ವಿಶೇಷ

ಗದಗ: ವಿದ್ಯಾರ್ಥಿಗಳನ್ನು ತಲುಪಲು ವಿಡಿಯೊ ಮಾರ್ಗ ಕಂಡುಕೊಂಡ ಶಿಕ್ಷಕ!

Lingaraj Badiger

ಗದಗ: ಕೋವಿಡ್ -19 ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ 52 ವರ್ಷದ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ತಮ್ಮ ವಿದ್ಯಾರ್ಥಿಗಳು ತರಗತಿಗಳನ್ನು ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಅವರನ್ನು ತಲುಪಲು ವಿಡಿಯೋ ಮಾರ್ಗ ಕಂಡುಕೊಂಡಿದ್ದಾರೆ.

ಗದಗ ಪಟ್ಟಣದ ಎಸ್.ಎಂ.ಕೃಷ್ಣ ನಗರದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರಾದ ವಿವೇಕಾನಂದಗೌಡ ಪಾಟೀಲ್ ಅವರು ಅಸಂಖ್ಯಾತ ವಿಷಯಗಳ ಕುರಿತು ಕಿರು ವೀಡಿಯೋಗಳನ್ನು ತಯಾರಿಸುತ್ತಿದ್ದಾರೆ. ಸಣ್ಣ ಕಥೆಳು, ಪತ್ರ ಬರೆಯುವಿಕೆಯಿಂದ ಪ್ರಸ್ತುತ ವಿಷಯಗಳವರೆಗೆ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಡಿಯೋ ಮೂಲಕ ಮಾಹಿತಿ ನೀಡುತ್ತಿದ್ದಾರೆ.

ವಿವೇಕಾನಂದಗೌಡ ಪಾಟೀಲ್ ಅವರ ಯೂಟ್ಯೂಬ್ ಚಾನೆಲ್ 2,91,000 ಚಂದಾದಾರರನ್ನು ಹೊಂದಿದೆ. ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ವೀಡಿಯೊಗಳನ್ನು ಒದಗಿಸುತ್ತಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಶಾಲೆಗಳು ಬಂದ್ ಆಗಿದ್ದರಿಂದ ಪಾಟೀಲ್ ಅವರು 15 ದಿನಗಳಲ್ಲಿಯೇ ವಿಡಿಯೊ ಎಡಿಟಿಂಗ್ ಮತ್ತು ಗ್ರಾಫಿಕ್ ಸಾಫ್ಟ್‌ವೇರ್‌ಗಳನ್ನು ಕಲಿತು ಸಣ್ಣ ಮಾಹಿತಿಯ ವಿಡಿಯೋ ಕ್ಲಿಪ್‌ಗಳನ್ನು ತಯಾರಿಸಲು ಪ್ರಾರಂಭಿಸಿದರು. ಅವರು ಇದಕ್ಕಾಗಿ ಲ್ಯಾಪ್ಟಾಪ್, ಕ್ಯಾಮರಾ ಮತ್ತು ಇತರ ಸಲಕರಣೆಗಳಿಗೆ 1,10,000 ರೂ. ವೆಚ್ಚ ಮಾಡಿದ್ದಾರೆ. 

ವೀಡಿಯೊಗಳು ಗ್ರಾಫಿಕ್ಸ್‌ನೊಂದಿಗೆ ಬರುತ್ತವೆ, ಇದು ನಮಗೆ ಸಂಕೀರ್ಣ ಪಾಠಗಳನ್ನು, ಕವಿತೆಗಳನ್ನು ಮತ್ತು ಇತರ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸುಲಭವಾಗಿಸುತ್ತದೆ. ಪಾಟೀಲರು ತಮ್ಮ ವಿಡಿಯೊಗಳನ್ನು ಹೆಚ್ಚು ಹೆಚ್ಚು ವಿದ್ಯಾರ್ಥಿಗಳಿಗೆ ತಲುಪಿಸುವುದೇ ಅವರ ಉದ್ದೇಶವಾಗಿದೆ ಎಂದು ಸರ್ಕಾರಿ ಶಾಲೆಯ ಅವರ ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

"ಕೋವಿಡ್‌ನ ಮೊದಲ ಅಲೆಯಲ್ಲಿ ವಿದ್ಯಾರ್ಥಿಗಳು ಸುಮ್ಮನೆ ಕುಳಿತಿದ್ದಾಗ ನಾನು ನನ್ನ ಚಾನೆಲ್ ಅನ್ನು ಪ್ರಾರಂಭಿಸಿದೆ. ನನ್ನ ವಿಡಿಯೋಗಳು ಅನೇಕರನ್ನು ಆಕರ್ಷಿಸಿರುವುದಕ್ಕೆ ನನಗೆ ಸಂತೋಷವಾಗಿದೆ. ನಾನು ವೀಡಿಯೊಗಳನ್ನು ಮಾಡುವುದನ್ನು ಮುಂದುವರಿಸುತ್ತೇನೆ, ”ಎಂದು ಪಾಟೀಲ್ ಅವರು ತಿಳಿಸಿದ್ದಾರೆ.

SCROLL FOR NEXT