ವಿಶೇಷ

ಕ್ಷೀಣಿಸುತ್ತಿರುವ ದಕ್ಷಿಣ ಕನ್ನಡದ ಕಾವಿ ಕಲೆಯ ಉಳಿವಿಗಾಗಿ ಶ್ರಮಿಸುತ್ತಿರುವ ಕಲಾವಿದರು...

Srinivas Rao BV

ಹುಬ್ಬಳ್ಳಿ: ಕರಾವಳಿ ಹಾಗೂ ಗೋವಾಗಳ ದೇವಾಲಯಗಳನ್ನು ಸಿಂಗರಿಸಿರುವ ಕಾವಿ ಕಲೆಗೆ ಶತಮಾನಗಳ ಇತಿಹಾಸವಿದೆ.  
ಕೆಂಪು ಮಿಶ್ರಿತ ಕಂದು ಬಣ್ಣದ ಭಿತ್ತಿಚಿತ್ರಗಳು ಗೋವಾ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಭಾಗದಲ್ಲಿನ ಪುರಾತನ ದೇವಾಲಯಗಳಲ್ಲಿ ಇಂದಿಗೂ ಕಾಣಸಿಗುತ್ತದೆ. 
 
ಆದರೆ ಕಾಲ ಕ್ರಮೇಣ ಈ ಕಲೆಯಲ್ಲಿ ಪರಿಣಿತಿ ಹೊಂದಿರುವವರು ಕಣ್ಮರೆಯಾಗುತ್ತಿದ್ದು, ಈ ಕಲೆಯನ್ನು ಕರಗತ ಮಾಡಿಕೊಂಡಿದ್ದ ನಿರ್ದಿಷ್ಟ ಕುಟುಂಬಗಳು ಬೇರೆ ವೃತ್ತಿಗಳನ್ನು ಅರಸಿಹೋಗಿರುವುದು ಅಪರೂಪದ ಕಾವಿ ಕಲೆ ತನ್ನ ಗತ ವೈಭವವನ್ನು ಕಳೆದುಕೊಳ್ಳುವಂತೆ ಮಾಡಿದೆ.

ಆದರೆ ಗೋಕರಣದ ಕಲಾವಿದರ ತಂಡವೊಂದು ಈ ಕಲೆಯನ್ನು ಜೀವಂತವಾಗಿರಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಹಳೆಯ ದೇವಾಲಯಗಳನ್ನು ಇಂದಿನ ಆಧುನಿಕ ರಚನೆಗಳ ಮೂಲಕ ಜೀರ್ಣೋದ್ಧಾರ ಮಾಡಲಾಗುತ್ತಿದ್ದು ಪುರಾತನ ಕಾವಿ ಅಂತಹ ದೇವಾಲಯಗಳಿಂದ ಕಣ್ಮರೆಯಾಗುತ್ತಿದೆ.

ಗೋಕರ್ಣದ ಕಲಾವಿದ ರವಿ ಗುನಗ, ಕಾವಿ ಕಲೆಗೆ 1,500 ವರ್ಷಗಳ ಇತಿಹಾಸವಿದ್ದು, ಬಂಡಿ ಹಬ್ಬದ ಸಾಂಪ್ರದಾಯಿಕ ಹಬ್ಬದೊಂದಿಗೆ ಸಂಬಂಧಿಸಿದೆ. 12 ದಿನಗಳ ಬಂಡಿಹಬ್ಬ ರಥೋತ್ಸವದೊಂದಿಗೆ ಪೂರ್ಣಗೊಳ್ಳಲಿದ್ದು ಇಡೀ ಗ್ರಾಮ ಭಾಗಿಯಾಗಲಿದೆ. ಈ ರಥೋತ್ಸವದ ಮತ್ತೊಂದು ವಿಶೇಷವೆಂದರೆ, ರಥೋತ್ಸವಕ್ಕೂ ಮುನ್ನ  ಗ್ರಾಮದ ಬಹುತೇಕ ವಿವಾದಗಳು ಬಗೆಹರಿಯುತ್ತಿದ್ದವು. ಈ ಇಡೀ ಕಾರ್ಯಕ್ರಮದ ಕೇಂದ್ರಬಿಂದುವಾಗಿರುತ್ತಿದ್ದದ್ದು ದೇಶ್ ಭಂಡಾರಿ ಕುಟುಂಬದವರಿಂದ ಕಾವಿ ಕಲೆಗಳ ಮೂಲಕ ದೇವಾಲಯಗಳನ್ನು ಸಿಂಗರಿಸುತ್ತಿದ್ದುದ್ದಾಗಿತ್ತು. ಹೊಸ ಪೀಳಿಗೆ ಈ ಕಲೆಯಿಂದ ದೂರವಾಗುತ್ತಿದ್ದು, ಆ ಕಲೆಗೆ ಮತ್ತೆ ಜೀವ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದು ರವಿ ಗುನಗ ಹೇಳಿದ್ದಾರೆ.

ಸಾಂಪ್ರದಾಯಿಕವಾಗಿ ಕಾವಿ ಬಣ್ಣವನ್ನು ನೈಸರ್ಗಿಕ ಬಣ್ಣ, ಗಾರೆ ಮಣ್ಣು, ಮತ್ತು ಸುಣ್ಣದ ಮೂಲಕ ತಯಾರಿಸಲಾಗುತ್ತದೆ. ಒಮ್ಮೆ ಪೇಸ್ಟ್ ಸಿದ್ಧವಾದೊಡನೆ, ಗೋಡೆಗಳ ಮೇಲೆ ಅಚ್ಚು ಹಾಕಲಾಗುತ್ತದೆ. ಇಂದು ಸಾಂಪ್ರದಾಯಿಕ ಕಾವಿ ಬಣ್ಣ ತಯಾರಕರು ಇಲ್ಲ. ಆದ್ದರಿಂದ ಗೋವಾ, ಕರ್ನಾಟಕದಲ್ಲಿ ಹಲವು ದೇವಾಲಯಗಳಲ್ಲಿನ ವಿನ್ಯಾಸವನ್ನು ಅಧ್ಯಯನ ಮಾಡಿದ ಬಳಿಕ ನಾವು ಇಂದು ಅದೇ ರೀತಿ ಕಾಣುವ ಪೇಂಟ್ ನ್ನು ವಿನ್ಯಾಸಗಳ ಮರುಸೃಷ್ಟಿಗಾಗಿ ಬಳಕೆ ಮಾಡುತ್ತಿದ್ದೇವೆ ಎನ್ನುತ್ತಾರೆ ರವಿ ಗುನಗ. 

ಮಂಗಳೂರಿನ ಕಲಾವಿದರೂ ಸಹ ನಮಗೆ ಈ ಸಾಂಪ್ರದಾಯಿಕ ಕಲೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಸಹಕರಿಸುತ್ತಿದ್ದಾರೆ ಎನ್ನುವ ರವಿ ಗುನಗ 7 ವರ್ಷಗಳಿಂದ ಈ ಕಲೆಯನ್ನು ಜೀವಂತವಿರಿಸಲು ಶ್ರಮಿಸುತ್ತಿರುವುದಾಗಿ ಹೇಳಿದ್ದಾರೆ.

SCROLL FOR NEXT