, ಸಾರ್ವಜನಿಕ ಸೇವೆಯಲ್ಲಿದ್ದ ಆಸಕ್ತಿಯನ್ನು ಕಂಡು ಆಕೆಯನ್ನು ಆ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. "ನನಗೆ 90 ವರ್ಷಗಳಾಗುತ್ತಿದೆ. ಆದರೂ ನಾನು ನನ್ನ ಪಂಚಾಯತ್ ನ ಜನರ ಬಗ್ಗೆ ಮನೆಯ ಸದಸ್ಯರಂತೆ ಕಾಳಜಿ ವಹಿಸಬೇಕಿದೆ" ಎನ್ನುತ್ತಾರೆ ಊರ್ಮಿಳಾ.

"ಯಾವುದೇ ಸಮಸ್ಯೆ ಎದುರಾದಲ್ಲಿ, ಮನೆಯ ಹಿರಿಯ ಸದಸ್ಯರು ಅದನ್ನು ಬಗೆಹರಿಸುವ ರೀತಿಯಲ್ಲಿ ಸ್ಥಳಕ್ಕೆ ತೆರಳಿ ನಿಭಾಯಿಸುತ್ತಿದ್ದೆ" ಎನ್ನುವ ಊರ್ಮಿಳಾ ಓದಿರುವುದು ಕೇವಲ 7 ನೇ ತರಗತಿಯಷ್ಟೇ. ಆದರೆ ಸರ್ಕಾರದ ಜನ ಕಲ್ಯಾಣಕ್ಕಾಗಿ ಇರುವ ಎಲ್ಲಾ ಯೋಜನೆಗಳ ಬಗ್ಗೆಯೂ ಮಾಹಿತಿ ಹೊಂದಿರುವ "ಊರ್ಮಿಳಾ ಮಳೆಗಾಲದಲ್ಲಿ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ನೀವು ಶೂ ಧರಿಸಿ ಎಲ್ಲಾದರೂ ಅಡ್ಡಾಡಬಹುದು ಆದರೆ ನಿಮ್ಮ ಶೂ ಗಳಿಗೆ ಮಣ್ಣು ಅಂಟಿಕೊಳ್ಳುವುದಿಲ್ಲ ಆ ರೀತಿ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದಾರೆ" ಎಂದು ದಯಾನಂದ ಸಿಂಗ್ ಹೇಳುತ್ತಾರೆ.  

ನಮ್ಮ ದಾದಿ ಮುಖಿಯಾ ಮಹಿಳೆಯರ ಸಬಲೀಕರಣಕ್ಕೆ ಉದಾಹರಣೆ, ಪ್ರತಿ ದಿನ ಹಲವಾರು ಕಿಲೋಮೀಟರ್ ಸಂಚರಿಸುತ್ತಾರೆ. ಕೋವಿಡ್ ಪರಿಹಾರ ಯೋಜನೆಯನ್ನು ಜನರಿಗೆ ತಲುಪಿಸುವುದರಲ್ಲೂ ಅವರು ಸಕ್ರಿಯರಾಗುತ್ತಿದ್ದರು ಎನ್ನುತ್ತಾರೆ ಕ್ಷೇತ್ರದ ಮತದಾರರಾದ ಪ್ರೇಮಾ ದೇವಿ 
 

SCROLL FOR NEXT