ಕೊಳಚೆ ಪ್ರದೇಶದ ಮಹಿಳೆಯರು ರಚಿಸಿದ ಚಿತ್ರಕಲೆ 
ವಿಶೇಷ

'ಅಲ್ಲಿ ಸೇರೋಣ': ಮಹಿಳಾ ಕಲ್ಯಾಣಕ್ಕಾಗಿ ಮಾರತ್ ಹಳ್ಳಿ ಸ್ಲಂ ಬೋರ್ಡ್ ನಲ್ಲಿ ಕಲೆ-ಕುಂಚ ಬಳಕೆ!

ಸಮಾಜದಲ್ಲಿ ಬಡವರು-ಶ್ರೀಮಂತರ ನಡುವಿನ ವ್ಯತ್ಯಾಸಗಳ ಮಧ್ಯೆ ಸೇತುವೆಯಾಗಿ ಕಲೆ ಕೆಲಸ ಮಾಡುತ್ತದೆ ಎಂಬುದಕ್ಕೆ ಈ ಕಾರ್ಯಕ್ರಮ ನಿದರ್ಶನ. 

ಬೆಂಗಳೂರು: ಸಮಾಜದಲ್ಲಿ ಬಡವರು-ಶ್ರೀಮಂತರ ನಡುವಿನ ವ್ಯತ್ಯಾಸಗಳ ಮಧ್ಯೆ ಸೇತುವೆಯಾಗಿ ಕಲೆ ಕೆಲಸ ಮಾಡುತ್ತದೆ ಎಂಬುದಕ್ಕೆ ಈ ಕಾರ್ಯಕ್ರಮ ನಿದರ್ಶನ. 

ಬೆಂಗಳೂರಿನ ಮಾರತ್ತಹಳ್ಳಿ ಕೊಳಚೆ ನಿಗಮದ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಮಹಿಳೆಯರು ಅನೌಪಚಾರಿಕ ವಲಯದಲ್ಲಿ ಕೆಲಸ ಮಾಡುವವರು. ಸಾಮಾಜಿಕ ಜವಾಬ್ದಾರಿಯ ಮಿತಿಯಿಂದ ಮೀರಿ ಅವರು ಸಮುದಾಯವನ್ನು ನಿರ್ಮಿಸುತ್ತಿದ್ದಾರೆ, ಈ ಮೂಲಕ ತಮ್ಮನ್ನು ತಾವು ಸಬಲೀಕರಣಗೊಳಿಸುತ್ತಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸಲು ಭಾಷೆಯ ಅಡೆತಡೆಗಳನ್ನು ಮೀರಿ, ‘ಕಲೆ’ ಎಂಬ ಮಿತಿಯಿಲ್ಲದ ಮಾಧ್ಯಮದ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. 

ಇದರ ಹೆಸರು 'ಅಲ್ಲಿ ಸೇರೋಣ' ಇಂಗ್ಲಿಷಿನಲ್ಲಿ ಹೇಳುವುದಾದರೆ 'ಲೆಟ್ಸ್ ಮೀಟ್ ದೇರ್' ಎಂದು. ಈ ಸಾಮಾಜಿಕ ಪ್ರಭಾವದ ಆಂದೋಲನ 'ಅಲ್ಲಿ ಸೇರೋಣ' ಬಡವರು-ಶ್ರೀಮಂತರ ನಡುವಿನ ಅಂತರವನ್ನು ನಿವಾರಿಸುವ ಗುರಿಯನ್ನು ಹೊಂದಿದೆ. ನಗರದ ಜಂಜಾಟದ ಒತ್ತಡ ಜೀವನ ಮಧ್ಯೆ ಅವಕಾಶ ವಂಚಿತ ಮಹಿಳೆಯರಿಗೆ ತಮ್ಮ ಸಮಸ್ಯೆಗಳಿಗೆ ಸಹಾಯ ಕಂಡುಕೊಳ್ಳಲು ನೆರವಾಗುತ್ತಿದೆ. ನಾಗರಿಕ ಸಮಾಜದ ಗುಂಪುಗಳು, ಚಿಂತನೆಕಾರರಿಂದ ಅಲ್ಲಿ ಸೆರೋಣಾ ನಗರದ ಅನೌಪಚಾರಿಕ ವಲಯದಲ್ಲಿ ದುಡಿಯುವ ಹೆಣ್ಣುಮಕ್ಕಳ ಕಲ್ಪನೆಗಳನ್ನು ಮುಂಚೂಣಿಗೆ ತರುತ್ತದೆ.

ಅಲ್ಲಿ ಸೇರೋಣ ತಂಡ ಕರ್ನಾಟಕ ಸ್ಲಂ ಡೆವಲಪ್‌ಮೆಂಟ್ ಬೋರ್ಡ್ ಅಡಿಯಲ್ಲಿ ಬರುವ ಮಾರತಹಳ್ಳಿಯ ಸ್ಲಂ ಬೋರ್ಡ್ ಕ್ವಾರ್ಟರ್ಸ್‌ಗೆ ಬಂದಾಗ ಅಲ್ಲಿ ವಿವಿಧ ಸಂಸ್ಕೃತಿಗಳು, ಭೌಗೋಳಿಕತೆ ಮತ್ತು ಭಾಷೆಯ ಜನರನ್ನು ಕಂಡುಕೊಂಡರು, ಅವರಲ್ಲಿ ಹೆಚ್ಚಿನವರು ಅನೌಪಚಾರಿಕ ವಲಯದಲ್ಲಿ ಕೆಲಸ ಮಾಡುವವರು. 

ಈ ಬಡಜನರನ್ನು ಶಕ್ತಿಯುತಗೊಳಿಸಲು ಮತ್ತು ಸಶಕ್ತಗೊಳಿಸಲು ಅಲ್ಲಿ ಸೇರೋಣ ತಂಡ ಕೆಲಸ ಮಾಡುತ್ತದೆ. ಕಳೆದ ಎಂಟು ತಿಂಗಳುಗಳಲ್ಲಿ, ಕ್ವಾರ್ಟರ್ಸ್‌ನ ಮಹಿಳೆಯರು ತೊಡಗಿಸಿಕೊಂಡಿದ್ದಾರೆ, ವಾರಕ್ಕೊಮ್ಮೆ ಕನಿಷ್ಠ ಎರಡು ಗಂಟೆಗಳ ಕಾಲ ಸಭೆ ಸೇರುತ್ತಾರೆ, ಅಲ್ಲಿ ಅವರು ತಮ್ಮ ಕಲೆಯನ್ನು ತೋರ್ಪಡಿಸಿಕೊಳ್ಳುತ್ತಾರೆ. ತಮ್ಮ ಕಷ್ಟ-ಸುಖಗಳನ್ನು ಹೇಳಿಕೊಳ್ಳುತ್ತಾರೆ. ರಂಗೋಲಿಗಳನ್ನು ಬಿಡಿಸುತ್ತಾರೆ, ಬಟ್ಟೆ, ದಿಂಬು, ಬೆಡ್ ಶೀಟ್ ಗಳನ್ನು ಹೊಲಿಯುವುದು, ಗೋಡೆಗಳನ್ನು ಚಿತ್ರ ಬಿಡುಸುವ ಕೆಲಸ ಮಾಡುತ್ತಾರೆ. ಇದು ಸಮುದಾಯವನ್ನು ಹತ್ತಿರಕ್ಕೆ ತಂದಿದೆ, ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಅಲ್ಲಿ ಸೇರೋಣ ಎನ್ ಜಿಒ ಇವರಿಗೆ ಸೂಕ್ತ ತರಬೇತಿ ನೀಡಿ ಅವರೊಳಗಿನ ಕಲೆಯನ್ನು ಅನಾವರಣಗೊಳಿಸುತ್ತಿದೆ. 

ಆಲ್ಲಿ ಸೆರೋಣ ತಂಡದ ಕಲೆಕ್ಟಿವ್ ಕ್ರಿಯೇಟಿವ್ ಸ್ಟ್ರಾಟೆಜಿಸ್ಟ್ ತನಿಶಾ ಅರೋರಾ ನ್ಯೂ ಸಂಡೇ ಎಕ್ಸ್‌ಪ್ರೆಸ್‌ ಪ್ರತಿನಿಧಿ ಜೊತೆ ಮಾತನಾಡುತ್ತಾ, “ನಾವು ಕಲೆಯ ಮೂಲಕ ಮಹಿಳೆಯರನ್ನು ಹತ್ತಿರ ತಂದು ಕಲೆ ಅಭ್ಯಾಸಗಳು ಮತ್ತು ಸಂಸ್ಕೃತಿ ಮೂಲಕ ಅವರ ಜೀವನಕ್ಕೆ ಹತ್ತಿರವಾಗಲು ನೋಡುತ್ತಿದ್ದೇವೆ. ಅವರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುತ್ತಿದ್ದೇವೆ ಎನ್ನುತ್ತಾರೆ. 

ಕ್ರಿಯೇಟಿವ್ ಸ್ಟ್ರಾಟಜಿಸ್ಟ್ ತನೀಶ್ ಅರೋರ 

ಈ ಸಂಸ್ಥೆ ಅಭಿಯಾನ ಮೂಲಕ 600 ಕ್ಕೂ ಹೆಚ್ಚು ಮಹಿಳೆಯರಿಗೆ ಅನುಕೂಲವಾಗಿದೆ. ನಗರದ ಆರ್ಥಿಕ ಸ್ಥಿತಿಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತಿದ್ದೇವೆ ಎಂದರು. 

ಕಲೆಯ ಮೂಲಕ ನಾವು ಒಂದಾಗುತ್ತೇವೆ: ಕೊಳಗೇರಿಯ ಕಟ್ಟಡಗಳ ಗೋಡೆಗಳಲ್ಲಿ ಇಂದು ಸುಂದರವಾದ ಕಲಾಕೃತಿಗಳು ಮತ್ತು ಭಿತ್ತಿಚಿತ್ರಗಳಿಂದ ಕಂಗೊಳಿಸುತ್ತಿವೆ. ಮಹಿಳೆಯರನ್ನು ಒಟ್ಟುಸೇರಿಸುತ್ತಿವೆ. ಮಹಿಳೆಯರು ತಮ್ಮ ಜೀವನವನ್ನು ಗುರುತಿಸಿ ಗೋಡೆಗಳ ಮೇಲೆ ಪ್ರತಿನಿಧಿಸುತ್ತಿದ್ದಾರೆ. ಹಿಂದೆ, ಗೋಡೆಗಳು ಖಾಲಿಯಾಗಿದ್ದವು. ಜನರು ಕಸವನ್ನು ತಂದು ಸುರಿಯುತ್ತಿದ್ದರು. ಈಗ, ನಮ್ಮ ಪ್ರದೇಶವು ಬಹಳ ಸೊಗಸಾಗಿದೆ ಎಂದು ನಿವಾಸಿ ಸೋಫಿಯಾ ಹೇಳುತ್ತಾರೆ.

ಏಕೆ ಸೇರೋಣ? ಒಂದು ಕಲಾ ವೇದಿಕೆಯಲ್ಲಿ ಸಾವಿರ ಕಥೆಗಳೊಂದಿಗೆ ಮಹಿಳೆಯರು ಒಟ್ಟುಗೂಡುವುದು, ಒಬ್ಬರನ್ನೊಬ್ಬರು ಬೆಂಬಲಿಸುತ್ತಲೇ ದೈನಂದಿನ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಲು ವೇದಿಕೆ ಪ್ರೇರೇಪಿಸಿದೆ. ಸಾರ್ವಜನಿಕ ಸಾರಿಗೆ ಈ ಪ್ರದೇಶದಲ್ಲಿ ನಿಲ್ಲಲು ಇದರಿಂದ ಸಹಾಯವಾಗಿದೆ ಎಂದು ಇಲ್ಲಿನ ನಿವಾಸಿ ಚಾಂದ್ ಹೇಳುತ್ತಾರೆ. 

ಒಟ್ಟಾರೆಯಾಗಿ ಸೇರೋಣ ತಂಡದಿಂದ ಇಲ್ಲಿನ ನಿವಾಸಿಗಳ ಸಾಮಾಜಿಕ, ಆರ್ಥಿಕ, ಆರೋಗ್ಯ, ಜೀವನಶೈಲಿ ಬದಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT