ಪ್ರಾಕ್ಸಿಸ್ ನ ಮೊದಲ ಎಂಜಿನಿಯರ್ ಗಳು ಮತ್ತು ನಿರ್ದೇಶಕರುಗಳ ತಂಡ 
ವಿಶೇಷ

ಭಾರತದ ಮೊದಲ ಕಂಪ್ಯೂಟರ್ ಕಂಪೆನಿಗಳಲ್ಲಿ ಒಂದಾದ ಬೆಂಗಳೂರಿನ 'ಪ್ರಾಕ್ಸಿಸ್'ಗೆ ಸುವರ್ಣ ವರ್ಷಾಚರಣೆಯ ಸಂಭ್ರಮ!

ಬೆಂಗಳೂರು ನಗರವನ್ನು ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂದು ಕರೆಯುತ್ತಾರೆ. ಹೀಗೆ ಕರೆಯಲು ಅದಕ್ಕೆ ಅಡಿಪಾಯವನ್ನು 1970 ರ ದಶಕದ ಆರಂಭದಲ್ಲಿ ಹಾಕಲಾಯಿತು. 50 ವರ್ಷಗಳ ಹಿಂದೆ, ರಿಚ್ಮಂಡ್ ರಸ್ತೆಯ ನೆಲಮಾಳಿಗೆಯಲ್ಲಿ, ಭಾರತದ ಮೊಟ್ಟಮೊದಲ ಕಂಪ್ಯೂಟರ್ ಕಂಪನಿಗಳಲ್ಲಿ ಒಂದಾದ ಪ್ರೊಸೆಸರ್ ಸಿಸ್ಟಮ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ (PSI) ಹುಟ್ಟಿಕೊಂಡಿತು. 

ಬೆಂಗಳೂರು: ಬೆಂಗಳೂರು ನಗರವನ್ನು ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂದು ಕರೆಯುತ್ತಾರೆ. ಹೀಗೆ ಕರೆಯಲು ಅದಕ್ಕೆ ಅಡಿಪಾಯವನ್ನು 1970 ರ ದಶಕದ ಆರಂಭದಲ್ಲಿ ಹಾಕಲಾಯಿತು. 50 ವರ್ಷಗಳ ಹಿಂದೆ, ರಿಚ್ಮಂಡ್ ರಸ್ತೆಯ ನೆಲಮಾಳಿಗೆಯಲ್ಲಿ, ಭಾರತದ ಮೊಟ್ಟಮೊದಲ ಕಂಪ್ಯೂಟರ್ ಕಂಪನಿಗಳಲ್ಲಿ ಒಂದಾದ ಪ್ರೊಸೆಸರ್ ಸಿಸ್ಟಮ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ (PSI) ಹುಟ್ಟಿಕೊಂಡಿತು. 

ಡಿಸೆಂಬರ್ 29, 1973 ರಂದು ಸ್ಥಾಪನೆಯಾದ ಪಿಎಸ್ಐ, ಈಗ ಪ್ರೊಕ್ಸಿಸ್ ಎಂದು ಕರೆಯಲ್ಪಡುತ್ತಿದ್ದು, ಮುಂದಿನ ವಾರ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ. ಕೇರಳದಲ್ಲಿ ನೋಂದಾಯಿಸಲ್ಪಟ್ಟ ಕಂಪನಿಯು ರಿಚ್ಮಂಡ್ ರಸ್ತೆಯಲ್ಲಿರುವ ಕ್ಲಾಸಿಕ್ ಕಟ್ಟಡದ ನೆಲಮಾಳಿಗೆಯಲ್ಲಿ ಕಚೇರಿಯನ್ನು ಆರಂಭಿಸಿತು. 

ಪಿಎಸ್ ಐ ಹುಟ್ಟಿನ ಕಥೆ: ಪಿಎಸ್‌ಐನ ಕಥೆಯು ಅದರ ಮೂವರು ಸಂಸ್ಥಾಪಕ ನಿರ್ದೇಶಕರೊಂದಿಗೆ ಪ್ರಾರಂಭವಾಯಿತು - ದಿವಂಗತ ವಿಕೆ ರವೀಂದ್ರನ್ (ರವಿ), ಅವರು ಅಮೆರಿಕಾದಲ್ಲಿ ಬೆಲ್ ಲ್ಯಾಬ್ಸ್ ನ ಕೆಲಸ ತೊರೆದು ಇಲ್ಲಿ ಐಟಿ ಕಂಪನಿಯನ್ನು ಪ್ರಾರಂಭಿಸಲು ಭಾರತಕ್ಕೆ ಮರಳಿದರು, ಐಟಿ ವಲಯದಲ್ಲಿ ಸೀಮಿತ ಆಯ್ಕೆಗಳನ್ನು ಹೊಂದಿದ್ದವರನ್ನು ಸಹ ಈ ಕಂಪೆನಿ ನೇಮಿಸುತ್ತಿತ್ತು. ಆಗ ಕೇರಳದಲ್ಲಿ ತೋಷಿಬಾ ಆನಂದ್ ಅವರೊಂದಿಗೆ ಕೆಲಸ ಮಾಡುತ್ತಿದ್ದ ಅವರ ಸಹೋದರ ದಿವಂಗತ ವಿಕೆ ಹರೀಂದ್ರನ್ (ಹರಿ) ಕಂಪನಿಯನ್ನು ಸ್ಥಾಪಿಸಲು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ಮೂರನೇ ಸದಸ್ಯ ವಿನಯ್ ದೇಶಪಾಂಡೆ. ರವಿಯಂತಹ ಸ್ಟ್ಯಾನ್‌ಫೋರ್ಡ್ ಪದವೀಧರರೂ ಸಹ ಬೆಂಗಳೂರಿನಲ್ಲಿ ಪಿಎಸ್‌ಐ ಸ್ಥಾಪಿಸಲು ಅವರೊಂದಿಗೆ ಸೇರಿಕೊಂಡರು.

ಪಿಎಸ್‌ಐ ಎರ್ನಾಕುಲಂನಲ್ಲಿ ಡಿಸೆಂಬರ್ 29, 1973 ರಂದು ಸಹೋದರರ ಪೋಷಕರ ಮನೆಯಾದ ‘ನೌಕಾ’ದಲ್ಲಿ ಕಚೇರಿ ನೋಂದಾಯಿಸಲ್ಪಟ್ಟಿತು. ನೋಂದಣಿ ನಂತರ, ಪಿಎಸ್ಐ ಬೆಂಗಳೂರಿನಲ್ಲಿ ಕಚೇರಿಯನ್ನು ತೆರೆದರು. ಭಾರತದ ಪ್ರತಿಯೊಂದು ಮನೆಗೂ ಮೈಕ್ರೊಪ್ರೊಸೆಸರ್‌ಗಳನ್ನು ಹೊಂದಿರುವ ಕಂಪ್ಯೂಟರ್‌ಗಳನ್ನು ಉತ್ಪಾದಿಸುವ ಆಲೋಚನೆ ಇತ್ತು. ಭಾರತದಿಂದ ಐಬಿಎಂ ನಿರ್ಗಮನ ಮತ್ತು ಐಟಿ ಕಂಪನಿಗಳ ಸ್ಥಾಪನೆಗೆ ಕಟ್ಟುನಿಟ್ಟಿನ ನಿರ್ಬಂಧಗಳೊಂದಿಗೆ ಆಗ ಸಮಯ ಸೂಕ್ತವಾಗಿತ್ತು. ಇಂತಹ ಪರಿಸ್ಥಿತಿ ಮಧ್ಯೆ ಪಿಎಸ್ ಐ ತಲೆ ಎತ್ತಿತು. ರವಿ ಅವರು ಉದ್ಯಮದ ಅಗತ್ಯಗಳನ್ನು ಊಹಿಸಬಲ್ಲವರಾಗಿದ್ದರು. 

ನಾನು ಪ್ರೊಸೆಸರ್, ಎಲ್ಲಾ ಸಮಸ್ಯೆಗಳಿಗೆ ಪರಿಹಾರ' ಎಂದು ಹೇಳುತ್ತಿದ್ದರು. ಆದ್ದರಿಂದ, ಕಂಪನಿಯನ್ನು ಪ್ರೊಸೆಸರ್ ಸಿಸ್ಟಮ್ಸ್ ಇಂಡಿಯಾ ಎಂದು ಕರೆಯಲಾಯಿತು ಎಂದು ಪ್ರಾಕ್ಸಿಸ್‌ನ ಕಾರ್ಯಕಾರಿ ಅಧ್ಯಕ್ಷೆ ಮತ್ತು ದಿವಂಗತ ಹರೀಂದ್ರನ್ ಅವರ ಪತ್ನಿ ನಂದನಾ ಇಶ್ಬಿಲಿಯಾ ಹೇಳುತ್ತಾರೆ. 

1970 ರ ದಶಕದಲ್ಲಿ ಜನತಾ ಸರ್ಕಾರ ಕೋಕಾಕೋಲಾ ಮತ್ತು ಇತರ ಬಹುರಾಷ್ಟ್ರೀಯ ಕಂಪನಿಗಳನ್ನು ಭಾರತದಿಂದ ಕಳುಹಿಸಿದ ನಂತರ ಐಬಿಎಂ ನಿರ್ಗಮಿಸಿತು. 50 ಮತ್ತು 60 ರ ದಶಕದ ಆರಂಭದಿಂದಲೂ ಭಾರತೀಯರು ಕಂಪ್ಯೂಟರ್‌ಗಳಿಗೆ ಪ್ರವೇಶವನ್ನು ಹೊಂದಿದ್ದರು, ಇದು ದೀರ್ಘಕಾಲದವರೆಗೆ ಹಂತಹಂತವಾಗಿ ಸ್ಥಗಿತಗೊಂಡಿತ್ತು. ಪಶ್ಚಿಮದಲ್ಲಿ, ಮೈಕ್ರೊಪ್ರೊಸೆಸರ್ ಕ್ರಾಂತಿಯು ಪ್ರಾರಂಭವಾಯಿತು. ಭಾರತಕ್ಕೆ ಕಂಪ್ಯೂಟರುಗಳ ಜೊತೆ ಅಮೇರಿಕಾ ನಿರ್ಬಂಧ ಹೇರಿದ್ದರಿಂದ ಭಾರತವು ತಂತ್ರಜ್ಞಾನಕ್ಕಾಗಿ ಅಮೆರಿಕಾ ಮೇಲೆ ಅವಲಂಬಿತವಾಗಲಿಲ್ಲ.

ಶಿಕ್ಷಣದಿಂದ ವ್ಯಾಪಾರ: ಪಿಎಸ್‌ಐ ತನ್ನ ಮಿನಿಕಂಪ್ಯೂಟರ್‌ನ ಆವೃತ್ತಿಯನ್ನು ನಿರ್ಮಿಸಿತು, ನಂತರ ಫೋರ್ಟ್ರಾನ್ 4 ಗೆ ಬೆಂಬಲ ನೀಡುವುದರೊಂದಿಗೆ ಶೈಕ್ಷಣಿಕ ಕಂಪ್ಯೂಟಿಂಗ್‌ಗೆ ಮತ್ತು ನಂತರ ವ್ಯಾಪಾರ ಕಂಪ್ಯೂಟರ್‌ಗಳಾಗಿ ಉಪಯುಕ್ತವಾದವು ಎಂದು ನಂದನಾ ಹೇಳುತ್ತಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT