ಸಾಂದರ್ಭಿಕ ಚಿತ್ರ 
ವಿಶೇಷ

ಟಿ ವಿ ನೋಡುವ, ಮೊಬೈಲ್ ಫೋನ್ ಅತಿಯಾಗಿ ಬಳಸುವ ಚಟವಿದೆಯೇ? ಹಾಗಿದ್ದರೆ ಈ ಗ್ರಾಮಸ್ಥರ ಐಡಿಯಾ ಅನುಸರಿಸಲೇಬೇಕು!

ಸ್ಮಾರ್ಟ್ ಫೋನ್, ಮೊಬೈಲ್, ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಾಗುತ್ತಿದ್ದಂತೆ ಜನರ ಸಾಮಾಜಿಕ ಬದುಕು ಬಹಳಷ್ಟು ಬದಲಾಗಿದೆ ಎಂದು ನಮ್ಮ ಸುತ್ತುಮುತ್ತ ಜನರು ಮಾತನಾಡಿಕೊಳ್ಳುವುದನ್ನು ಕೇಳಿದ್ದೇವೆ.

ಬೆಳಗಾವಿ: ಸ್ಮಾರ್ಟ್ ಫೋನ್, ಮೊಬೈಲ್, ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಾಗುತ್ತಿದ್ದಂತೆ ಜನರ ಸಾಮಾಜಿಕ ಬದುಕು ಬಹಳಷ್ಟು ಬದಲಾಗಿದೆ ಎಂದು ನಮ್ಮ ಸುತ್ತುಮುತ್ತ ಜನರು ಮಾತನಾಡಿಕೊಳ್ಳುವುದನ್ನು ಕೇಳಿದ್ದೇವೆ.

ಇದು ಎಷ್ಟರ ಮಟ್ಟಿಗೆ ಎಂದರೆ ಮೊದಲು ಕುಟುಂಬಸ್ಥರು, ಬಂಧು-ಬಳಗ, ಸ್ನೇಹಿತರು ಎಂದು ಪರಸ್ಪರರ ಮನೆಗಳಿಗೆ ಭೇಟಿ ನೀಡುತ್ತಿದ್ದರು. ಹಳ್ಳಿಗಳಲ್ಲಿ ಕುಟುಂಬಸ್ಥರು ಒಟ್ಟು ಸೇರಿ ಮಾತನಾಡುವುದು, ಕಷ್ಟ-ಸುಖ ಹಂಚಿಕೊಳ್ಳುವುದು ಇತ್ಯಾದಿಗಳಿದ್ದವು. ಆದರೆ ಇತ್ತೀಚೆಗೆ ಮನುಷ್ಯರ ನಡುವಿನ ಕಾಳಜಿ ಮತ್ತು ವಾತ್ಸಲ್ಯವನ್ನು ಕ್ರಮೇಣ ಕಡಿಮೆಯಾಗುತ್ತಿದೆ. ಮಕ್ಕಳು ಇತ್ತೀಚೆಗೆ ಆಟದ ಮೈದಾನಗಳಲ್ಲಿ, ರಸ್ತೆಬದಿಗಳಲ್ಲಿ ಆಟವಾಡುವುದನ್ನು ನಿಲ್ಲಿಸಿ ಮನೆಯೊಳಗೆ ಕುಳಿತು ಮೊಬೈಲ್, ಗ್ಯಾಜೆಟ್ಸ್, ವಿಡಿಯೊ ಗೇಮ್ ಗಳ ಮೊರೆ ಹೋಗುತ್ತಿದ್ದಾರೆ. ಇದು ಮಕ್ಕಳ ಆರೋಗ್ಯಕರ ಬೆಳವಣಿಗೆ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. 

ಅನಾದಿ ಕಾಲದ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ, ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಅಥಣಿ ತಾಲ್ಲೂಕಿನ ವಡ್ಗಾಂವ್ ಗ್ರಾಮದ ನಿವಾಸಿಗಳು ತಮ್ಮಪ್ರತಿದಿನ ಸಂಜೆ 7 ರಿಂದ 9 ರವರೆಗೆ ದೂರದರ್ಶನ ಮತ್ತು ಮೊಬೈಲ್ ಫೋನ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ.

ಈ ಬಗ್ಗೆ TNIE ಯೊಂದಿಗೆ ಮಾತನಾಡಿದ ವಡ್ಗಾಂವ್ ಗ್ರಾಮ ಪಂಚಾಯತ್ (GP) ಅಧ್ಯಕ್ಷ ವಿಜಯ್ ಮೋಹಿತೆ, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಆನ್‌ಲೈನ್ ಶಿಕ್ಷಣವನ್ನು ಪಡೆಯಲು ಪೋಷಕರು ತಮ್ಮ ಮಕ್ಕಳಿಗೆ ಸ್ಮಾರ್ಟ್ ಫೋನ್ ಗಳನ್ನು ನೀಡುತ್ತಿದ್ದರು.  ಅದೀಗ ವಿದ್ಯಾರ್ಥಿಗಳು ಗ್ಯಾಜೆಟ್, ಆನ್ ಲೈನ್ ದಾಸರನ್ನಾಗಿ ಮಾಡಿದೆ. ಈಗ ಅನೇಕ ವಿದ್ಯಾರ್ಥಿಗಳು ಪೋಷಕರಿಗೆ ತಿಳಿಯದಂತೆ ಸ್ಮಾರ್ಟ್ ಫೋನ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ. 

ಈ ದುರಭ್ಯಾಸದಿಂದ ಹೇಗೆ ಹೊರಬರುವುದೆಂದು ಯೋಚಿಸುತ್ತಿದ್ದಾಗ ಗ್ರಾಮದ ಹಿರಿಯರು ಒಂದು ಉಪಾಯ ಹೂಡಿದರು.ಅದೆಂದರೆ ಗ್ರಾಮದ ದೇವಸ್ಥಾನದ ಮೇಲೆ ಧ್ವನಿವರ್ಧಕವನ್ನು ಅಳವಡಿಸಲಾಗಿದೆ, ಇದು ಕ್ರಮವಾಗಿ ರಾತ್ರಿ 7 ಗಂಟೆಗೆ ಮತ್ತು ರಾತ್ರಿ 9 ಗಂಟೆಗೆ ಎರಡು ಬಾರಿ ಸೈರನ್ ಮೊಳಗುತ್ತದೆ.

ಸಂಜೆ 7 ಗಂಟೆಗೆ ಸೈರನ್ ಮೊಳಗಿದಾಗ, ಗ್ರಾಮಸ್ಥರು ತಮ್ಮ ಟಿವಿ ಸೆಟ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಸ್ವಿಚ್ ಆಫ್ ಮಾಡಬೇಕು. ಮನೆಯಿಂದ ಹೊರಗೆ ಬಂದು ಅಕ್ಕಪಕ್ಕದ ಮನೆಯವರ ಜೊತೆ ಮಾತನಾಡುತ್ತಾರೆ. ಈಗ ಕರ್ನಾಟಕ ಮತ್ತು ಮಹಾರಾಷ್ಟ್ರದ ಹಲವಾರು ಗ್ರಾಮ ಪಂಚಾಯತ್‌ಗಳ ಸದಸ್ಯರು ಈ ಉಪಕ್ರಮಕ್ಕೆ ಸಾರ್ವಜನಿಕ ಪ್ರತಿಕ್ರಿಯೆಯನ್ನು ನೋಡಲು ವಡ್ಗಾಂವ್‌ಗೆ ಭೇಟಿ ನೀಡುತ್ತಿದ್ದಾರೆ.

ಬೆಳಗಾವಿಯ ಖಾಸಗಿ ಕಾಲೇಜಿನ ಕಚೇರಿ ಅಧೀಕ್ಷಕ ಸುನೀಲ್ ಚೋಳೇಕರ್, ವಡಗಾಂವ್ ಗ್ರಾಮಸ್ಥರು ಬಹಳ ಬುದ್ಧಿವಂತಿಕೆಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇದು ಇಂದಿನ ಅಗತ್ಯವಾಗಿದೆ. ಇತರ ಹಳ್ಳಿಗಳು ಮತ್ತು ನಗರಗಳು ಇದನ್ನು ಪಾಲಿಸಬೇಕು ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

Udaipur: ನಿಜಕ್ಕೂ ಅಚ್ಚರಿ, 55ನೇ ವಯಸ್ಸಿನಲ್ಲಿ 17ನೇ ಮಗುವಿಗೆ ತಾಯಿಯಾದ ಮಹಿಳೆ!

SCROLL FOR NEXT