ಶಿಕ್ಷಕ ಸುರೇಂದ್ರ ಸಮಗಾರ 
ವಿಶೇಷ

ಆನ್ ಲೈನ್ ಲ್ಲಿ ಮಕ್ಕಳಿಗೆ ಆಸಕ್ತಿದಾಯಕವಾಗಿ ಪಾಠ ಹೇಳಿಕೊಡುವುದು ಹೇಗೆ? ಸುರೇಂದ್ರ ಸಮಗಾರ ಕಂಡುಕೊಂಡ ಐಡಿಯಾ ಇದು!

ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಶಾಲೆಗಳು ಇನ್ನೂ ಸರಿಯಾಗಿ ಆರಂಭವಾಗಿಲ್ಲ, ಸಣ್ಣ ಮಕ್ಕಳು ಶಾಲೆಯ ಮುಖ ನೋಡದೆ ಒಂದೂವರೆ ವರ್ಷ ಮೇಲಾಯಿತು. ಮಕ್ಕಳು ಆನ್ ಲೈನ್ ಆಸಕ್ತಿಯಿಂದ ಪಾಠ ಕೇಳುವುದು ಇಷ್ಟೇ ಇದೆ, ಪೋಷಕರು ಮಕ್ಕಳ ಸ್ಥಿತಿ ಕಂಡು ಗೋಳಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನು ಕಲಿಕೆಯ ಮೇಲೆ ಆಸಕ್ತಿ ಮೂಡುವಂತೆ ಮಾಡುವುದು ಹೇಗೆ? 

ಉಡುಪಿ: ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಶಾಲೆಗಳು ಇನ್ನೂ ಸರಿಯಾಗಿ ಆರಂಭವಾಗಿಲ್ಲ, ಸಣ್ಣ ಮಕ್ಕಳು ಶಾಲೆಯ ಮುಖ ನೋಡದೆ ಒಂದೂವರೆ ವರ್ಷ ಮೇಲಾಯಿತು. ಮಕ್ಕಳು ಆನ್ ಲೈನ್ ಆಸಕ್ತಿಯಿಂದ ಪಾಠ ಕೇಳುವುದು ಇಷ್ಟೇ ಇದೆ, ಪೋಷಕರು ಮಕ್ಕಳ ಸ್ಥಿತಿ ಕಂಡು ಗೋಳಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನು ಕಲಿಕೆಯ ಮೇಲೆ ಆಸಕ್ತಿ ಮೂಡುವಂತೆ ಮಾಡುವುದು ಹೇಗೆ? 

ಈ ಪರಿಸ್ಥಿತಿಯ ನಡುವೆ ಉತ್ಸಾಹ ಮತ್ತು ಪಾಠ ಕಲಿಸುವ ಶಕ್ತಿಯನ್ನು ಉಳಿಸಿಕೊಂಡಿರುವ ಕೆಲವು ಶಿಕ್ಷಕರು ನಮ್ಮ ಸುತ್ತ ಸಿಗುತ್ತಾರೆ, ಅಂತವರಲ್ಲಿ ಉಡುಪಿ ಮೂಲದ ಸುರೇಂದ್ರ ಸಮಗಾರ ಒಬ್ಬರು.

ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಸುರೇಂದ್ರ ಅವರು ಕಳೆದ 13 ವರ್ಷಗಳಿಂದ ಬೆಂಗಳೂರು ದಕ್ಷಿಣದಲ್ಲಿರುವ ಮಾಗಡಿ ರಸ್ತೆಯ ಶ್ರೀ ಸಿದ್ದಲಿಂಗೇಶ್ವರ ಹೈಸ್ಕೂಲ್ ನಲ್ಲಿ ಸಮಾಜ ವಿಜ್ಞಾನ ಪಾಠ ಹೇಳಿಕೊಡುತ್ತಿದ್ದಾರೆ. ಕೊರೋನಾ ಸಾಂಕ್ರಾಮಿಕ ಬಂದ ಮೇಲೆ ಎಲ್ಲ ಕಡೆ ಮಕ್ಕಳಿಗೆ ಆನ್ ಲೈನ್ ಕ್ಲಾಸು, ಇಂತಹ ಸಂದರ್ಭದಲ್ಲಿ ಸಮಾಜ ವಿಜ್ಞಾನದಂತಹ ವಿಷಯಗಳಲ್ಲಿ ಮಕ್ಕಳು ಆಸಕ್ತಿಯಿಂದಿರಲು ವಿದ್ಯಾರ್ಥಿಗಳಿಗೆ ಕೇವಲ ಪಾಠ ಮಾಡಿ ಬಿಟ್ಟರೆ ಸಾಕಾಗುವುದಿಲ್ಲ, ಅದಕ್ಕಿಂತ ಹೆಚ್ಚು ಹೇಳಿಕೊಡಬೇಕು ಎಂದು ಅರಿತುಕೊಂಡರು ಸುರೇಂದ್ರ.

