ಇಸ್ಮಾಯಿಲ್ ಕಣತ್ತೂರು ತಮ್ಮ ಗ್ರಂಥಾಲಯದಲ್ಲಿ 
ವಿಶೇಷ

ಮಂಗಳೂರಿನ ಚಿಂದಿ ವ್ಯಾಪಾರಿಗೆ ಹಣದ ಬದಲು ವಿದ್ಯೆಯ ಹಸಿವು: ಮನೆಯ ಗ್ರಂಥಾಲಯದಲ್ಲಿ 2 ಸಾವಿರ ಪುಸ್ತಕಗಳ ಸಂಗ್ರಹ!

ಜ್ಞಾನದ ಮೌಲ್ಯವನ್ನು ಅರಿತುಕೊಳ್ಳಲು ಪಂಡಿತರೇ ಆಗಬೇಕೆಂದಿಲ್ಲ. ಮಂಗಳೂರು ನಗರದಿಂದ ಸುಮಾರು 28 ಕಿಮೀ ದೂರದಲ್ಲಿರುವ ಹೂಹಾಕುವಕಲ್ಲು ಗ್ರಾಮದಲ್ಲಿರುವ ಅನಕ್ಷರಸ್ಥ ಚಿಂದಿ ವ್ಯಾಪಾರಿಯೊಬ್ಬರು ಅದನ್ನು ಸಾಬೀತುಪಡಿಸಿದ್ದಾರೆ.

ಮಂಗಳೂರು: ಜ್ಞಾನದ ಮೌಲ್ಯವನ್ನು ಅರಿತುಕೊಳ್ಳಲು ಪಂಡಿತರೇ ಆಗಬೇಕೆಂದಿಲ್ಲ. ಮಂಗಳೂರು ನಗರದಿಂದ ಸುಮಾರು 28 ಕಿಮೀ ದೂರದಲ್ಲಿರುವ ಹೂಹಾಕುವಕಲ್ಲು ಗ್ರಾಮದಲ್ಲಿರುವ ಅನಕ್ಷರಸ್ಥ ಚಿಂದಿ ವ್ಯಾಪಾರಿಯೊಬ್ಬರು (Scrap dealer) ಅದನ್ನು ಸಾಬೀತುಪಡಿಸಿದ್ದಾರೆ.

50 ವರ್ಷದ ಇಸ್ಮಾಯಿಲ್ ಕಣತ್ತೂರ್ ಅವರು ಬಾಳೆಪುಣಿ ಗ್ರಾಮದ ನವಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ಸಣ್ಣ ಗ್ರಂಥಾಲಯವನ್ನು ನಿರ್ಮಿಸಿದ್ದಾರೆ. ಕಳೆದ 15 ವರ್ಷಗಳಲ್ಲಿ ಬಿಸಾಡಿದ ವಸ್ತುಗಳ ರಾಶಿಯ ಜೊತೆಗೆ ಸಿಕ್ಕ ಪುಸ್ತಕಗಳನ್ನು ಅವರು ಜತನದಿಂದ ಎತ್ತಿಟ್ಟಿದ್ದಾರೆ. ಪ್ರತಿದಿನ, ತಮ್ಮ ಕಿಕ್ಕಿರಿದ ಅಂಗಡಿಯಲ್ಲಿ ಕಾಗದದ ತ್ಯಾಜ್ಯದ ರಾಶಿಯಿಂದ ಅಮೂಲ್ಯವೆಂದು ಭಾವಿಸುವ ಪುಸ್ತಕಗಳನ್ನು ಪ್ರತ್ಯೇಕಿಸಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. 

ಇಸ್ಮಾಯಿಲ್ ಕಣತ್ತೂರು ತಮ್ಮ ಗ್ರಂಥಾಲಯದಲ್ಲಿ

ಅವರು ಹೀಗೆ ಸಂರಕ್ಷಿಸಿದ ಅನೇಕ ಪುಸ್ತಕಗಳು ಶಿಕ್ಷಣ ಸಂಸ್ಥೆಗಳ ಗ್ರಂಥಾಲಯಗಳ ದಾರಿ ಕಂಡುಕೊಂಡಿವೆ, ಕೆಲವು ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಇತರ ವ್ಯಕ್ತಿಗಳು ಅವರಿಂದ ಅವುಗಳನ್ನು ತೆಗೆದುಕೊಂಡಿದ್ದಾರೆ. ಇದಕ್ಕಾಗಿ ನಾನು ಒಂದು ಪೈಸೆಯನ್ನೂ ಕೇಳುವುದಿಲ್ಲ, ನನಗೆ ಯಾವುದೇ ಐಷಾರಾಮಿ ಶಿಕ್ಷಣ ಇರಲಿಲ್ಲ. ಕನಿಷ್ಠ ಇತರರಾದರೂ ಇದರ ಪ್ರಯೋಜನ ಪಡೆಯಬೇಕು ಎಂದು ಶಿಕ್ಷಣದಲ್ಲಿ ತಮ್ಮ ಸೇವೆಗಳಿಗಾಗಿ ‘ಗಾಂಧಿ’ ಎಂದು ಜನಪ್ರಿಯರಾಗಿರುವ ಇಸ್ಮಾಯಿಲ್ ಹೇಳುತ್ತಾರೆ.

ಪುಸ್ತಕಗಳನ್ನು ಎರವಲು ಪಡೆದು ಉಚಿತವಾಗಿ ಪಡೆಯುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಕೆಲವು ವಾರಗಳ ಹಿಂದೆ, ಒಬ್ಬ ವಿದ್ವಾಂಸರು ತಮ್ಮದೇ ಆದ ಗ್ರಂಥಾಲಯವನ್ನು ಸ್ಥಾಪಿಸುವ ಕಲ್ಪನೆಯನ್ನು ನೀಡಿದರು. ನನ್ನ ಅಂಗಡಿಯಲ್ಲಿ ಒಂದು ನಿರ್ದಿಷ್ಟ ಪುಸ್ತಕದ ಮೇಲೆ ಕೈ ಹಾಕಿದ ಈ ಮಹನೀಯರು ಮಾರುಕಟ್ಟೆಯಲ್ಲಿ ಅದರ ಬೆಲೆ 2,000 ರೂಪಾಯಿಗಳು ಎಂದರು. ನಾನು ಪುಸ್ತಕಗಳನ್ನು ಮಾರುವುದಿಲ್ಲ ಎಂದು ಹೇಳಿ ತಮಗೆ ಉಪಯೋಗವಾದರೆ ತೆಗೆದುಕೊಂಡು ಹೋಗಿ ಎಂದು ಕೇಳಿದೆ. ಅವರು ಅದನ್ನು ಉಚಿತವಾಗಿ ತೆಗೆದುಕೊಳ್ಳಲು ನಿರಾಕರಿಸಿದರು, ಬಲವಂತವಾಗಿ ನನ್ನ ಜೇಬಿಗೆ ಕೆಲವು ನೋಟುಗಳನ್ನು ತುರುಕಿದರು ಎಂದು ಇಸ್ಮಾಯಿಲ್ ಹೇಳುತ್ತಾರೆ. 

ಅಂಗಡಿಯಿಂದ ಹೊರಡುವಾಗ, ಇಸ್ಮಾಯಿಲ್ ಅವರ ಅಂಗಡಿಯಲ್ಲಿ ಪುಸ್ತಕಗಳಿಗೆ ಸಾಕಷ್ಟು ಸ್ಥಳಾವಕಾಶವಿಲ್ಲದ ಕಾರಣ ಅವರ ಮನೆಯಲ್ಲಿ ಗ್ರಂಥಾಲಯವನ್ನು ಸ್ಥಾಪಿಸಲು ಸೂಚಿಸಿದರು. ಎರಡು ಬಾರಿ ಯೋಚಿಸದೆ ಜನಶಿಕ್ಷಣ ಟ್ರಸ್ಟ್‌ನ ಸಹಾಯದಿಂದ ಪುಸ್ತಕಗಳನ್ನು ಬಾಳೆಪುಣಿ ಗ್ರಾಮದ ಅವರ ಮನೆಗೆ ಸ್ಥಳಾಂತರಿಸಿದೆ ಎಂದು ಇಸ್ಮಾಯಿಲ್ ಹೇಳುತ್ತಾರೆ.

ಪುಸ್ತಕಗಳನ್ನು ಮರದ ಕಪಾಟಿನಲ್ಲಿ ಜೋಡಿಸಲಾಗಿದೆ ಯಾರು ಬೇಕಾದರೂ ಎರವಲು ಪಡೆದುಕೊಂಡು ಹೋಗಬಹುದು. ತಮ್ ಅಂಗಡಿಗೆ ಬಂದವರು ಪುಸ್ತಕಗಳನ್ನು ಓದಲು ಸ್ಕ್ರ್ಯಾಪ್ ಮಾಡಿದ ಡಿಶ್ ಛತ್ರಿಯ ನೆರಳಿನಲ್ಲಿ ಕೆಲವು ಕುರ್ಚಿಗಳನ್ನು ಸಹ ಜೋಡಿಸಿದ್ದಾರೆ. ಇಸ್ಮಾಯಿಲ್ ಅವರ ಗ್ರಂಥಾಲಯದಲ್ಲಿ ಕನಿಷ್ಠ 2,000 ಪುಸ್ತಕಗಳಿವೆ. 

ಜನಶಿಕ್ಷಣ ಟ್ರಸ್ಟ್‌ನ ಸದಸ್ಯ ಕೃಷ್ಣ ಮೂಲ್ಯ, ಸಂಕಷ್ಟದಲ್ಲಿರುವ ಜನರಿಗೆ ಸದಾ ಸಹಾಯ ಮಾಡುವ ಇಸ್ಮಾಯಿಲ್ ಮಾದರಿ ವ್ಯಕ್ತಿ ಎಂದು ಬಣ್ಣಿಸಿದರು. "ಅವರು ಅಪಘಾತಕ್ಕೊಳಗಾದವರನ್ನು ಆಸ್ಪತ್ರೆಗೆ ಸಾಗಿಸಿ ಅನೇಕ ಜೀವಗಳನ್ನು ಉಳಿಸಿದ್ದಾರೆ, ಇತರ ಚಟುವಟಿಕೆಗಳ ನಡುವೆ ಹಣ ಸಂಗ್ರಹಿಸಿ ಬಡ ಹೆಣ್ಣುಮಕ್ಕಳ ಮದುವೆಗೆ ಸಹಾಯ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT