ವಿಶೇಷ

ಕರಾಟೆಯಲ್ಲಿ ಹೆಚ್ಚಿನ ಸಾಧನೆ ಮಾಡುವ ಹಂಬಲದಲ್ಲಿ ಅಂಕಿತಾ!

Nagaraja AB

ಮಡಿಕೇರಿ: ಭಾರತ ಕ್ರಿಕೆಟ್ ಜನಪ್ರಿಯತೆಯ ರಾಷ್ಟ್ರ ಎಂಬುದರಲ್ಲಿ ಯಾವುದೇ ಮುಚ್ಚು ಮರೆ ಇಲ್ಲ. ಆದರೆ, ಇತರ ಕ್ರೀಡಾಪಟುಗಳು ಕೂಡಾ, ತಮ್ಮಲ್ಲಿರುವ ಪ್ರತಿಭೆಯನ್ನು ಹೊರಗೆ ತರಲು ಪ್ರಯತ್ನಿಸುತ್ತಿದ್ದಾರೆ. ಇತ್ತೀಚಿಗೆ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ 2020ರಲ್ಲಿ ಕಡಿಮೆ ಜನಪ್ರಿಯತೆ ಇರುವ  ಕ್ರೀಡೆಗಳಲ್ಲಿ ಭಾರತೀಯ ತ್ರಿವರ್ಣ ಧ್ವಜ ಹಲವು ಬಾರಿ ಹಾರಾಡುವ ಮೂಲಕ ಭಾರತೀಯರು ಯಶಸ್ವಿಯಾಗಿದ್ದಾರೆ. ಇಂತಹ ಕ್ರೀಡೆಗಳಲ್ಲಿ ಮಡಿಕೇರಿಯ ಬಿಟಿ ಅಂಕಿತಾ ಕೂಡಾ ಒಬ್ಬರಾಗಿದ್ದಾರೆ. 

ಕರಾಟೆಯಲ್ಲಿ ಈಗಾಗಲೇ ಜ್ಯೂನಿಯರ್ ಬ್ಲಾಕ್ ಬೆಲ್ಟ್ ಆಗಿರುವ 21 ವರ್ಷದ ಅಂಕಿತಾ, ದೊಡ್ಡ ಕನಸು ಹೊಂದಿದ್ದಾರೆ. ಆಕೆಗೆ ಮಾತ್ರ ಇಲ್ಲ, ಆದರೆ, ಇಡೀ ದೇಶಕ್ಕಾಗಿ. ಒಂಬತ್ತು ವರ್ಷ ಇದ್ದಾಗಿನಿಂದಲೂ ಆಕೆ ಕರಾಟೆಯನ್ನು ಆರಂಭಿಸಿದ್ದಾರೆ. ಕರಾಟೆ ಯಾವಾಗಲೂ ಸವಾಲಿನಿಂದ ಕೂಡಿರುತ್ತದೆ. ತರಬೇತಿಯೊಂದಿಗೆ ಅದನ್ನು ಪ್ರಾರಂಭಿಸಿದ್ದಾಗಿ ಆಕೆ ನೆನಪು ಮಾಡಿಕೊಳ್ಳುತ್ತಾರೆ. ಅನೇಕ ಹುಡುಗಿಯರು ಕರಾಟೆ ತರಬೇತಿ ಪಡೆಯಲು ಹಿಂಜರಿಕೆ ಪಡಬಾರದು ಎಂದು ಅವರು ಹೇಳುತ್ತಾರೆ.  

ಬೆಂಗಳೂರಿನ ಫೀನಿಕ್ಸ್ ಅಕಾಡೆಮಿ ಇಂಡಿಯಾದಲ್ಲಿ ತರಬೇತಿ ಪಡೆಯುತ್ತಿರುವ ಅಂಕಿತಾ ಅವರು 8 ನೇ ತರಗತಿಯಲ್ಲಿದ್ದಾಗ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಪಾದಾರ್ಪಣೆ ಮಾಡಿದ್ದರು. ಅಂದಿನಿಂದ, ಅವರು 2015 ರಲ್ಲಿ ಆಲ್-ಇಂಡಿಯನ್ ಇಂಡಿಪೆಂಡೆನ್ಸ್ ಕಪ್, 2016 ರಲ್ಲಿ ಬೆಂಗಳೂರು ಓಪನ್ ಕರಾಟೆ ಚಾಂಪಿಯನ್‌ಶಿಪ್, 2016 ರಲ್ಲಿ ಗೋವಾದಲ್ಲಿ ಆಲ್-ಇಂಡಿಯಾ ಇಂಡಿಪೆಂಡೆನ್ಸ್ ಕಪ್, ಆಲ್-ಇಂಡಿಯನ್ ಕಪ್, 2017 ರಲ್ಲಿ ಆಲ್-ಇಂಡಿಯನ್ ಸ್ಪೋರ್ಟ್ಸ್ ಎಕ್ಸ್‌ಟ್ರಾವಗಾಂಜಾ ವಿಐಎ. 2017 ರಲ್ಲಿ ಇಂಟರ್‌ಕಾಲೇಜಿಯೇಟ್ ಕರಾಟೆ ಚಾಂಪಿಯನ್‌ಶಿಪ್, ಕೆಎಐ ನ್ಯಾಷನಲ್ಸ್ ಸೇರಿದಂತೆ ಸಾಕಷ್ಟು ಟಾಂಪಿಯನ್ ಶಿಪ್ ಗಳಲ್ಲಿ ಭಾಗವಹಿಸಿ, ಅನೇಕ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದಿದ್ದಾರೆ.

ಅಂತಾರಾಷ್ಟ್ರೀಯ ಒಲಂಪಿಕ್ ಸಮಿತಿಯಿಂದ ಕರಾಟೆ ಮಾನ್ಯತೆ ಮಾಡಿದ್ದರೂ ಭಾರತೀಯ ಒಲಂಪಿಕ್ ಅಸೋಸಿಯೇಷನ್ ನಿಂದ ಮಾನ್ಯತೆ ಸಿಕ್ಕಿಲ್ಲ. ಆದಾಗ್ಯೂ, ವಿಶ್ವ ಚಾಂಪಿಯನ್ ಶಿಪ್ ಮತ್ತಿತರ ಏಷಿಯನ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಆಥ್ಲೀಟ್ ಗಳನ್ನು ಕರಾಟೆ ಇಂಡಿಯಾ ಸಂಸ್ಥೆ ಬೆಂಬಲಿಸುತ್ತಿದೆ. ಇತರ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ತಮ್ಮ ಸ್ವಂತ ಖರ್ಚಿನಿಂದ ಪಾಲ್ಗೊಳ್ಳುತ್ತಿರುವುದಾಗಿ ಅಂಕಿತಾ ತಿಳಿಸಿದ್ದಾರೆ. ಅಂಕಿತಾ ಅಖಿಲ ಕರ್ನಾಟಕ ಕ್ರೀಡಾ ಕರಾಟೆ ಅಸೋಸಿಯೇಷನ್ ಮಹಿಳಾ ಕ್ರೀಡಾ ಆಯೋಗದ ಉಪಾಧ್ಯಕ್ಷೆಯೂ ಆಗಿದ್ದಾರೆ. 

ಆಗಸ್ಟ್ 19 ರಿಂದ ಥೈಲ್ಯಾಂಡ್ ನಲ್ಲಿ ಆರಂಭವಾಗಿರುವ ಓಪನ್ ಕರಾಟೆ ಡೂ ಚಾಂಪಿಯನ್ ಶಿಪ್ ನಲ್ಲಿ ಆಕೆ ಪಾಲ್ಗೊಂಡಿದ್ದಾರೆ. ನಿರಂತರವಾಗಿ ಅಭ್ಯಾಸ ಮಾಡುತ್ತೇನೆ. ಹೆಚ್ಚಿನ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಬೇಕೆಂಬುದು ತನ್ನ ಹಂಬಲವಾಗಿದೆ. ಸೆಪ್ಟೆಂಬರ್ ನಲ್ಲಿ ಟರ್ಕಿ ಹಾಗೂ ಇಂಡೋನೇಷ್ಯಾದ ಜಕಾರ್ತದಲ್ಲಿ ಆರಂಭವಾಗಲಿರುವ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳಲು ಎದುರು ನೋಡುತ್ತಿರುವುದಾಗಿ ಆಕೆ ತಿಳಿಸಿದ್ದಾರೆ. ಸ್ವಯಂ ರಕ್ಷಣೆಗಾಗಿ ಹುಡುಗಿಯರಿಗೆ ಶಿಕ್ಷಣ ನೀಡಲು ಬಯಸುವ ಅಂಕಿತಾ, ಕರಾಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತೊಡಗಿಸಿಕೊಳ್ಳಲು ಪ್ರೇರಿಸಬೇಕಾಗಿದೆ ಎನ್ನುತ್ತಾರೆ. 

SCROLL FOR NEXT