ಶಿಕ್ಷಕ ಸುರೇಂದ್ರ ಮಾಡಿದ್ದೇನು?: ಈಗ ಎಲ್ಲ ಕಡೆ ಸೋಷಿಯಲ್ ಮೀಡಿಯಾ, ಯೂಟ್ಯೂಬ್ ಹವಾ, ಕೊರೋನಾ ಲಾಕ್ ಡೌನ್ ಸಮಯದಲ್ಲಿ 'Surendra Guddehotel' ಎಂಬ ಯೂಟ್ಯೂಬ್ ಚಾನೆಲ್ ನ್ನು ಆರಂಭಿಸಿದರು. ಅದರಲ್ಲಿ ತಮ್ಮ ವಿರಾಮದ ಅವಧಿಯಲ್ಲಿ ಪಾಠಗಳನ್ನು, ಅದಕ್ಕೆ ಪೂರಕ ವಿಷಯಗಳು, ಚಿತ್ರಗಳನ್ನು ಅಪ್ ಲೋಡ್ ಮಾಡಿದರು. ಚಾನೆಲ್ ಗಿಂದು 2 ಸಾವಿರ ಬಳಕೆದಾರರಿದ್ದು ಸುರೇಂದ್ರ ಅವರ ಪಾಠ ಮಾಡುವ ಶೈಲಿಯನ್ನು ವಿದ್ಯಾರ್ಥಿಗಳು ಮೆಚ್ಚಿಕೊಂಡಿದ್ದಾರೆ. ಅಪ್ಪ ಮಾಡುವ ಪಾಠವನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಲು ಸುರೇಂದ್ರ ಅವರಿಗೆ ಅವರ ಏಳು ವರ್ಷದ ಮಗ ಸಹಾಯ ಮಾಡುತ್ತಾನಂತೆ.

ಕೇವಲ ಪಾಠವನ್ನು ಮಕ್ಕಳಿಗೆ ಹೇಳಿಕೊಟ್ಟು ಬಿಡುವುದು ಮಾತ್ರ ನನ್ನ ಕೆಲಸವಲ್ಲ, ಮಕ್ಕಳ ಮುಖದಲ್ಲಿ ಖುಷಿಯ ನಗೆ ಮೂಡಬೇಕು ಎಂದು ಹೇಳುವ ಸುರೇಂದ್ರ ಅವರು 10ನೇ ತರಗತಿ ಮಕ್ಕಳಿಗೆ ಯೂಟ್ಯೂಬ್ ನಲ್ಲಿ 27ಕ್ಕಿಂತ ಹೆಚ್ಚು ತರಗತಿಗಳನ್ನು ತೆಗೆದುಕೊಂಡಿದ್ದಾರೆ. ಮಕ್ಕಳಿಗೂ ಸುರೇಂದ್ರ ಅವರ ಕಲಿಕೆಯ ಶೈಲಿ ಇಷ್ಟವಾಗುತ್ತಿದೆ.

ಬೆಂಗಳೂರಿನ 10ನೇ ತರಗತಿ ವಿದ್ಯಾರ್ಥಿ ಸತೀಶ್, ಸುರೇಂದ್ರ ಸರ್ ರಿಂದ ಕಲಿಕೆ ಮತ್ತು ಮಾರ್ಗದರ್ಶನ ಎರಡನ್ನೂ ಪಡೆಯುತ್ತೇನೆ, ಅವರು ನಮಗೆ ಶಿಕ್ಷಕರಾಗಿ, ಮಾರ್ಗದರ್ಶಕರಾಗಿ ಸಿಕ್ಕಿದ್ದು ಪುಣ್ಯ ಎನ್ನುತ್ತಾನೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT