ವಿಶೇಷ

ಕೃಷಿ ಮಾಡಿ ಇತರರಿಗೆ ಮಾದರಿಯಾದ ಒಡಿಶಾದ ಮಹಿಳಾ ಸರಪಂಚ್

Vishwanath S

ಫುಲ್ಬಾನಿ(ಒಡಿಶಾ): ಕಂದಮಾಲ್ ಜಿಲ್ಲೆಯ ಫಿರಿಂಗಿಯಾ ಬ್ಲಾಕ್‌ನ ಮಹಿಳಾ ಸರಪಂಚ್ ಒಬ್ಬರು ತನ್ನ ಅಧಿಕೃತ ಕೆಲಸದ ನಡುವೆಯೂ ತನ್ನ ಸ್ಥಳೀಯ ಗ್ರಾಮವಾದ ಕುಟಿಬಾಡಿಯಲ್ಲಿ ಯಶಸ್ವಿಯಾಗಿ ತರಕಾರಿ ಕೃಷಿ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

2007, 2017 ಮತ್ತು 2022ರಲ್ಲಿ ಮೂರನೇ ಬಾರಿಗೆ ರತ್ನ ಗ್ರಾಮ ಪಂಚಾಯತ್‌ನ ಸರಪಂಚ್ ಆದ ನಂತರವೂ ಪಾರ್ವತಿ ಮಲ್ಲಿಕ್ ಅವರು ತರಕಾರಿ ಕೃಷಿಕ ಎಂಬ ತಮ್ಮ ಮೂಲ ಗುರುತನ್ನು ಉಳಿಸಿಕೊಂಡಿದ್ದಾರೆ. '2002ರಿಂದ 2007ರವರೆಗೆ ಸರಪಂಚ್ ಆಗಿದ್ದ ನನ್ನ ಪತಿ ರಜನಿಕಾಂತ್ ಅವರು ನನಗೆ ಕೃಷಿ ಮಾಡಲು ಪ್ರೇರೇಪಿಸಿದ್ದರು ಎಂದು ಹೇಳಿದ್ದಾರೆ. 

ನಾನು ಸರಪಂಚ್ ಆದ ನಂತರವೂ ಅದನ್ನು ಮುಂದುವರಿಸಿದ್ದೇನೆ. ನಾನು ಟೊಮೆಟೊ, ಹೂಕೋಸು, ಬದನೆ, ಬೀನ್ಸ್ ಮತ್ತು ಎಲೆಕೋಸು ಬೆಳೆಯುತ್ತೇನೆ. ಇದಕ್ಕೆ ನಯಾಗಢ್, ಬೌಧ್, ಗಂಜಾಂ ಮತ್ತು ಸೋನೆಪುರ್ ಜಿಲ್ಲೆಗಳಲ್ಲಿ ಬೇಡಿಕೆಯಿದೆ ಎಂದು ಪಾರ್ವತಿ ಹೇಳಿದರು. ಮುಂದೆಯೂ ಸರ್ಕಾರದಿಂದ ನೆರವು ಸಿಕ್ಕರೆ ತರಕಾರಿ ಕೃಷಿಯಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಪಾರ್ವತಿ ಹೇಳಿದ್ದಾರೆ.

SCROLL FOR NEXT