ಗಜೇಂದ್ರಗಡದ ಗೋಗೇರಿ ಗ್ರಾಮದ ರೊಟ್ಟಿ ಘಟಕವೊಂದರಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು. 
ವಿಶೇಷ

ರೊಟ್ಟಿ ತಯಾರಿಕೆ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡ ಗಜೇಂದ್ರಗಢ ಮಹಿಳೆಯರು!

ಗಜೇಂದ್ರಗಢ ತಾಲೂಕಿನ ಮಹಿಳೆಯರು ಕೋವಿಡ್ ಸಂದರ್ಭದಲ್ಲಿ ಸ್ವಾಲವಂಬಿ ಬದುಕು ಕಟ್ಟಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ರೊಟ್ಟಿ ಮಾಡುವ ಕೌಶಲ್ಯವನ್ನೇ ವೃತ್ತಿಯಾಗಿ ಬದಲಿಸಿಕೊಂಡಿದ್ದಾರೆ.

ಗದಗ: ಕೋವಿಡ್-19 ಹತ್ತಾರು ರೀತಿಯ ದುಷ್ಪರಿಣಾಮ ಬೀರಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದರ ನಡುವೆ ಒಂದು ಆಶಾದಾಯಕ ಬೆಳವಣಿಗೆಯೂ ನಡೆದಿದೆ ಎಂದರೆ ಅಚ್ಚರಿಯಾಗುವುದಂತೂ ನಿಜವೇ. ಕೊರೋನಾ ವೇಳೆ ಇಡೀ ವಿಶ್ವವೇ ಆರ್ಥಿಕ ಸಂಕಷ್ಟ ಎದುರಿಸುವಂತಾಗಿತ್ತು. ಆದರೆ, ಇಲ್ಲಿನ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಈ ಸಮಯ ಸಹಾಯ ಮಾಡಿದೆ.

ಗಜೇಂದ್ರಗಢ ತಾಲೂಕಿನ ಮಹಿಳೆಯರು ಕೋವಿಡ್ ಸಂದರ್ಭದಲ್ಲಿ ಸ್ವಾಲವಂಬಿ ಬದುಕು ಕಟ್ಟಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ರೊಟ್ಟಿ ಮಾಡುವ ಕೌಶಲ್ಯವನ್ನೇ ವೃತ್ತಿಯಾಗಿ ಬದಲಿಸಿಕೊಂಡಿದ್ದಾರೆ.

ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಆದಾಯ ಗಳಿಸಲು ಸಾಧ್ಯವಾಗದೆ ಹಲವರು ಕಂಗಾಲಾಗಿದ್ದರು. ಈ ವೇಳೆ ಇಲ್ಲಿನ ಮಹಿಳೆಯರಿಗೆ ಜಿಲ್ಲಾ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಂಜೀವಿನಿ ಯೋಜನೆ ಬಗ್ಗೆ ತಿಳಿಸಿದ್ದಾರೆ. ಯೋಜನೆ ಮೂಲಕ ಸಾಲ ಪಡೆದು ಸ್ವಾವಲಂಬಿ ಬದಕು ಕಟ್ಟಿಕೊಳ್ಳುವ ಕುರಿತು ತಿಳಿಸಿದ್ದಾರೆ.

ಯೋಜನೆಯಿಂದ ಸಾಲ ಪಡೆದ ಮಹಿಳೆಯರು ಹಿಟ್ಟಿನ ಗಿರಣಿಗಳನ್ನು ಖರೀದಿಸಿ, ಅದರ ಮೂಲಕ ರೊಟ್ಟಿಗಳನ್ನು ತಯಾರಿಸಿ ಮಾರಾಟ ಮಾಡಲು ಆರಂಭಿಸಿದ್ದಾರೆ. ಇದೀಗ ಇದೇ ದೊಡ್ಡ ವೃತ್ತಿಯಾಗಿ ಬೆಳೆದಿದೆ. ಇಂದು ಇಲ್ಲಿನ ನೂರಾರು ಮಹಿಳೆಯರು ಗುಂಪುಗಳನ್ನು ಕಟ್ಟಿಕೊಂಡು ರೊಟ್ಟಿ ತಯಾರಿಸಿ ನಗರಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.

ಆರಂಭದಲ್ಲಿ ಈ ಉಪಕ್ರಮಕ್ಕೆ ಹಲವು ಮಹಿಳೆಯರು ಹಿಂದೇಟು ಹಾಕಿದ್ದರು. ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸಿರಲಿಲ್ಲ. ಪ್ರತೀನಿತ್ಯ ಎಲ್ಲರ ಮನೆಯಲ್ಲೂ ರೊಟ್ಟಿಗಳನ್ನು ಮಾಡುವುದರಿಂದ ಇದರಿಂದ ಲಾಭ ಸಿಗುವುದಿಲ್ಲ ಎಂದು ತಿಳಿದಿದ್ದರು. ಆದರೆ, ಜಿಲ್ಲಾ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ರೊಟ್ಟಿ ತಯಾರಿಸುವ ಯಂತ್ರ ಹಾಗೂ ಗಿರಣಿಗಳನ್ನು ಖರೀದಿ ಮಾಡುವಂತೆ ತಿಳಿಸಿದ್ದರು.

ಜನರಿಂದ ಉತ್ತಮ ಪ್ರತಿಕ್ರಿಯೆಗಳು ಬರಲು ಆರಂಭವಾದಾಗ ಹೆಚ್ಚಿನ ಮಹಿಳೆಯರು ಈ ಬಗ್ಗೆ ಒಲವು ತೋರಿದರು. ಇಂದು ಸಾಕಷ್ಟು ಮಹಿಳೆಯರು ರೊಟ್ಟಿಗಳನ್ನು ತಯಾರಿಸಿ, ಊರು ಹಾಗೂ ನಗರಗಳಿಗೆ ಕಳುಹಿಸುತ್ತಿದ್ದಾರೆ.

       ರೊಟ್ಟಿ ತಯಾರಿಸುವ ಯಂತ್ರವನ್ನು ಬಳಸುತ್ತಿರುವ ಮಹಿಳೆ.

ಈ ಉಪಕ್ರಮವು ಮೊದಲು ಗೋಗೇರಿ ಗ್ರಾಮದಲ್ಲಿ ಪ್ರಾರಂಭವಾಗಿತ್ತು. ಅಲ್ಲಿನ ಮಹಿಳೆಯರು. ಜೋಳದ ರೊಟ್ಟಿಗಳನ್ನು ತಯಾರಿಸಿ ಮಾರಾಟ ಮಾಡಲು ಆರಂಭಿಸಿದ್ದರು. ನೂರಾರು ಮಹಿಳೆಯರು ಇದರಲ್ಲಿ ಕೈಜೋಡಿಸಿದ್ದರು. ಗದಗ ಹಾಗೂ ಹತ್ತಿರದ ಪಟ್ಟಣಗಳಲ್ಲಿನ ಹೋಟೆಲ್, ಡಾಬಾ ಹಾಗೂ ಇತರೆ ಅಂಗಡಿಗಳಿಂದ ಹೆಚ್ಚೆಚ್ಚು ಆರ್ಡರ್ ಗಳು ಬರಲು ಆರಂಭವಾಗಿತ್ತು. ನಂತರ ಈ ಉಪಕ್ರಮ ಬಹುತೇಕ ಗ್ರಾಮಗಳಿಗೆ ತಿಳಿದು, ಇತರೆ ಮಹಿಳೆಯರು ರೊಟ್ಟಿ ತಯಾರಿಕೆಯಲ್ಲಿ ತೊಡಗಿಕೊಂಡರು.

ಇಂದು ಸಾಕಷ್ಟು ಮಹಿಳೆಯರು ರೊಟ್ಟಿ ತಯಾರಿಸುವ ಘಟಕಗಳನ್ನೇ ಹೊಂದಿದ್ದಾರೆ. ಆರಂಭದಲ್ಲಿ ಜೋಳರೊಟ್ಟಿಗಳನ್ನು ತಯಾರಿಸಿ, ಮಾರಾಟ ಮಾಡಲಾಗುತ್ತಿತ್ತು. ಆಧುನಿಕ ಯುಗ ಪೈಪೋಟಿ ಬೆನ್ನಲ್ಲೇ ಇಂದು ರಾಗಿ ರೊಟ್ಟಿ, ಚಪಾತಿ, ಸಿರಿಧಾನ್ಯದ ರೊಟ್ಟಿಗಳನ್ನೂ ತಯಾರಿಸಿ, ಮಾರಾಟ ಮಾಡುತ್ತಿದ್ದಾರೆ.

ಸಾಂಕ್ರಾಮಿಕ ರೋಗ ಹಲವರ ಕೈಗಳನ್ನು ಕಟ್ಟಿ ಹಾಕಿತ್ತು. ಸುಮ್ಮನೆ ಕುಳಿತಿದ್ದ ಮಹಿಳೆಯರಿಗೆ ಈ ಉಪಕ್ರಮ ಸಹಾಯ ಮಾಡಿತು. ಸಂಜೀವಿನಿ ಯೋಜನೆ ಉತ್ತಮ ರೀತಿಯಲ್ಲಿ ಕೆಲಸ ಮಾಡಿತು. ಸ್ವಸಹಾಯ ಸಂಘಗಳೂ ನೆರವಿಗೆ ಬಂದಿದ್ದವು. ಇದರಿಂದ ರೊಟ್ಟಿ ತಯಾರಿಗೆ ಯಂತ್ರ ಹಾಗೂ ಹಿಟ್ಟಿನ ಗಿರಣಿ ಯಂತ್ರಗಳನ್ನು ಖರೀದಿ ಮಾಡಿದೆವು. ಇಂದು ಗಜೇಂದ್ರಗಢ ಹಾಗೂ ಹತ್ತಿರದ ನಗರಗಳ ಹೋಟೆಲ್, ಡಾಬಾ, ಇತರೆ ಅಂಗಡಿಗಳಿಗೆ ರೊಟ್ಟಿ, ಚಪಾತಿ ಹಾಗೂ ರಾಗಿ ರೊಟ್ಟಿಗಳನ್ನು ಸರಬರಾಜು ಮಾಡುತ್ತಿದ್ದೇವೆ.

ಜೈ ಶಿವಾಜಿ ಸಂಜೀವಿನಿ ಮಹಿಳಾ ಬಳಗದ ಮಹಿಳೆಯರೊಂದಿಗೆ ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳು

ನಮ್ಮಲ್ಲಿ ಹಲವರು ಇನ್ನೂ ಸಾಂಪ್ರದಾಯಿಕ ರೀತಿಯಲ್ಲಿ ರೊಟ್ಟಿಗಳನ್ನು ತಯಾರಿಸುತ್ತಾರೆ. ಅವರು ಯಂತ್ರಗಳನ್ನು ಬಳಸುವುದಿಲ್ಲ. ನಮ್ಮನ್ನು ಬೆಂಬಲಿಸಿದ ಮತ್ತು ಪ್ರೋತ್ಸಾಹಿಸಿದ ಜಿಲ್ಲಾ ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆಂದು ರೊಟ್ಟಿ ಘಟಕದ ಮಾಲೀಕರಾದ ಸುಜಾತಾ ಹೊಸಮನಿ ಅವರು ಹೇಳಿದ್ದಾರೆ.

ತಿಂಗಳಿಗೆ ರೂ 8,000-9,000 ಯಿಂದ ದಿನಕ್ಕೆ ರೂ 6,000-8,000 ವರೆಗೆ...

ಗಜೇಂದ್ರಗಢದ ತಾಲೂಕು ಕಾರ್ಯನಿರ್ವಹಣಾಧಿಕಾರಿ ಡಿ.ಮೋಹನ್ ಮಾತನಾಡಿ, ''ಗ್ರಾಮೀಣ ಪ್ರದೇಶದಲ್ಲಿ ಅನೇಕ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಲು ಈ ಯೋಜನೆ ಸಹಕಾರಿಯಾಗಿದೆ. ಗೋಗೇರಿ ಗ್ರಾಮದ ಜೈ ಶಿವಾಜಿ ಸಂಜೀವಿನಿ ಮಹಿಳಾ ಬಳಗ ಹಾಗೂ ಇತರರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರೆಲ್ಲರೂ ಇತರರಿಗೆ ಮಾದರಿಯಾಗಿದ್ದಾರೆ. ಒಂದು ಕಾಲದಲ್ಲಿ ದೈನಂದಿನ ಕೂಲಿಗಾಗಿ ಹುಡುಕುತ್ತಿದ್ದ ಮಹಿಳೆಯರು ಈಗ ಇತರರಿಗೆ ಉದ್ಯೋಗವನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅನೇಕ ಮಹಿೆಯರು ಯೋಜನೆಯಿಂದ ತಿಂಗಿಗೆ 9,000 ರೂ ಗಳಿಸುತ್ತಿದ್ದರು. ಇಂದು ದಿನಕ್ಕೆ 6,000-8,000 ರೂ. ಗಳಿಸುತ್ತಿದ್ದಾರೆ. ಮಹಿಳೆಯರಿಗೆ ಸಹಾಯ ಮಾಡಲು ಮುಂದೆ ಬಂದ ಕೆನರಾ ಬ್ಯಾಂಕ್‌ಗೂ ನಾವು ಧನ್ಯವಾದ ಹೇಳುತ್ತೇವೆಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Idre Nemdiyaag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

SCROLL FOR NEXT