ಶಿಕ್ಷಕರೊಬ್ಬರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿರುವುದು. 
ವಿಶೇಷ

ಕ್ರೀಡೆ, ಕರಕುಶಲ ತರಬೇತಿ, 50 ವರ್ಷಗಳಿಂದ ನಿಸ್ವಾರ್ಥ ಸೇವೆ: ಕೊಳೆಗೇರಿಗಳಲ್ಲಿನ ವಿಶೇಷ ಚೇತನರ ಬಾಳಿಗೆ ಬೆಳಕು ಈ ಶಾಲೆ!

ಲಿಂಗರಾಜಪುರಂ ನಲ್ಲಿರುವ ಈ ಶಾಲೆ ಸುಮಾರು 50 ವರ್ಷಗಳಿಂದ ಕೊಳಗೇರಿಗಳಲ್ಲಿರುವ ವಿಶೇಷಚೇತನರಿಗೆ ಕ್ರೀಡೆ, ಕಲೆ, ಹಾಗೂ ಕರಕುಶಲ ತರಬೇತಿಗಳನ್ನು ನೀಡಿ, ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ. ಈ ಮೂಲಕ ಈ ಮಕ್ಕಳ ಜೀವನಕ್ಕೆ ಬೆಳಕಾಗುತ್ತಿದೆ.

ಬೆಂಗಳೂರು: ನಮಗೆ ತಿಳಿದ ಹಾಗೆ ಸಮಾಜದಲ್ಲಿ ವಿಕಲಚೇತನರಿಗೆ ಸಮಾನತೆ ಹಾಗು ಸೌಲಭ್ಯಗಳ ಕಾನೂನಿನ ಮೂಲಕ ಸಿಕ್ಕಿರಬಹುದು. ಆದರೆ ನಿಜವಾಗಿಯೂ ಅವು ನಿಜವಾದ ಫಲಾನುಭವಿಗಳಿಗೆ ಸಿಗದೇ ಬೇರೆಯವರ ಪಾಲಾಗುತ್ತಿವೆ. ಇಂತಹ ದಿನಮಾನಗಳಲ್ಲಿಯೂ ತಮ್ಮ ಬೆನ್ನು ಮೂಳೆ ಮುರಿಯುವಂತೆ ಕೆಲಸ ಮಾಡುತ್ತಿರುವುದು ಕೆಲವು ಸಂಸ್ಥೆಗಳು ಮಾತ್ರ. ಅಂತಹ ಸಂಸ್ಥೆಗಳ ಸಾಲಿಗೆ ಶ್ರದ್ದಾಂಜಲಿ ಇಂಟಿಗ್ರೇಟೆಡ್ ಸ್ಕೂಲ್ ಕೂಡ ಸೇರುತ್ತದೆ.

ಲಿಂಗರಾಜಪುರಂ ನಲ್ಲಿರುವ ಈ ಶಾಲೆ ಸುಮಾರು 50 ವರ್ಷಗಳಿಂದ ಕೊಳಗೇರಿಗಳಲ್ಲಿರುವ ವಿಶೇಷಚೇತನರಿಗೆ ಕ್ರೀಡೆ, ಕಲೆ, ಹಾಗೂ ಕರಕುಶಲ ತರಬೇತಿಗಳನ್ನು ನೀಡಿ, ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ. ಈ ಮೂಲಕ ಈ ಮಕ್ಕಳ ಜೀವನಕ್ಕೆ ಬೆಳಕಾಗುತ್ತಿದೆ.

ಶಾಲೆಯಲ್ಲಿ ವಿಕಲಾಂಗತೆ, ಶ್ರವಣ ಮತ್ತು ವಾಕ್ ದೋಷವುಳ್ಳ, ಕಣ್ಣಿನ ದೋಷ, ಬೆಳವಣಿಗೆಯಲ್ಲಿ ಸಮಸ್ಯೆ, ಡೌನ್ ಸಿಂಡ್ರೋಮ್, ಲೊಕೊಮೊಟರ್ ಅಸಾಮರ್ಥ್ಯ ಮತ್ತು ಇತರೆ 11 ವಿಭಿನ್ನ ವಿಕಲಾಂಗತೆಯುಳ್ಳ ಮಕ್ಕಳಿಗೆ ಶಿಕ್ಷಣ, ಕ್ರೀಡೆ ಹಾಗೂ ಕರಕುಶಲ ತರಬೇತಿಗಳನ್ನು ನೀಡಲಾಗುತ್ತಿದೆ.

ಶಾಲೆಯಲ್ಲಿ ಶೇ.20 ಸಾಮಾನ್ಯ ಮಕ್ಕಳು ಹಾಗೂ ಶೇ.80ರಷ್ಟು ವಿಕಲಾಂಗತೆಯುಳ್ಳ ಮಕ್ಕಳು ಸೇರಿದಂತೆ ಒಟ್ಟು 313 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಕೆಲಸವನ್ನು ಮಾಡಲಾಗುತ್ತಿದೆ. ಸರ್ವತೋಮುಖ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಚಟುವಟಿಕೆ ಆಧಾರಿತ ಕಲಿಕೆ, ಕ್ರೀಡೆ, ಕಲೆ ಮತ್ತು ಕರಕುಶಲತೆಯನ್ನು ಕೇಂದ್ರೀಕರಿಸಿ ಶಿಕ್ಷಣ ನೀಡಲಾಗುತ್ತಿದೆ. ಇತರೆ ಶಾಲೆಗಳಲ್ಲಿ ಅಂಗವಿಕಲ ಮಕ್ಕಳನ್ನು ಹೊರಗಿಡಲಾಗುತ್ತದೆ. ಆದರೆ, ನಮ್ಮ ಶಾಲೆ ಅವರ ಮೇಲೆ ಹೆಚ್ಚಿನ ಗಮನ ಹರಿಸುತ್ತದೆ. ಆರ್ಥಿಕವಾಗಿ ದುರ್ಬಲವಾಗಿರುವ ಮಕ್ಕಳಿಗೆ ಮಧ್ಯಾಹ್ನದ ಊಟ, ಪುಸ್ತಕಗಳು, ಆರೋಗ್ಯ ರಕ್ಷಣೆ, ಪುನರ್ವಸತಿ, ಸಾರಿಗೆ ಸೇರಿದಂತೆ ಇನ್ನಿತರೆ ವ್ಯವಸ್ಥೆಗಳನ್ನು ನೀಡಲಾಗುತ್ತಿದೆ ಎಂದು ಶ್ರದ್ದಾಂಜಲಿ ಇಂಟಿಗ್ರೇಟೆಡ್ ಸ್ಕೂಲ್'ನ ಪ್ರಾಂಶುಪಾಲ ಪನ್ನಗ ಬಾಬು ಅವರು ಹೇಳಿದ್ದಾರೆ.

ಶಾಲೆಯಲ್ಲಿ ಬಸ್ ಗಳಲ್ಲಿದ್ದು, ಇಲ್ಲಿ 10-12 ಗಾಲಿ ಕುರ್ಚಿಗಳನ್ನು ಒದಗಿಸಲಾಗಿದೆ. ಈ ಮಕ್ಕಳು ಕೂಡ ಸಮಾಜಕ್ಕೆ ಕೊಡುಗೆ ನೀಡುವ ಇತರರಂತೆ ಮಾಡಲು ಬಯುಸ್ತಿದೆ. ಶಾಲೆಯಲ್ಲಿ ವಿಕಲಾಂಗ ಶಿಕ್ಷಕರಿದ್ದು, ಅವರಿಂದ ಮಕ್ಕಳಿಗೆ ಪ್ರೇರಣೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಶಾಲೆ ಆರಂಭವಾದಾಗ ಮೊದಲು 7 ತರಗತಿವರೆಗೆ ಮಾತ್ರವೇ ಶಿಕ್ಷಣ ನೀಡಲಾಗುತ್ತಿತ್ತು. ಈ ವರ್ಷದಿಂದ 8ನೇ ತರಗತಿ ಆರಂಭವಾಗಿದ್ದು, ಮುಂದಿನ ವರ್ಷದಿಂದ 9 ಮತ್ತು 10ನೇ ತರಗತಿಗಳು ಕೂಡ ಪ್ರಾರಂಭವಾಗಲಿವೆ ಎಂದು ಹೇಳಿದ್ದಾರೆ.

ಶಾಲೆಗೆ ಕಳುಹಿಸಿದ ಬಳಿಕ ನನ್ನ 8 ವರ್ಷದ ಮಗಳ ದೈಹಿಕ ಆರೋಗ್ಯ ಮತ್ತು ಸಾಮಾಜಿಕ ಕೌಶಲ್ಯಗಳಲ್ಲಿ ಸಾಕಷ್ಟು ಸುಧಾಕರಣೆಗಳನ್ನು ಕಂಡಿದ್ದೇನೆಂದು ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ಮಗುವೊಂದರ ತಾಯಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT