ವಿಶೇಷ

ವೈರಲ್ ವಿಡಿಯೋ: 'Zombie'... ಸತ್ತ ಕೀಟದ ಮೆದುಳನ್ನು ನಿಯಂತ್ರಣಕ್ಕೆ ಪಡೆದು ಚಲಿಸುವಂತೆ ಮಾಡಿದ್ದೇನು?

Srinivasamurthy VN

ನವದೆಹಲಿ: ಪರಾವಲಂಬಿ ಸತ್ತ ಕೀಟಗಳ ಮೆದುಳನ್ನು ನಿಯಂತ್ರಣಕ್ಕೆ ಪಡೆದು, ಅದು ನಡೆದಾಡುವಂತೆ ಮಾಡಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.

ನಾವು ಪ್ರಕೃತಿಯ ಬಗ್ಗೆ ಯೋಚಿಸಿದಾಗ, ಸುಂದರವಾದ ಪ್ರಾಣಿಗಳು, ಆಳವಾದ ಕಾಡುಗಳು, ಅಗಾಧವಾದ ಸಾಗರಗಳು, ಸಸ್ಯಗಳು, ಸಸ್ಯ ಮತ್ತು ಪ್ರಾಣಿಗಳು ಮತ್ತು ಇತರ ಅನೇಕ ವಸ್ತುಗಳ ಸುಂದರವಾದ ಚಿತ್ರಗಳು ನಮ್ಮ ಕಣ್ಣ ಮುಂದೆ ಬರುತ್ತವೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಪರಾವಲಂಬಿ ಸತ್ತ ಕೀಟಗಳ ಮೆದುಳನ್ನು ನಿಯಂತ್ರಣಕ್ಕೆ ಪಡೆದು, ಅದು ನಡೆದಾಡುವಂತೆ ಮಾಡಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.

ಬಹುದಿನಗಳ ಹಿಂದೆ ಸತ್ತ ಕೀಟವೊಂದರ ದೇಹದ ಶೇ.65ರಷ್ಚು ಭಾಗ ಹಾಳಾಗಿದ್ದು, ಕೇವಲ ಕಾಲುಗಳು ಮತ್ತು ತಲೆ ಮಾತ್ರ ಇರುವ ಕೀಟ ತಾನೇ ತಾನಾಗಿ ನಡೆದಾಡುತ್ತಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗಿದೆ. ಸತ್ತು ಕೊಳೆಯುತ್ತಿರುವ ಕೀಟ ಹೇಗೆ ನಡೆಯಲು ಸಾಧ್ಯ ಎಂಬ ಪ್ರಶ್ನೆಯನ್ನು ಈ ವಿಡಿಯೋ ಹುಟ್ಟು ಹಾಕಿದ್ದು, ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ ಉದ್ಯೋಗಿ ಡಾ. ಸಾಮ್ರಾಟ್ ಗೌಡ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ವೀಡಿಯೊದಲ್ಲಿ, ಬಹುಪಾಲು ಆಂತರಿಕ ಅಂಗಗಳಿಲ್ಲದಿದ್ದರೂ ಕೀಟವು ಸಾಮಾನ್ಯವಾಗಿ ಚಲಿಸುತ್ತಿರುವಂತೆ ಕಂಡುಬರುತ್ತದೆ. "ನ್ಯೂರೋ ಪ್ಯಾರಾಸೈಟ್ ಸತ್ತ ಕೀಟದ ಮೆದುಳಿನ ಮೇಲೆ ಹಿಡಿತ ಸಾಧಿಸಿ ಮತ್ತು ಅದನ್ನು ನಡೆಯುವಂತೆ ಮಾಡುತ್ತಿದೆ ಎಂದು ಅಧಿಕಾರಿ ವಿಡಿಯೋ ಟ್ವೀಟ್ ಮಾಡಿದ್ದಾರೆ. 

ಈ ಕುರಿತು ಮಾಹಿತಿ ನೀಡಿರುವ ನ್ಯಾಷನಲ್ ಜಿಯಾಗ್ರಫಿಕ್ ಸಂಸ್ಥೆಯ ಅಧಿಕಾರಿಯೊಬ್ಬರು, "ಕೆಲವು ಪರಾವಲಂಬಿಗಳು ತಮ್ಮ ಸತ್ತ ದೇಹಗಳನ್ನು ಹೆಚ್ಚು ಕಡಿಮೆ ವಾಕಿಂಗ್ ಡೆಡ್ ಆಗಿ ಪರಿವರ್ತಿಸುತ್ತವೆ. ಮನಸ್ಸಿನ ನಿಯಂತ್ರಣದ ಈ ಮಾಸ್ಟರ್‌ ಕೀಟಗಳು ತಮ್ಮ ದೇಹವನ್ನು ಒಳಗಿನಿಂದಲೇ ಅತ್ಯಂತ ಕುಶಲತೆಯಿಂದ ನಿರ್ವಹಿಸುತ್ತಾರೆ. ಇದು ಅಂತಿಮವಾಗಿ ಪರಾವಲಂಬಿಗೆ ಪ್ರಯೋಜನಕಾರಿಯಾದ ಸ್ವಯಂ-ವಿನಾಶಕಾರಿ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.

SCROLL FOR NEXT