ಆದಿ ಮಹೋತ್ಸವದಲ್ಲಿ ಸೀತಾಬೆನ್ 
ವಿಶೇಷ

'ಆದಿ ಮಹೋತ್ಸವ': ಗುಜರಾತ್ ಮೂಲದ ಬುಡಕಟ್ಟು ಮಹಿಳಾ ಉದ್ಯಮಿಯ ಯಶೋಗಾಥೆ!

ಸರಿಯಾದ ಪ್ರಯತ್ನ ಮತ್ತು ಸಮರ್ಪಣಾ ಮನೋಭಾವದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ಗುಜರಾತ್‌ನ ಸ್ಪೂರ್ತಿದಾಯಕ ಬುಡಕಟ್ಟು ಉದ್ಯಮಿ ತೋರಿಸಿದ್ದಾರೆ.

ಅಹಮದಾಬಾದ್: ಸರಿಯಾದ ಪ್ರಯತ್ನ ಮತ್ತು ಸಮರ್ಪಣಾ ಮನೋಭಾವದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ಗುಜರಾತ್‌ನ ಸ್ಪೂರ್ತಿದಾಯಕ ಬುಡಕಟ್ಟು ಉದ್ಯಮಿ  ತೋರಿಸಿದ್ದಾರೆ. ಗುಜರಾತಿನ ಧೈರ್ಯಶಾಲಿ ಬುಡಕಟ್ಟು ಮಹಿಳೆ ಸೀತಾಬೆನ್  ದೆಹಲಿಯ ಮೇಜರ್ ಧ್ಯಾನ್ ಚಂದ್ ನ್ಯಾಷನಲ್ ಸ್ಟೇಡಿಯಂನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ 'ಆದಿ ಮಹೋತ್ಸವ'ದಲ್ಲಿ ತನ್ನ ವ್ಯಾಪಾರದ ಪರಾಕ್ರಮವನ್ನು ತೋರಿಸುವ ಮೂಲಕ ಉದ್ಯಮ ಆಕಾಂಕ್ಷಿಗಳಿಗೆ ಸ್ಫೂರ್ತಿದಾಯಕರಾಗಿದ್ದಾರೆ.

ಗ್ರಾಮೀಣ ಗುಜರಾತಿಗಳು ಸರಿಯಾದ ಕೌಶಲ್ಯ, ಪರಿಶ್ರಮ ಮತ್ತು ಸಮರ್ಪಣೆಯೊಂದಿಗೆ ಹೇಗೆ ಯಶಸ್ಸನ್ನು ಸಾಧಿಸಬಹುದು ಎಂಬುದಕ್ಕೆ ವಜಿರ್‌ಭಾಯ್ ಕೊಚಾಡಿಯಾ ಒಂದು ಸ್ಪೂರ್ತಿದಾಯಕ ಉದಾಹರಣೆಯ ನಡುವೆ ಕಠಿಣ ಪರಿಶ್ರಮ, ಸಮರ್ಪಣೆಯಿಂದ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ, ಔಪಚಾರಿಕ ಶಿಕ್ಷಣವಲ್ಲ ಎಂಬುದನ್ನು ಸೀತಾಬೆನ್ ಸಾಬೀತುಪಡಿಸಿದ್ದಾರೆ.

ಗುಜರಾತ್ ನ ದಂಗ್ ಜಿಲ್ಲೆಯ ಸಪುತಾರಾಗೆ ಸೇರಿದ ಸೀತಾಬೆನ್,  ಕೃಷಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಆಕೆಯ  ಮದ್ಯವ್ಯಸನಿ ಪತಿ ಸೇರಿದಂತೆ ತೀರಿಸಿಕೊಂಡ ನಂತರ ಐದು ಸದಸ್ಯರ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದಳು. ಉದ್ಯೋಗಿಯಿಂದ ಉದ್ಯಮಿಯಾಗುವ ಸೀತಾಬೆನ್‌ನ ಪ್ರಯಾಣವ ಒಂದು ಕುತೂಹಲಕಾರಿ ಮತ್ತು ಪ್ರೇರಕವಾಗಿದೆ. ಅವರು ಚಕ್ರಿ, ಪಾಪಡ್ ಮತ್ತು ಇತರ ರೀತಿಯ ರಾಗಿ ಬಿಸ್ಕತ್ತು  ತಯಾರಿಸುವ ಮೂಲಕ ವ್ಯಾಪಾರದಲ್ಲಿ ತೊಡಗಿಸಿಕೊಂಡರು.  ಸೀತಾಬೆನ್ ಅವರ ಉತ್ಪನ್ನಗಳು ಗ ಗುಜರಾತ್‌ನಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಮಾರಾಟವಾಗಿವೆ.

ಫೆಬ್ರವರಿ 16 ರಿಂದ ಫೆಬ್ರವರಿ 27, 2023 ರವರೆಗೆ, ದೆಹಲಿಯಲ್ಲಿ ಆದಿ ಮಹೋತ್ಸವ  ಆಯೋಜಿಸಲಾಗಿದ್ದು, ಸೀತಾಬೆನ್ ಮಾರಾಟ ಮಳಿಗೆಯಲ್ಲಿಟ್ಟಿದ್ದ ರಾಗಿ ಬಿಸ್ಕತ್ ಗಳು ಎರಡ್ಮೂರು ದಿನಗಳಲ್ಲಿಯೇ ಮಾರಾಟವಾಗಿವೆ. ಆದಿ ಮಹೋತ್ಸವದ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರನ್ನು ಭೇಟಿಯಾದ ಉದ್ಯಮಿಗಳಲ್ಲಿ ಸೀತಾಬೆನ್ ಕೂಡ ಒಬ್ಬರು.

ಪ್ರಧಾನಿ ನರೇಂದ್ರ ಮೋದಿ ಸಣ್ಣ ಉದ್ಯಮದ ಬಗ್ಗೆ ಮಾತನಾಡುತ್ತಾ ತಮ್ಮೊಂದಿಗೆ ಮುಗುಳ್ನಗೆಯೊಂದಿಗೆ ಫೋಟೋ ತೆಗೆದುಕೊಂಡಿದ್ದಾಗಿ ಹೇಳುವ ಸೀತಾಬೆನ್, ಈಗ ಪ್ರತಿ ತಿಂಗಳು ರೂ 15,000 ದಿಂದ 20,000  ಗಳಿಸುತ್ತಿದ್ದು, ನನ್ನ ಕುಟುಂಬವನ್ನು ನೋಡಿಕೊಳ್ಳುತ್ತಿದ್ದೇನೆ.  ಈಗ ಡಂಗಿ ಆದಿವಾಸಿ ಮಹಿಳಾ ಖೆಡುತ್ ಉತ್ಪಾದಕ್  ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್‌ನ ಆಡಳಿತ ಮಂಡಳಿಯ  ಸದಸ್ಯನಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ. 

ದಕ್ಷತೆ, ಧೈರ್ಯ ಮತ್ತು ದೃಢಸಂಕಲ್ಪ ಹೊಂದಿರುವ ವ್ಯಕ್ತಿಗೆ ಗುಜರಾತ್‌ನ ಮತ್ತೊಂದುಉದಾಹರಣೆ ಎಂದರೆ ವಜಿರ್‌ಭಾಯ್ ಕೊಚಾಡಿಯಾ. ಭರೂಚ್ ಜಿಲ್ಲೆಯ ಹತಕುಂಡ್ ಗ್ರಾಮದಲ್ಲಿ ಅವರು ವಿವಿಧ ಬಿದಿರಿನ ವಸ್ತುಗಳನ್ನು ತಯಾರಿಸುತ್ತಾರೆ. ಅವರ ಕುಟುಂಬವು ಇಡೀ ಬಿದಿರಿನ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತದೆ. ಗುಜರಾತಿನ ಅನೇಕ ಯಶಸ್ವಿ ಬುಡಕಟ್ಟು ಉದ್ಯಮಿಗಳಲ್ಲಿ ಡ್ಯಾಂಗ್ ಮತ್ತು ಭರೂಚ್ ಜಿಲ್ಲೆಗಳ ಈ ಇಬ್ಬರು ಉದ್ಯಮಿಗಳು ಸೇರಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT