ವಿಶೇಷ

ಅಯೋಧ್ಯೆ ರಾಮ ಲಲ್ಲಾ ಪ್ರತಿಮೆಗೆ ಬಳಸಿದ ಅದೇ ಕಲ್ಲು ಬಳಸಿ ಹನುಮನ ಮೂರ್ತಿ ಕೆತ್ತಲು ಕೊಪ್ಪಳ ಶಿಲ್ಪಿ ನಿರ್ಧಾರ

Sumana Upadhyaya

ಕೊಪ್ಪಳ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಮೆ ನಿರ್ಮಾಣಕ್ಕೆ ಬಳಸಿರುವ ಅದೇ ಕಲ್ಲಿನ ಭಾಗಗಳಿಂದ ಹನುಮಾನ್ ದೇವರ ಸಣ್ಣ ವಿಗ್ರಹವನ್ನು ಕೆತ್ತಲು ಕೊಪ್ಪಳದ ಶಿಲ್ಪಿಯೊಬ್ಬರು ಪ್ರಯತ್ನಿಸುತ್ತಿದ್ದಾರೆ. 

ಈ ಶಿಲ್ಪಿಯ ಹೆಸರು ಪ್ರಕಾಶ್ ಶಿಲ್ಪಿ. ಅವರು ಮೈಸೂರಿಗೆ ಭೇಟಿ ನೀಡಿದ್ದಾಗ ಅಯೋಧ್ಯೆಗೆ ಕಳುಹಿಸಿದ ಕಲ್ಲಿನ ಉಳಿದ ಭಾಗಗಳಿಂದ ತನಗೆ ನೀಡುವಂತೆ ಕಲ್ಲಿನ ವ್ಯಾಪಾರಿ ಶ್ರೀನಿವಾಸ್ ಅವರನ್ನು ಕೇಳಿಕೊಂಡರು. ಈಗ ಅಯೋಧ್ಯೆಯಲ್ಲಿರುವ ರಾಮಲಲ್ಲಾ ವಿಗ್ರಹ ನಿರ್ಮಾಣದ ಕಲ್ಲಿನ ತುಂಡುಗಳಿಂದಲೇ ಹನುಮಂತನ ವಿಗ್ರಹವನ್ನು ಕೆತ್ತಲಿದ್ದು, ಕೊಪ್ಪಳದ ಸುಬ್ಬಣಾಚಾರ್ ಮಠದಲ್ಲಿ ಶೀಘ್ರದಲ್ಲಿಯೇ ಪ್ರತಿಷ್ಠಾಪಿಸಲಾಗುತ್ತದೆ. 

ಡಿಸೆಂಬರ್ 6, 2022 ರಂದು, ಶಿಲ್ಪಿ ವಿಜಯದಾಸ ಪ್ರತಿಮೆಯನ್ನು ಕೆತ್ತಲು ಕಲ್ಲಿನ ಬ್ಲಾಕ್ ನ್ನು ಖರೀದಿಸಲು ಆರಂಭದಲ್ಲಿ ಶ್ರೀನಿವಾಸ್ ಅವರನ್ನು ಭೇಟಿಯಾಗಿದ್ದರು, ಆದರೆ ಅದರ ಸಣ್ಣ ಗಾತ್ರದ ಕಾರಣ ಅವರು ಅದನ್ನು ಖರೀದಿಸದೆ ವಾಪಸ್ಸಾಗಿದ್ದರು. ನಂತರ ಅದೇ ಕಲ್ಲನ್ನು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಮೆಗೆ ಆಯ್ಕೆ ಮಾಡಲಾಗಿದೆ ಎಂದು ಅವರಿಗೆ ಗೊತ್ತಾಯಿತು. 

ಆಗ, ಶಿಲ್ಪಿ ಶ್ರೀನಿವಾಸ್ ಅವರಿಗೆ ಆ ದೊಡ್ಡ ಕಲ್ಲಿನಿಂದ ಉಳಿದಿರುವ ಭಾಗವನ್ನು ನೀಡುವಂತೆ ಕೇಳಿಕೊಂಡರು, ಅದನ್ನು ಕೊಪ್ಪಳಕ್ಕೆ ಮನೆಗೆ ತೆಗೆದುಕೊಂಡು ಹೋಗಿ ಅದರಿಂದ ಹನುಮಂತನ ವಿಗ್ರಹವನ್ನು ಕೆತ್ತಬಹುದು ಎಂಬುದು ಅವರ ಆಲೋಚನೆಯಾಗಿತ್ತು. ಕೊಪ್ಪಳದ ಅಂಜನಾದ್ರಿಯು ಹನುಮಂತನ ಜನ್ಮಸ್ಥಳ ಎಂದು ನಂಬಲಾಗಿದೆ, ಹೀಗಾಗಿ ಜಿಲ್ಲೆ ವಿಶೇಷವಾಗಿದೆ. 2007 ರಿಂದ, ಶಿಲ್ಪಿ ದಿನಕ್ಕೆ ಒಂದು ಹನುಮಂತನ ವಿಗ್ರಹವನ್ನು ತಯಾರಿಸುತ್ತಿದ್ದಾರೆ. ಈ ಬಾರಿ ಅವರು ಕೃಷ್ಣ ಶಿಲೆಯಿಂದ (ಕಪ್ಪು ಕಲ್ಲು) ವಿಗ್ರಹವನ್ನು ತಯಾರಿಸಲು ನಿರ್ಧರಿಸಿದ್ದಾರೆ.

ಈಗ ರಾಮಲಲ್ಲಾ ಪ್ರತಿಮೆಯನ್ನು ತಯಾರಿಸಲು ಅಯೋಧ್ಯೆಗೆ ಕಳುಹಿಸಲಾದ ಕೆಲ ಭಾಗಗಳು ಇಲ್ಲಿ ಇವೆ, ಅದು ಭಗವಾನ್ ಹನುಮಾನ್ ವಿಗ್ರಹಕ್ಕಾಗಿ ಶಿಲ್ಪಿಯಿಂದ ಬೇಡಿಕೊಂಡೆ ಎಂದು ಶ್ರೀನಿವಾಸ್ ಹೇಳಿದರು. ವಿಜಯದಾಸರ ಪ್ರತಿಮೆಗೆ ನಾನು ಆಯ್ಕೆ ಮಾಡಿದ ಕಲ್ಲಿನಿಂದಲೇ ಅಯೋಧ್ಯೆಯಲ್ಲಿ ರಾಮನ ಪ್ರತಿಮೆಯನ್ನು ನಿರ್ಮಿಸುತ್ತಿರುವುದು ಸಂತೋಷದ ವಿಚಾರ. ನನ್ನ ಬಳಿ ಮೂರು ಕಲ್ಲುಗಳಿವೆ, ನಾನು ಭಗವಾನ್ ರಾಮ ಮತ್ತು ಭಗವಾನ್ ಹನುಮಾನ್ ಇಬ್ಬರ ವಿಗ್ರಹಗಳನ್ನು ಮಾಡಬಹುದು ಎಂದು ತೀರ್ಮಾನಿಸಿದ್ದೇನೆ ಎಂದರು.

SCROLL FOR NEXT