ಪಾಲಿ ಹೌಸ್. 
ವಿಶೇಷ

ಈಗ, ಮಣ್ಣಿಲ್ಲದೆ ತರಕಾರಿ, ಹೂವು, ಹಣ್ಣು ಬೆಳೆಯಿರಿ: ಹೊಸ ತಂತ್ರಜ್ಞಾನ ಉತ್ತೇಜಿಸಲು ಐಐಎಚ್ಆರ್ ಮುಂದು!

ಯಾವುದೇ ಬೆಳೆ ಬೆಳೆಯಲು ಮಣ್ಣು ಅತ್ಯಗತ್ಯ. ಮಣ್ಣು ಇಲ್ಲದೇ ಬೆಳೆ ಊಹಿಸಲು ಆಸಾಧ್ಯ ಆದರೆ, ಮಣ್ಣು ರಹಿತವಾಗಿ ತರಕಾರಿ, ಸಾಂಬಾರ ಪದಾರ್ಥಗಳು, ಹೂವು ಹಣ್ಣುಗಳನ್ನು ಬೆಳೆಯುವ ಹೊಸ ತಂತ್ರಜ್ಞಾನ ಉತ್ತೇಜಿಸಲು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್ಆರ್) ಮುಂದಾಗಿದೆ.

ಬೆಂಗಳೂರು: ಯಾವುದೇ ಬೆಳೆ ಬೆಳೆಯಲು ಮಣ್ಣು ಅತ್ಯಗತ್ಯ. ಮಣ್ಣು ಇಲ್ಲದೇ ಬೆಳೆ ಊಹಿಸಲು ಆಸಾಧ್ಯ ಆದರೆ, ಮಣ್ಣು ರಹಿತವಾಗಿ ತರಕಾರಿ, ಸಾಂಬಾರ ಪದಾರ್ಥಗಳು, ಹೂವು ಹಣ್ಣುಗಳನ್ನು ಬೆಳೆಯುವ ಹೊಸ ತಂತ್ರಜ್ಞಾನ ಉತ್ತೇಜಿಸಲು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್ಆರ್) ಮುಂದಾಗಿದೆ.

ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರಲ್ ರಿಸರ್ಚ್ (ICAR), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರಲ್ ರಿಸರ್ಚ್, ಬೆಂಗಳೂರು (IIHR), ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಫಾರ್ ಸ್ಪೈಸಸ್ ರಿಸರ್ಚ್, ಕ್ಯಾಲಿಕಟ್ (IISR), ವಿವಿಧ ಬೆಳೆಗಳ ಅಡಿಯಲ್ಲಿ ಹೆಚ್ಚಿನ ಮೌಲ್ಯದ ಬೆಳೆಗಳಿಗೆ ಒಳಾಂಗಣ ಏರೋಪೋನಿಕ್ಸ್ ಅನ್ನು ಉತ್ತೇಜಿಸಲು ನಿರ್ಧರಿಸಿವೆ.

ಏರೋಪೋನಿಕ್ಸ್ ಎನ್ನುವುದು ಗಾಳಿ ಮತ್ತು ಮಣ್ಣು ಇಲ್ಲದೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಬಳಸುವ ತಂತ್ರಜ್ಞಾನವಾಗಿದೆ.

ಐಸಿಎಆರ್ ಮತ್ತು ಐಐಎಚ್‌ಆರ್ ಶುಕ್ರವಾರ ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾದ ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾಲಯದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಲಿವೆ.

ಈ ಬಗ್ಗೆ ಐಐಎಚ್‌ಆರ್‌ನ ವಿಜ್ಞಾನಿ ನಂದೀಶ ಪಿ ಅವರು ಪ್ರತಿಕ್ರಿಯೆ ನೀಡಿ, ಏರೋಪೋನಿಕ್ಸ್ ತಂತ್ರಜ್ಞಾನದ ಸಹಾಯದಿಂದ ಮಣ್ಣಿಲ್ಲದೆ ಕೆಲವು ಹಣ್ಣುಗಳು, ತರಕಾರಿಗಳು (ಗಾತ್ರದಲ್ಲಿ ಚಿಕ್ಕದಾಗಿರುವುದು), ಹೂವುಗಳು ಮತ್ತು ಮಸಾಲೆ ಪದಾರ್ಥಗಳನ್ನು ಬೆಳೆಯಬಹುದು. ಈ ವಿಧಾನದ ಅಡಿಯಲ್ಲಿ, ಸಸ್ಯಗಳನ್ನು ನೇತಾಡುವ ಸ್ಥಿತಿಯಲ್ಲಿ ಬಿಡಲಾಗುತ್ತದೆ ಮತ್ತು ಈ ಸಸ್ಯಗಳ ಬೇರುಗಳು ಗೋಚರಿಸುತ್ತವೆ. "ನಾವು ಸಂರಕ್ಷಿತ ಪ್ರದೇಶದಲ್ಲಿ ಇವುಗಳನ್ನು ಬೆಳೆಯಬಹುದು, ಇದನ್ನು ಪಾಲಿ ಹೌಸ್ ಎಂದು ಕರೆಯಲಾಗುತ್ತದೆ" ಎಂದು ಮಾಹಿತಿ ನೀಡಿದ್ದಾರೆ.

ಇದನ್ನು ಮತ್ತಷ್ಟು ವಿವರಿಸಿದ ಅವರು, ಅಗತ್ಯವಿರುವ ಪೋಷಕಾಂಶಗಳನ್ನು ಸಿಂಪಡಿಸಲು ಸಂವೇದಕ ಆಧಾರಿತ ಮಂಜು ಸಿಂಪಡಿಸುವ ಕಾರ್ಯವಿಧಾನವನ್ನು ಬಳಸಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆ ರೈತರಿಗೆ ಉಪಯುಕ್ತವಾಗಲಿದೆ ಎಂದು ತಿಳಿಸಿದರು.

ಏರೋಪೋನಿಕ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನಿಗಳು ಮಾಹಿತಿ ನೀಡಿ, ಈ ತಂತ್ರಜ್ಞಾನವು ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಈ ಬೆಳೆಗಳಿಗೆ ಕಡಿಮೆ ನೀರಿನ ಅಗತ್ಯವಿರುತ್ತದೆ. ಇದರಿಂದ ನೀರು ವ್ಯರ್ಥವಾಗುವುದನ್ನು ತಡೆಯಬಹುದು. ಪೋಷಕಾಂಶಗಳನ್ನು ಕೂಡ ವ್ಯರ್ಥವಾಗುವುದಿಲ್ಲ. ಮತ್ತೊಂದು ದೊಡ್ಡ ಪ್ರಯೋಜನವೆಂದರೆ ಸಾಮಾನ್ಯ ಬೆಳವಣಿಗೆಯ ಅವಧಿಗೆ ಹೋಲಿಸಿದರೆ ಈ ಸಸ್ಯಗಳು ವೇಗವಾಗಿ ಮತ್ತು ಉತ್ತಮವಾಗಿ ಬೆಳೆಯುತ್ತವೆ ಎಂದು ಹೇಳಿದ್ದಾರೆ.

ಏರೋಪೋನಿಕ್ಸ್ ಬಳಸಿ ಬೆಳೆಸಬಹುದಾದ ಕೆಲವು ಜನಪ್ರಿಯ ಸಸ್ಯಗಳೆಂದರೆ ಸ್ಟ್ರಾಬೆರಿ, ಟೊಮ್ಯಾಟೊ, ಪುದೀನ ಮತ್ತು ತುಳಸಿ ಆಗಿದೆ. ಈ ತಂತ್ರಜ್ಞಾನದ ಅಳವಡಿಕೆಯಿಂದ ಅಗತ್ಯವಿರುವ ಪೋಷಕಾಂಶಗಳನ್ನು ನಿಯಂತ್ರಿಸಬಹುದು ಮತ್ತು ಈ ಸಸ್ಯಗಳಲ್ಲಿನ ಬೆಳವಣಿಗೆಯು ವೇಗವಾಗಿ ಮತ್ತು ಉತ್ತಮವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಈ ಹಿಂದೆ, IIHR ಕಡಿಮೆ ಮಣ್ಣಿನ ಕೃಷಿ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಿತ್ತು. ಅಲ್ಲಿ ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ರಂಜಕ, ಪೊಟ್ಯಾಶಿಯಮ್ ಮತ್ತು ಸಾರಜನಕದಂತಹ ಪೋಷಕಾಂಶಗಳನ್ನು ಕೋಕೋ-ಪೀಟ್‌ಗೆ ಸೇರಿಸಲಾಗುತ್ತಿತ್ತು. ಇದನ್ನು ತಾರಸಿ ತೋಟದಿಂದ ಹಿಡಿದು ಕೆಲವು ಎಕರೆ ಕೃಷಿಭೂಮಿಯವರೆಗೆ ಹಲವಾರು ಕ್ಷೇತ್ರಗಳಲ್ಲಿ ಬಳಸಬಹುದಾಗಿದೆ. ಸಸ್ಯಗಳನ್ನು ನೀರಿನಲ್ಲಿ ಮತ್ತು ಮಣ್ಣಿಲ್ಲದೆ ಬೆಳೆಸುವ ಯಾಂತ್ರಿಕ ವ್ಯವಸ್ಥೆಯನ್ನು ಕೂಡ ಇಲ್ಲಿ ಬಳಸಲಾಗುತ್ತದೆ. ಅಗತ್ಯವಿರುವ ಪೋಷಕಾಂಶಗಳನ್ನು ನೀರಿನ ಮೂಲಕ ಪೂರೈಸಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT