ವಿಶೇಷ

ಹುಲಿ ಮುಖದ ಈ ವಿಶೇಷ ಜೆಟ್ ನಲ್ಲಿ ಭಾರತಕ್ಕೆ ಬರಲಿವೆ 8 ಚೀತಾಗಳು!

Nagaraja AB

ನವದೆಹಲಿ: ನಮಿಬಿಯಾ ರಾಜಧಾನಿ ವಿಂಡ್ಹೋಕ್ ನಿಂದ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬಿ747 ಜಂಬೋ ಜೆಟ್ ನಿಂದ 8 ಚೀತಾಗಳನ್ನು ಭಾರತದ ಮಧ್ಯಪ್ರದೇಶದ ಕುನೊ ಪಾಲ್ಪುರ್​ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾಗುತ್ತಿದೆ. 

ಈ ವಿಶೇಷ ವಿಮಾನ ವಿಂಡ್ಹೋಕ್ ನಲ್ಲಿ ಬುಧವಾರ ಲ್ಯಾಂಡ್ ಆಗುತ್ತಿದ್ದಂತೆಯೇ ಅಲ್ಲಿರುವ ಭಾರತದ ಹೈ ಕಮೀಷನ್  ಟ್ವೀಟ್ ಮೂಲಕ ಈ ವಿಷಯವನ್ನು ತಿಳಿಸಿದ್ದಾರೆ.  ಐದು ಹೆಣ್ಣು ಮತ್ತು ಮೂರು ಗಂಡು ಚೀತಾ ಸೇರಿದಂತೆ ಒಟ್ಟು ಎಂಟು ಚೀತಾಗಳನ್ನು ಸೆಪ್ಟೆಂಬರ್ 17 ರಂದು ರಾಜಸ್ಥಾನದ ಜೈಪುರಕ್ಕೆ ಕಾರ್ಗೋ ವಿಮಾನದಲ್ಲಿ ಕರೆತರಲಾಗುತ್ತದೆ. ನಂತರ ಜೈಪುರದಿಂದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಹೆಲಿಕಾಪ್ಟರ್ ನಲ್ಲಿ ಅವುಗಳನ್ನು ಕರೆದೊಯ್ಯಲಾಗುತ್ತದೆ. 

ಸೆಪ್ಟೆಂಬರ್ 17ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಹುಟ್ಟಹುಬ್ಬದ ಸಂದರ್ಭದಲ್ಲಿ ಈ ಚೀತಾಗಳನ್ನು ಪರಿಚಯಿಸಲಿದ್ದಾರೆ. ಭಾರತಕ್ಕೆ ಚೀತಾಗಳನ್ನು ಕರೆತರುತ್ತಿರುವ ಜೆಟ್ ಗೆ ಹುಲಿಯ ಬಣ್ಣದೊಂದಿಗೆ ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. 

ಈ ಜೆಟ್ 16 ಗಂಟೆಗಳವರೆಗೆ ಹಾರಾಟ ನಡೆಸುವ ಸಾಮರ್ಥ್ಯವಿರುವ ಅಲ್ಟ್ರಾ-ಲಾಂಗ್ ರೇಂಜ್ ಜೆಟ್ ಆಗಿದ್ದು,  ನಮೀಬಿಯಾದಿಂದ ನೇರವಾಗಿ ಭಾರತಕ್ಕೆ ಬರುತ್ತಿದೆ. ಚಿರತೆಗಳು  ವಾಯು ಸಾರಿಗೆ ಅವಧಿಯಲ್ಲಿ  ಖಾಲಿ ಹೊಟ್ಟೆಯಲ್ಲಿ ಇರಬೇಕಾಗುತ್ತದೆ ಎಂದು ಭಾರತೀಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು  ತಿಳಿಸಿದ್ದಾರೆ.

SCROLL FOR NEXT