ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿಶೇಷ

70 ಗಂಟೆಗಳಲ್ಲಿ ಎರಡು ಶಿಖರಗಳನ್ನೇರಿದ ಬೆಂಗಳೂರಿನ ನವೀನ್ ಸೇರಿ ಐವರು ಪರ್ವತಾರೋಹಿಗಳು!

ತಮ್ಮ ಕೌಶಲ್ಯ ಮತ್ತು ಶಕ್ತಿಯನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವ ಮೂಲಕ, ಬೆಂಗಳೂರಿನ ಪರ್ವತಾರೋಹಿ ನವೀನ್ ಮಲ್ಲೇಶ್ ಸೇರಿದಂತೆ ಐವರು ಭಾರತೀಯ ಪರ್ವತಾರೋಹಿಗಳ ತಂಡ ಮೌಂಟ್ ಕಾಂಗ್ ಯಾಟ್ಸೆ...

ಪರ್ವತಾರೋಹಿಗಳು
Lingaraj Badiger
Updated On : 25 Jul 2022, 5:29 pm

ಬೆಂಗಳೂರು: ತಮ್ಮ ಕೌಶಲ್ಯ ಮತ್ತು ಶಕ್ತಿಯನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವ ಮೂಲಕ, ಬೆಂಗಳೂರಿನ ಪರ್ವತಾರೋಹಿ ನವೀನ್ ಮಲ್ಲೇಶ್ ಸೇರಿದಂತೆ ಐವರು ಭಾರತೀಯ ಪರ್ವತಾರೋಹಿಗಳ ತಂಡ ಮೌಂಟ್ ಕಾಂಗ್ ಯಾಟ್ಸೆ II(6250 ಮೀ) ಮತ್ತು ಲಡಾಖ್‌ನ ಮೌಂಟ್ ಡಿಜೊ ಜೊಂಗೊ(6240 ಮೀ) ಶಿಖರಗಳನ್ನು 70 ಗಂಟೆಗಳಲ್ಲಿ ಏರಿದ್ದಾರೆ.

ಕೆಟ್ಟ ಹವಾಮಾನ ಪರಿಸ್ಥಿತಿಯಿಂದಾಗಿ ಐದು ದಿನಗಳ ಕಾಲ ಪರ್ವತಾರೋಹಿಗಳನ್ನು ಬೇಸ್ ಕ್ಯಾಂಪ್‌ನಲ್ಲಿ ನೆಲೆಸುವಂತೆ ಮಾಡಿತು. ಆದರೆ ಅವರು ಉತ್ಸಾಹ ಕಳೆದುಕೊಳ್ಳದೆ ಜುಲೈ 17 ರಂದು ಶಿಖರಗಳನ್ನು ಏರುವ ತಮ್ಮ ದಂಡಯಾತ್ರೆ ಆರಂಭಿಸಿದರು. ಜುಲೈ 22 ರಂದು ಎರಡು ಶಿಖರಗಳ ಆರೋಹಣವನ್ನು ಕೇವಲ 70 ಗಂಟೆಗಳಲ್ಲಿ ಪೂರ್ಣಗೊಳಿಸಿದ್ದಾರೆ.

ಇದನ್ನು ಓದಿ: ನೇಪಾಳದಲ್ಲಿ ಕಾಂಚನಜುಂಗಾ ಪರ್ವತ ಏರುವಾಗ ಭಾರತದ ಪರ್ವತಾರೋಹಿ ಸಾವು

Advertisement

Advertisement

ಬೆಂಗಳೂರು ಮೂಲದ ಟ್ರೆಕ್ಕಿಂಗ್ ಉದ್ಯಮಿ ನವೀನ್ ಮಲ್ಲೇಶ್ ಅವರಲ್ಲದೆ, ಅವರ ತಂಡದಲ್ಲಿ ಪುಣೆ, ಹೈದರಾಬಾದ್, ಮುಂಬೈ ಮತ್ತು ಹರಿಯಾಣದ ಪರ್ವತಾರೋಹಿಗಳು ಇದ್ದರು. 

"ನಾವು ಮೊದಲು 6250 ಮೀಟರ್ ಎತ್ತರದ ಮೌಂಟ್ ಕಾಂಗ್ ಯಾಟ್ಸೆ ಶಿಖರ ಏರಲು ಆರಂಭಿಸಿದೆವು. ಒಂದು ದಿನದ ವಿರಾಮದ ನಂತರ, ನಾವು ಎರಡನೆ ಏರಲು ನಿರ್ಧರಿಸಿದೆವು. ನಾವು ದಾಖಲೆ ಸೃಷ್ಟಿಸಲು ಪ್ರಯತ್ನಿಸುತ್ತಿಲ್ಲ. ಆದರೆ ನಮ್ಮ ಮಿತಿ ಮತ್ತು ಕೌಶಲ್ಯಗಳನ್ನು ಪರೀಕ್ಷಿಸಿದೆವು ಎಂದು ನವೀನ್ ಮಲ್ಲೇಶ್ ಅವರು ಹೇಳಿದ್ದಾರೆ.

ಪ್ರತಿ ಶಿಖರ ಏರುವುದನ್ನು ಪೂರ್ಣಗೊಳಿಸಲು ಸುಮಾರು 20 ಗಂಟೆಗಳು ಹಿಡಿಯಿತು ಎಂದು ನವೀನ್ ಮಲ್ಲೇಶ್ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments