ತೃತೀಯ ಲಿಂಗಿ ಸನಮ್ ಹಾಜಿ 
ವಿಶೇಷ

ಬಾಗಲಕೋಟೆ: ಮನೆಯಿಂದ ಹೊರಹಾಕಲ್ಪಟ್ಟ ತೃತೀಯ ಲಿಂಗಿ ಈಗ ಯಶಸ್ವಿ ವ್ಯಾಪಾರಿ!

ಲಿಂಗತ್ವ ಕಾರಣಕ್ಕೆ ಅಪಹಾಸ್ಯ, ನಿಂದನೆಗೆ ಒಳಗಾಗಿ, ಜೀವನೋಪಾಯಕ್ಕಾಗಿ ಭಿಕ್ಷೆ ಬೇಡು ಅಥವಾ ಲೈಂಗಿಕ ಕಾರ್ಯಕರ್ತೆಯಾಗಿ ದುಡಿ ಎಂದು ಮನೆಯಿಂದ ಹೊರಹಾಕಲ್ಪಟ್ಟ  ಬಾಗಲಕೋಟೆಯ 22 ವರ್ಷದ ತೃತೀಯಲಿಂಗಿ ಸನಮ್ ಹಾಜಿ, ಈಗ ಯಶಸ್ವಿ ವ್ಯಾಪಾರಿಯಾಗಿದ್ದಾರೆ.

ಬಾಗಲಕೋಟೆ: ಲಿಂಗತ್ವ ಕಾರಣಕ್ಕೆ ಅಪಹಾಸ್ಯ, ನಿಂದನೆಗೆ ಒಳಗಾಗಿ, ಜೀವನೋಪಾಯಕ್ಕಾಗಿ ಭಿಕ್ಷೆ ಬೇಡು ಅಥವಾ ಲೈಂಗಿಕ ಕಾರ್ಯಕರ್ತೆಯಾಗಿ ದುಡಿ ಎಂದು ಮನೆಯಿಂದ ಹೊರಹಾಕಲ್ಪಟ್ಟ  ಬಾಗಲಕೋಟೆಯ 22 ವರ್ಷದ ತೃತೀಯಲಿಂಗಿ ಸನಮ್ ಹಾಜಿ, ಈಗ ಯಶಸ್ವಿ ವ್ಯಾಪಾರಿಯಾಗಿದ್ದಾರೆ. ತರಕಾರಿ ಮಾರಾಟ ಮೂಲಕ ಪ್ರತಿದಿನ ರೂ. 6,000 ಮೊತ್ತದ ವ್ಯಾಪಾರ-ವಹಿವಾಟು ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದು, ಲಿಂಗತ್ವ ಕಾರಣಕ್ಕೆ ಅಡ್ಡಹಾದಿಯಲ್ಲಿರುವ ಇತರ ತನ್ನ ಸಮುದಾಯಕ್ಕೆ ಮಾದರಿಯಾಗಿದ್ದಾರೆ. 

ಬಾಗಲಕೋಟೆಯಲ್ಲಿ ತರಕಾರಿ ಮತ್ತು ತಾಜಾ ಹಣ್ಣುಗಳ ದೊಡ್ಡ ಮಳಿಗೆ ತೆರೆಯುವುದು ನನ್ನ ಗುರಿಯಾಗಿದೆ. ನನನ್ನು ನಿಂದಿಸಿದ ಮತ್ತು ಕಾಲಿನಿಂದ ಒದೆದ ಜನರು ಈಗ ಗೌರವದಿಂದ ಮಾತನಾಡಿಸುತ್ತಾರೆ. ನನ್ನ ನಗರದಲ್ಲಿ ನನಗೊಂದು ಐಡೆಂಟಿಟಿ ಇದೆ ಎಂದು ಅವರು ಹೇಳಿಕೊಳ್ಳುತ್ತಾರೆ.

ಬಾಗಲಕೋಟೆಯ ಗೌರವಾಸ್ಥ ಕುಟುಂಬವೊಂದರಲ್ಲಿ ಜನಿಸಿದ (ಹೈದರ್ ಆಲಿ) ಸನಮ್ ಪ್ರೌಢಾವಸ್ಥೆ ತಲುಪಿದಾಗ ಸ್ತ್ರೀಲಿಂಗ ಲಕ್ಷಣ ಅರಿತು, ನಾನು ಹುಡುಗಿಯಂತೆ ಕಾಣುತ್ತಿದ್ದು, ಹಾಗೆಯೇ ಡ್ರೆಸ್ ಮಾಡಿಕೊಳ್ಳುತ್ತೇನೆ ಎಂದು ಮೊದಲು ತಾಯಿಗೆ ಹೇಳಿದೆ. ಆದರೆ, ಇದರಿಂದ ಆಘಾತಕ್ಕೊಳಗಾದ ತಾಯಿ, ನನ್ನನ್ನು ಮನೆಯಿಂದ ಹೊರಹಾಕುವುದಾಗಿ ಬೆದರಿಕೆ ಹಾಕಿದಳು. ನಂತರ, ಕುಟುಂಬದಲ್ಲಿ ಮಾತು ಹರಡುತ್ತಿದ್ದಂತೆ, ಅವರು ನನ್ನನ್ನು ಸರಿಪಡಿಸಲು ಎಲ್ಲ ರೀತಿಯಲ್ಲಿ ಪ್ರಯತ್ನಿಸಿದರು. ಕ್ಯಾನ್ಸರ್ ಪೀಡಿತ ನನ್ನ ತಾಯಿಯ ಆಸೆಯಂತೆ ಹುಡುಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವಂತೆ ನನ್ನನ್ನು ಬ್ಲಾಕ್‌ಮೇಲ್ ಮಾಡಿದರು. ನಾನು ಮುಗ್ಧ ಹುಡುಗಿಯ ಜೀವನವನ್ನು ನಾನು ಹಾಳುಮಾಡಲು ಬಯಸಲಿಲ್ಲ. ಹೀಗಾಗಿ ಕುಟುಂಬದ ವಿರುದ್ಧವೇ ತಿರುಗಿಬಿದ್ದಿದ್ದಾಗಿ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. 

ತದನಂತರ ಜೀವನೋಪಾಯಕ್ಕಾಗಿ ಭಿಕ್ಷೆ ಬೇಡಲು ಮತ್ತು ಲೈಂಗಿಕ ಕೆಲಸ ಮಾಡಲು ಪ್ರಾರಂಭಿಸಿದೆ. ಅದಕ್ಕಾಗಿ ನನ್ನನ್ನು ನಾನು ದ್ವೇಷಿಸುತ್ತಿದ್ದೆ, ಆದರೆ ಬೇರೆ ಆಯ್ಕೆ ಇರಲಿಲ್ಲ. ಆಗ  ಸಮುದಾಯದ 'ಮಿಲನ ಸಂಘ'ದ ಸಮೀರ್ ಕರಜಗಿ ಭೇಟಿಯಾಯಿತು. ಅವರು ಸಲಹೆಯಂತೆ ಲೈಂಗಿಕ ದೃಷ್ಟಿಕೋನ ಅರ್ಥಮಾಡಿಕೊಳ್ಳಲು ಸಾಕಷ್ಟು ನೆರವಾಯಿತು ಎಂದು ಸಮನ್ ವಿವರಿಸಿದರು. 

ಸನಮ್ ಹಾಜಿ

ಹೈದರ್ 13-14 ವರ್ಷ ವಯಸ್ಸಿನವರಾಗಿದ್ದಾಗ ನನ್ನ ಬಳಿಗೆ ಬಂದ ಹಾಗೂ ನಾನು ಅವನ ಶಿಕ್ಷಣದ ಮೇಲೆ ಗಮನ ಕೇಂದ್ರೀಕರಿಸಲು ಹೇಳಿದೆ. ಆದರೆ ಸಮಾಜವು ಅವನ ಲಿಂಗ ಬದಲಾವಣೆಯನ್ನು ವಿರೋಧಿಸಿತು. ಆತ ಮಹಿಳೆಯಂತೆ ಡ್ರೆಸ್ಸಿಂಗ್ ಮಾಡಲು ಪ್ರಾರಂಭಿಸಿದ್ದ, ಮೆಹೆಂದಿ, ಬಳೆಗಳನ್ನು ಧರಿಸುತ್ತಿದ್ದ ಹೈದರ್ ಕ್ರಮೇಣವಾಗಿ ಸನಮ್ ಆಗಿ ರೂಪಾಂತರವಾದಳು ಎಂದು ಸಮೀರ್ ತಿಳಿಸಿದರು.

ಬಿಪಿಎಫ್‌ನ ಮಾರುಕಟ್ಟೆ ಆಧಾರಿತ ಜೀವನೋಪಾಯ ವರ್ಧನೆ (ಮೂವ್) ಉದ್ಯಮಶೀಲತಾ ತರಬೇತಿ ಕಾರ್ಯಕ್ರಮದಲ್ಲಿ ಶಿಕ್ಷಣ ಪಡೆದ ಸನಮ್ ಶೀಘ್ರದಲ್ಲೇ ತರಕಾರಿ ಮಾರಾಟಗಾರರಾಗಿ ಬದಲಾದರು. ಇದರಿಂದ ಭಿಕ್ಷಾಟನೆ ಮತ್ತು ಲೈಂಗಿಕ ಕಾರ್ಯಕರ್ತೆಯ ಕೆಲಸ ನಿಲ್ಲಿಸಿದೆ. ಈಗ ನಗರ ಸಭೆಯವರು ತರಕಾರಿ ಮಾರಾಟ ಮಾಡಲು ಅಂಗಡಿ ಕೊಟ್ಟಿದ್ದಾರೆ. ಸಮಾಜದಿಂದ ಸಿಗುವ ಗೌರವ ಮತ್ತು ಪ್ರೀತಿ ನನ್ನ ಬದುಕನ್ನೇ ಬದಲಿಸಿದೆ ಎಂದು ಸನಮ್ ಹೇಳುತ್ತಾರೆ. ಆಕೆಯ ಕುಟುಂಬವು ಅವಳನ್ನು ಮರಳಿ ಸ್ವೀಕರಿಸಿದ್ದು, ಅವರು ಈಗ ನವನಗರದಲ್ಲಿ ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದಾರೆ.

"ಟ್ರಾನ್ಸ್ಜೆಂಡರ್ ಸಮುದಾಯದ ಹೊಸ ಅಧ್ಯಯನ ಒಟ್ಟು ಅಸಮಾನತೆಗಳನ್ನು ಬಹಿರಂಗಪಡಿಸಿದೆ ಎಂದು ಬಿಪಿಎಫ್ ಕಾರ್ಯನಿರ್ವಾಹಕ ನಿರ್ದೇಶಕಿ ಸಂಗೀತಾ ಪುರುಷೋತ್ತಮನ್ ಹೇಳಿದ್ದಾರೆ. ಬಿಪಿಎಫ್ ಬೆಂಗಳೂರು ಮೂಲದ ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿದೆ. ಸಾಲಿಡಾರಿಟಿ ಫೌಂಡೇಶನ್ ಮತ್ತು ಸಂಗಮ ಸಹಯೋಗದೊಂದಿಗೆ ಬಿಪಿಎಫ್ ತೃತೀಯ ಲಿಂಗಿಗಳಂತ ದುರ್ಬಲ ಸಮುದಾಯಗಳು ಸ್ವಾವಲಂಬಿಯಾಗಲು ಮತ್ತು ಗೌರವಯುತ ಜೀವನವನ್ನು ನಡೆಸಲು ತಮ್ಮ ಆರ್ಥಿಕ ಸಾಮರ್ಥ್ಯವನ್ನು ಸಾಧಿಸಲು ಸಹಾಯ ಮಾಡುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT