ವಿಶೇಷ

ಮುಂಬರುವ ದಿನಗಳಲ್ಲಿ 'ಸೌರಶಕ್ತಿ'ಯೇ ಭರವಸೆಯ ಬೆಳಕು ಹೇಗೆ ಎಂದು ತೋರಿಸಿಕೊಟ್ಟ ಹುಬ್ಬಳ್ಳಿಯ ಸಂಜಯ್ ದೇಶಪಾಂಡೆ

Sumana Upadhyaya

ಹುಬ್ಬಳ್ಳಿ: ಸೂರ್ಯನ ಬೆಳಕು ಜೀವಿಗಳ ಬದುಕಿಗೆ ಅತ್ಯಂತ ಅಮೂಲ್ಯ. ನಮಗೆ ಅಗತ್ಯವಾದ ಜೀವಸತ್ವಗಳಿಂದ ಹಿಡಿದು ಪರಿಸರವನ್ನು ಪೋಷಿಸುವವರೆಗೆ ಸೂರ್ಯನ ಬೆಳಕಿನಿಂದ ಸಿಗುತ್ತದೆ. 

ಹೆಚ್ಚುತ್ತಿರುವ ಜಾಗತಿಕ ತಾಪಮಾನವು ಹಲವು ರೀತಿಯಲ್ಲಿ ಭೂಮಿ ಮೇಲೆ ಮಾನವ ಜನಾಂಗದ ಮೇಲೆ ಪರಿಣಾಮ ಬೀರುತ್ತಿರುವ ಇತ್ತೀಚಿನ ವರ್ಷಗಳಲ್ಲಿ ಸೂರ್ಯನಿಂದ ಸಿಗುವ ಹೇರಳವಾದ ಶಕ್ತಿಯನ್ನು ಬಳಸಿ ನವೀಕರಿಸಲಾಗದ ಇಂಧನ ಮೂಲಗಳ ಬದಲಿಗೆ ಸೌರವಿದ್ಯುತ್ ಬಳಸುವುದು ಮುಂದಿನ ಮಾರ್ಗವಾಗಿದೆ. ಹುಬ್ಬಳ್ಳಿಯ 47 ವರ್ಷದ ಈ ಆರ್ಕಿಟೆಕ್ಟ್ ಸಂಜಯ್ ದೇಶಪಾಂಡೆ ಇಂದಿನ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. 

ಸಂಜಯ್ ತನ್ನ ಇಡೀ ಮನೆ ಮತ್ತು ಕಚೇರಿಗೆ ವಿದ್ಯುತ್ ನ ಅಗತ್ಯಗಳನ್ನು ಪೂರೈಸಲು ಸೌರ ಶಕ್ತಿಯನ್ನು ಬಳಸುತ್ತಾರೆ. ಪೆಟ್ರೋಲ್ ಬದಲಿಗೆ ಎಲೆಕ್ಟ್ರಿಕ್ ಕಾರನ್ನು ಓಡಿಸುತ್ತಾರೆ. ತಮ್ಮ ತೋಟಕ್ಕೆ ನೀರುಣಿಸಲು ಸೌರಶಕ್ತಿ ಚಾಲಿತ ಪಂಪ್‌ಗಳನ್ನು ಬಳಸುತ್ತಾರೆ. ಇವೆಲ್ಲವುಗಳಿಂದ ಅವರು ತಿಂಗಳಿಗೆ 18,000 ರೂಪಾಯಿಗಳನ್ನು ಉಳಿಸುತ್ತಾರಂತೆ. ಅವರು ಉತ್ಪಾದಿಸುವ ಸೌರಶಕ್ತಿಯನ್ನು ಮಾರಾಟ ಮಾಡುವ ಮೂಲಕ ವಿದ್ಯುತ್ ಸರಬರಾಜು ಕಂಪನಿಯಿಂದ 1 ಸಾವಿರ ರೂಪಾಯಿ ಪಡೆಯುತ್ತಾರೆ.

ಸಂಜಯ್ ಮುಂಬೈನಲ್ಲಿ ಓದುತ್ತಿದ್ದಾಗ ಅವರ ಸ್ನೇಹಿತರೊಬ್ಬರ ತಂದೆಯ ಭೇಟಿಯು ಉಚಿತ ಮತ್ತು ಹಸಿರು ಸೌರಶಕ್ತಿಯನ್ನು ಬಳಸುವಂತೆ ಪ್ರೇರೇಪಿಸಿತು. ಸುಡುವ ಸೂರ್ಯನ ಬೆಳಕಿನಿಂದ ಕೊಠಡಿಯನ್ನು ರಕ್ಷಿಸಲು ಕಿಟಕಿಯ ಹೊರಗೆ ಸೌರ ಫಲಕವನ್ನು ಇರಿಸಲು ಮತ್ತು ರಾತ್ರಿಯಿಡೀ ಯಾವುದೇ ಅಡ್ಡಿಯಿಲ್ಲದೆ ಫ್ಯಾನ್ ಚಲಾಯಿಸಲು ವಿದ್ಯುತ್ ಉತ್ಪಾದಿಸುವಂತೆ ಸ್ನೇಹಿತನ ತಂದೆ ಸಂಜಯ್‌ಗೆ ಸಲಹೆ ನೀಡಿದರು.

ಮೊದಲು ನಾನು 4 ಸಾವಿರ ರೂಪಾಯಿ ವಿದ್ಯುತ್ ಬಿಲ್ ಕಟ್ಟುತ್ತಿದ್ದೆ. ನನ್ನ ಬಳಿ ಎರಡು ಎಲೆಕ್ಟ್ರಿಕ್ ವಾಹನಗಳು, ಗೃಹೋಪಯೋಗಿ ಯಂತ್ರೋಪಕರಣಗಳು, ತಾರಸಿ ತೋಟಕ್ಕೆ ನೀರುಣಿಸಲು ಪಂಪ್‌ಗಳು, ಕಾರಂಜಿಗಳು ಇತ್ಯಾದಿಗಳಿವೆ. ಕಳೆದ ವರ್ಷ, ನಾನು ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಿದ್ದೆ. ಸರಾಸರಿ 4.2 ಕಿಲೋವ್ಯಾಟ್ ಸೌರಶಕ್ತಿ ಉತ್ಪಾದಿಸುವ ಸೋಲಾರ್ ಸಿಸ್ಟಮ್ ನ್ನು ಸ್ಥಾಪಿಸಲು ಅನುಮತಿ ಸಿಕ್ಕಿತು. ನಾನು ಬಳಸಿ ನಂತರ  ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಗೆ (ಹೆಸ್ಕಾಂ) ಸರಬರಾಜು ಮಾಡುತ್ತೇನೆ. ಹೆಸ್ಕಾಂ, ನನ್ನ ವಿದ್ಯುತ್ ಬಿಲ್ ಕಡಿತಗೊಳಿಸಿದ ನಂತರ ಪ್ರತಿ ತಿಂಗಳು 500ರಿಂದ ಸಾವಿರ ರೂಪಾಯಿ ನೀಡುತ್ತಾರೆ ಎಂದರು.

ತಮ್ಮ ಮನೆಯ ಕಿಟಕಿಗಳು ಮತ್ತು ಬಾಲ್ಕನಿಗಳಲ್ಲಿ ಸಣ್ಣ ಸೌರ ಫಲಕಗಳನ್ನು ಇರಿಸಿದ್ದಾರೆ, ಇದು ವರಾಂಡಾ ಮತ್ತು ಬೆಡ್ ಲ್ಯಾಂಪ್‌ಗಳನ್ನು ಬೆಳಗಿಸಲು ಸಣ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುತ್ತದೆ. ಸಂವೇದಕಗಳ ಸಹಾಯದಿಂದ ಮುಸ್ಸಂಜೆಯ ನಂತರ ಸ್ವಯಂಚಾಲಿತವಾಗಿ ಉರಿದು ವಿದ್ಯುತ್ ಬಳಕೆ ಕಡಿಮೆಯಾಗುತ್ತದೆ. 

ಆರು ತಿಂಗಳ ಹಿಂದೆ 3 ಕಿಲೋವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಯಾನೆಲ್ ಅಳವಡಿಸಿದ್ದು, ಅಂದಿನಿಂದ ಹೆಸ್ಕಾಂನಿಂದ ಪೂರೈಕೆಯಾಗುತ್ತಿದ್ದ ವಿದ್ಯುತ್ ಬಳಸದೇ ಪ್ರತಿ ತಿಂಗಳು ಮೀಟರ್ ಶುಲ್ಕ ಮಾತ್ರ ಪಾವತಿಸುತ್ತಿದ್ದಾರೆ. ಇವರ ಬಳಿ ಮೂರು ವಿಧದ ಸೌರ ಫಲಕಗಳಿವೆ ಅವು, ಮೊನೊಕ್ರಿಸ್ಟಲಿನ್, ಪಾಲಿಕ್ರಿಸ್ಟಲಿನ್ ಮತ್ತು ತೆಳುವಾದ ಫಿಲ್ಮ್. ನಾನು ಮೊನೊಕ್ರಿಸ್ಟಲಿನ್ ಪ್ಯಾನೆಲ್‌ಗಳನ್ನು ಅಳವಡಿಸಿದ್ದೇನೆ. ಅದು ಮಳೆಯ ಸಮಯದಲ್ಲಿಯೂ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ, ಶೇಕಡಾ 60ಕ್ಕಿಂತ ಹೆಚ್ಚು ಶಕ್ತಿಯನ್ನು ಉತ್ಪಾದಿಸುತ್ತದೆ ಎಂದರು.

ಪ್ರತಿದಿನ, ಸಂಜಯ್ ಅವರು ತಮ್ಮ ಕೆಲಸ ಕಾರ್ಯಗಳಿಗೆ 50 ರಿಂದ 60 ಕಿ.ಮೀ ಪ್ರಯಾಣಿಸುತ್ತಾರೆ. ಅವರ ಪತ್ನಿ ಕೂಡ ಕಚೇರಿಗೆ ಹೋಗಲು ಎಲೆಕ್ಟ್ರಿಕ್ ಕಾರ್ ಬಳಸುತ್ತಾರೆ. ಮೊದಲು ಅವರ ತಿಂಗಳ ಇಂಧನ ವೆಚ್ಚ ಸುಮಾರು 18,000 ರೂಪಾಯಿ ಬರುತ್ತಿದ್ದರೆ. ಇತ್ತೀಚೆಗೆ, ಅವರು ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಹಣ ಉಳಿತಾಯವಾಗುತ್ತಿದೆ. 

ಹುಬ್ಬಳ್ಳಿ-ಧಾರವಾಡದಲ್ಲಿ ಹೊಸ ನಿರ್ಮಾಣಗಳಲ್ಲಿ ಹಸಿರು ಕಲ್ಪನೆಗಳನ್ನು ಅನುಷ್ಠಾನಗೊಳಿಸುವುದರ ಜೊತೆಗೆ, ಸೌರಶಕ್ತಿಯನ್ನು ಉತ್ತೇಜಿಸಲು ಸರ್ಕಾರದಿಂದ ಸಬ್ಸಿಡಿಗಳನ್ನು ನೀಡಲು ಸರ್ಕಾರದ ಮೇಲೆ ಪ್ರಭಾವ ಬೀರಲು ಸಂಜಯ್ ಪ್ರಯತ್ನಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.

ರೈತರು ಮತ್ತು ಬಡವರಿಗೆ ಉಚಿತ ವಿದ್ಯುತ್ ನೀಡುವ ಬದಲು, ಸರ್ಕಾರವು ಅವರಿಗೆ ಸೌರಶಕ್ತಿ ಉತ್ಪಾದಿಸುವ ಸಾಧನಗಳನ್ನು ಒದಗಿಸಬೇಕು, ಇದು ಒಂದು ಬಾರಿ ಹೂಡಿಕೆ ಮಾಡುವುದಾಗಿರುತ್ತದೆ. ವಿದ್ಯುತ್ ಪೂರೈಕೆ ಸಮಸ್ಯೆಯಿಲ್ಲದೆ ರೈತರು ನಿರಾತಂಕವಾಗಿ ತಮ್ಮ ಕೆಲಸ ಮಾಡಿಕೊಳ್ಳಬಹುದು. 

ಸೌರಶಕ್ತಿಯು ಹೇರಳವಾಗಿ ಲಭ್ಯವಿರುವುದರಿಂದ ಮತ್ತು ನಮ್ಮನ್ನು ಸ್ವಾವಲಂಬಿಗಳನ್ನಾಗಿ ಮಾಡುವುದರಿಂದ ಪ್ರತಿಯೊಬ್ಬರೂ ಅದನ್ನು ಬಳಸಿಕೊಳ್ಳಬೇಕು. ಸೌರಶಕ್ತಿ ಮೇಲೆ ಹೂಡಿಕೆ ಮಾಡಿದ ಹಣ ನಾಲ್ಕೈದು ವರ್ಷಗಳಲ್ಲಿ ವಾಪಸ್ ಸಿಗಬಹುದು. ಸೌರಶಕ್ತಿಯನ್ನು ಉತ್ತೇಜಿಸಲು ಸರ್ಕಾರ ಹೊಸ ನೀತಿಗಳನ್ನು ರೂಪಿಸಬೇಕು ಎನ್ನುತ್ತಾರೆ ಸಂಜಯ್ ದೇಶಪಾಂಡೆ.

SCROLL FOR NEXT