ತ್ರಿಶೂರ್‌ನ ಅಕಾಡೆಮಿ ಆಫ್ ಷರಿಯಾ ಅಡ್ವಾನ್ಸ್‌ಡ್ ಸ್ಟಡೀಸ್‌ನ ವಿದ್ಯಾರ್ಥಿಗಳೊಂದಿಗೆ ಓಂಪಿಲ್ಲಿ ಮುಹಮ್ಮದ್ ಫೈಜಿ ಸಂವಾದ 
ವಿಶೇಷ

ಕೇರಳ ಮೂಲದ ಈ ಇಸ್ಲಾಮ್ ಸಂಸ್ಥೆಯ ಪಠ್ಯದಲ್ಲಿ ಭಗವದ್ಗೀತೆ, ಸಂಸ್ಕೃತ ಪಾಠ!

ಧರ್ಮ ಸಮನ್ವಯತೆ, ಅನ್ಯಧರ್ಮವನ್ನು ಗೌರವಿಸುವ, ಪ್ರೀತಿಸುವುದಕ್ಕೆ ಇದು ಮತ್ತೊಂದು ಉದಾಹರಣೆ. ಕೇರಳ ರಾಜ್ಯದ ಪಾಲಕ್ಕಾಡ್‌ನ ಪಟ್ಟಾಂಬಿ ಮೂಲದ ರಿನ್ಶಾದ್ ಸಿ ಪಿ ಅವರು ಇಸ್ಲಾಮಿಕ್ ಷರಿಯಾ ಕುರಿತು ಕೋರ್ಸ್ ಮಾಡುತ್ತಿದ್ದಾರೆ. ಅದರ ಜೊತೆಗೆ ಅವರು ಸಂಸ್ಕೃತವನ್ನು ಕಲಿಯುತ್ತಿದ್ದು, ಉಪನಿಷತ್ತುಗಳು, ಅದ್ವೈತ ತತ್ವಶಾಸ್ತ್ರ ಮತ್ತು ಭಗವದ್ಗೀತೆಯ ಬಗ್ಗೆ ತರಗತಿಗಳನ್ನು ತೆಗೆದುಕ

ಕೋಝಿಕೋಡ್: ಧರ್ಮ ಸಮನ್ವಯತೆ, ಅನ್ಯಧರ್ಮವನ್ನು ಗೌರವಿಸುವ, ಪ್ರೀತಿಸುವುದಕ್ಕೆ ಇದು ಮತ್ತೊಂದು ಉದಾಹರಣೆ. ಕೇರಳ ರಾಜ್ಯದ ಪಾಲಕ್ಕಾಡ್‌ನ ಪಟ್ಟಾಂಬಿ ಮೂಲದ ರಿನ್ಶಾದ್ ಸಿ ಪಿ ಅವರು ಇಸ್ಲಾಮಿಕ್ ಷರಿಯಾ ಕುರಿತು ಕೋರ್ಸ್ ಮಾಡುತ್ತಿದ್ದಾರೆ. ಅದರ ಜೊತೆಗೆ ಅವರು ಸಂಸ್ಕೃತವನ್ನು ಕಲಿಯುತ್ತಿದ್ದು, ಉಪನಿಷತ್ತುಗಳು, ಅದ್ವೈತ ತತ್ವಶಾಸ್ತ್ರ ಮತ್ತು ಭಗವದ್ಗೀತೆಯ ಬಗ್ಗೆ ತರಗತಿಗಳನ್ನು ತೆಗೆದುಕೊಳ್ಳುತ್ತಿರುವ ವಿಶೇಷ.

ರಿನ್ಶಾದ್ ಭಾರತೀಯ ತತ್ವಶಾಸ್ತ್ರ ಮತ್ತು ಹಿಂದೂ ಧರ್ಮಗ್ರಂಥಗಳನ್ನು ಅಧ್ಯಯನ ಮಾಡುತ್ತಿರುವುದು ಕೇವಲ ವೈಯಕ್ತಿಕ ಆಸಕ್ತಿಯಿಂದಲ್ಲ. ತ್ರಿಶೂರ್ ಮೂಲದ ಅಕಾಡೆಮಿ ಆಫ್ ಷರಿಯಾ ಮತ್ತು ಅಡ್ವಾನ್ಸ್ಡ್ ಸ್ಟಡೀಸ್ (ASAS) ನೀಡುವ ಇಸ್ಲಾಮಿಕ್ ಷರಿಯಾ ಕೋರ್ಸ್ ನ್ನು ಈ ರೀತಿ ವಿದ್ಯಾರ್ಥಿಗಳಿಗೆ ಸಿದ್ದಪಡಿಸಲಾಗಿದೆ. 

ಜನರು ತಮ್ಮ ಧರ್ಮ, ನಂಬಿಕೆಗಳಿಗಿಂತ ಭಿನ್ನವಾಗಿರುವ ನಂಬಿಕೆಗಳನ್ನು ಅಪಹಾಸ್ಯ ಮಾಡುವ ಈ ಹೊತ್ತಿನಲ್ಲಿ ಅನ್ಯಧರ್ಮದ ವಿಷಯಗಳನ್ನು ಕಲಿಯುವುದರಿಂದ ವ್ಯಕ್ತಿಯ ಜ್ಞಾನವನ್ನು ಹೇಗೆ ವಿಸ್ತರಿಸಬಹುದು ಎಂಬುದನ್ನು ವಿಸ್ತರಿಸುತ್ತದೆ ಎಂಬುದನ್ನು ASAS ತೋರಿಸುತ್ತದೆ. ಹೀಗಾಗಿ ಇತರ ಇಸ್ಲಾಮಿಕ್ ಸಂಸ್ಥೆಗಳಿಂದ ಇದು ಪ್ರತ್ಯೇಕ ಸ್ಥಾನದಲ್ಲಿ ನಿಲ್ಲುತ್ತದೆ. ಮಲಿಕ್ ಬಿನ್ ದಿನಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್ ಈ ಸಂಸ್ಥೆಯನ್ನು ನಡೆಸಿಕೊಂಡು ಹೋಗುತ್ತಿದ್ದು, ಸುನ್ನಿ ಸಂಘಟನೆಯಾದ ಸಮಸ್ತ ಕೇರಳ ಜಮ್-ಇಯ್ಯತುಲ್ ಉಲೇಮಾದ ನಿರ್ವಹಣೆಯಲ್ಲಿದೆ.

ಸ್ವತಃ ಸಂಸ್ಕೃತ ವಿದ್ವಾಂಸರಾದ ಎರ್ನಾಕುಲಂ ಜಿಲ್ಲಾ ಕಾರ್ಯದರ್ಶಿ ಓಂಪಿಲ್ಲಿ ಮುಹಮ್ಮದ್ ಫೈಝಿ ಅವರು ASAS ನ ಹಿಂದಿನ ರೂಪಕ ಶಕ್ತಿಯಾಗಿದ್ದಾರೆ. ಇಲ್ಲಿ, ನಾವು ನಮ್ಮ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯ ಶ್ರೀಮಂತ ವೈವಿಧ್ಯತೆಯ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸುತ್ತೇವೆ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸಕಾರಾತ್ಮಕ ಮನೋಭಾವವನ್ನು ಬೆಳೆಸಲು ಪ್ರಯತ್ನಿಸುತ್ತೇವೆ ಎಂದು ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಫೈಜಿ ಹೇಳುತ್ತಾರೆ. ಇವರು ಕಾಲಡಿಯ ಶ್ರೀ ಶಂಕರ ಕಾಲೇಜಿನಿಂದ ಅದ್ವೈತದಲ್ಲಿ ಸ್ನಾತಕೋತ್ತರ ಶಿಕ್ಷಣ ಗಳಿಸಿದ್ದಾರೆ.

ಕೇವಲ ಇಸ್ಲಾಮಿಕ್ ಪರಿಭಾಷೆಯನ್ನು ತಿಳಿದುಕೊಳ್ಳುವುದರಿಂದ ಮುಸ್ಲಿಂ ವಿದ್ಯಾರ್ಥಿಗಳಿಗೆ ಅಡ್ಡಿಯಾಗುತ್ತದೆ: ಫೈಜಿ
ಸಿಧರೂಪದಿಂದ ಆರಂಭವಾಗಿ ಸಂಸ್ಕೃತವನ್ನು ವ್ಯವಸ್ಥಿತ ರೀತಿಯಲ್ಲಿ ಕಲಿಸಲಾಗುತ್ತದೆ. ಅದನ್ನು ಕಲಿಯಲು ಹೆಚ್ಚು ಆಸಕ್ತಿ ಹೊಂದಿರುವವರನ್ನು ಉನ್ನತ ಮಟ್ಟಕ್ಕೆ ಕಳುಹಿಸಲಾಗುತ್ತದೆ. ಸಂಸ್ಕೃತ ವಿದ್ವಾಂಸರಾದ ಕೆ ಪಿ ನಾರಾಯಣ ಪಿಶಾರೋಡಿಯವರ ಶಿಷ್ಯರಾದ ಯತೀಂದ್ರನ್ ಅವರು ನಮ್ಮ ಅಧ್ಯಾಪಕರಲ್ಲಿ ಒಬ್ಬರು. ನಾನು ಭಗವದ್ಗೀತೆಯನ್ನು ಕಲಿಸುತ್ತೇನೆ ಎಂದು ಫೈಜಿ ಹೇಳುತ್ತಾರೆ. 

ASAS ನಿಯಮಿತವಾಗಿ ಸಂಸ್ಕೃತದ ಕಾರ್ಯಾಗಾರಗಳನ್ನು ನಡೆಸಿ ಸಂಸ್ಕೃತದಲ್ಲಿ ಮಾತನಾಡುವ ಬಗ್ಗೆ ಬೋಧಿಸಲಾಗುತ್ತದೆ. ಇಸ್ಲಾಮಿಕ್ ವಿಷಯಗಳನ್ನು ಅಧ್ಯಯನ ಮಾಡುವ ಮುಸ್ಲಿಂ ವಿದ್ಯಾರ್ಥಿಗಳು ಎದುರಿಸುತ್ತಿರುವ ಒಂದು ಅಡಚಣೆಯೆಂದರೆ ಅವರಿಗೆ ಇಸ್ಲಾಮಿಕ್ ಪರಿಭಾಷೆ ಮಾತ್ರ ತಿಳಿದಿದೆ. ಇದು ಸಮಾಜದ ಇತರ ವಿಭಾಗಗಳೊಂದಿಗೆ ಅವರ ಸಂವಹನದಲ್ಲಿ ಮಿತಿಗಳನ್ನು ಸೃಷ್ಟಿಸುತ್ತದೆ ಎನ್ನುತ್ತಾರೆ. 

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ವಿದ್ಯಾರ್ಥಿಗಳನ್ನು ಎಎಸ್‌ಎಎಸ್‌ಗೆ ಸೇರಿಸಲಾಗುತ್ತದೆ. ಎಂಟು ವರ್ಷಗಳ ಕೋರ್ಸ್ ನ್ನು ಪೂರ್ಣಗೊಳಿಸಿದ ನಂತರ, ಅವರು 'ಮಾಲಿಕಿ' ಎಂಬ ಧಾರ್ಮಿಕ ಪದವಿಯ ಜೊತೆಗೆ ವಿಶ್ವವಿದ್ಯಾನಿಲಯ ಪದವಿಯನ್ನು ಪಡೆಯುತ್ತಾರೆ. ಪದವಿ ಪದವಿಯನ್ನು ಕ್ಯಾಲಿಕಟ್ ವಿಶ್ವವಿದ್ಯಾಲಯದ ದೂರ ಶಿಕ್ಷಣದ ಅಡಿಯಲ್ಲಿ ನೀಡಲಾಗುತ್ತದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT