ಮಂಡ್ಯ ಜಿಲ್ಲೆಯ ಆಲಕೆರೆ ಗ್ರಾಮದ ರೈತ ಶಾಲೆ Photo | Udayashankar S
ವಿಶೇಷ

ಮಂಡ್ಯ: ಅನ್ನದಾತರಿಗಾಗಿ 'ರೈತರ ಶಾಲೆ' ಆರಂಭ; ಭಾರತದಲ್ಲೇ ಮೊದಲು!

ಕೃಷಿಯಲ್ಲಿ ತೊಡಗಿರುವವರನ್ನು ಮತ್ತು ಅದನ್ನು ವೃತ್ತಿಯಾಗಿ ಅಥವಾ ಹವ್ಯಾಸವಾಗಿ ತೆಗೆದುಕೊಳ್ಳಲು ಉತ್ಸುಕರಾಗಿರುವವರನ್ನು ಸಬಲೀಕರಣಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಮಂಡ್ಯ: ಯುವಜನತೆ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಮತ್ತು ವಿದ್ಯಾವಂತರನ್ನು ವ್ಯವಸಾಯದೆಡೆಗೆ ಆಕರ್ಷಿಸಲು, ಮಂಡ್ಯ ತಾಲ್ಲೂಕಿನ ಆಲಕೆರೆ ಗ್ರಾಮದಲ್ಲಿ ರೈತರಿಗಾಗಿ ‘ರೈತರ ಶಾಲೆ’ ತೆರೆಯಲು ಶಿಕ್ಷಕರ ಗುಂಪೊಂದು ಮುಂದಾಗಿದೆ. ಕೃಷಿಯಲ್ಲಿ ತೊಡಗಿರುವವರನ್ನು ಮತ್ತು ಅದನ್ನು ವೃತ್ತಿಯಾಗಿ ಅಥವಾ ಹವ್ಯಾಸವಾಗಿ ತೆಗೆದುಕೊಳ್ಳಲು ಉತ್ಸುಕರಾಗಿರುವವರನ್ನು ಸಬಲೀಕರಣಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಮಂಡ್ಯದ ಉಪನ್ಯಾಸಕ ಸತ್ಯಮೂರ್ತಿ ಅವರ ನೇತೃತ್ವದಲ್ಲಿ ಏಳು ಸದಸ್ಯರ ಗುಂಪು, ರೈತ ಕುಟುಂಬದ ಎಲ್ಲ ಶಿಕ್ಷಕರು, ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಕಳೆದ ವರ್ಷದ ಬರ ಹಾಗೂ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ರೈತರ ಸಂಕಷ್ಟಗಳನ್ನು ನೋಡಿ ಮತ್ತು ವಿವಿಧ ಸಮಸ್ಯೆಗಳನ್ನು ಪರಿಗಣಿಸಿ ಶಾಲೆಯನ್ನು ತೆರೆಯಲು ನಿರ್ಧರಿಸಿದರು. ಕೃಷಿಯನ್ನು ಲಾಭದಾಯಕವಾಗಿಸುವುದು ಮತ್ತು ರೈತರನ್ನು ಎಲ್ಲಾ ರೀತಿಯಲ್ಲಿಯೂ ಸ್ವಾವಲಂಬಿಗಳನ್ನಾಗಿ ಮಾಡುವುದು ಈ ತಂಡದ ಪ್ರಮುಖ ಉದ್ದೇಶವಾಗಿದೆ. ಯುವಕರು ಉದ್ಯೋಗ ಅರಸಿ ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುವುದನ್ನು ಹಾಗೂ ರೈತರು ತಮ್ಮ ಭೂಮಿಯನ್ನು ಮಾರಾಟ ಮಾಡುವುದನ್ನು ತಡೆಯಲು ಇದು ಸಹಾಯ ಮಾಡುತ್ತದೆ.

ಈ ತಂಡವು 200ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದೆ. ಕೃಷಿ ತಜ್ಞರು ಮತ್ತು ಪ್ರಗತಿಪರ ರೈತರಿಂದ ಅವರಿಗೆ ನೆರವು ಕೊಡಿಸಲು ಮುಂದಾಗಿದೆ. ರೈತರಿಗೆ ಶಿಕ್ಷಣ ನೀಡುವುದರ ಹೊರತಾಗಿ, ತರಬೇತಿ ಶಿಬಿರಗಳು, ಕ್ಷೇತ್ರ ಭೇಟಿ ಮತ್ತು ‘ರೈತರ ಶಾಲೆ’ಯಲ್ಲಿ ತಜ್ಞರಿಂದ ಅಧಿವೇಶನಗಳನ್ನು ನಡೆಸಲು ತಂಡ ಉತ್ಸುಕವಾಗಿದೆ. ಕೆಂಪೇಗೌಡ ಒಕ್ಕಲಿಗರ ವೆಲ್‌ಫೇರ್‌ ಗ್ರೂಪ್‌’ ರಚಿಸಿದ ಬಳಿಕ ರೈತರ ಶಾಲೆಗೆ ಇತ್ತೀಚೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಶಾಲೆಯು ಇಸ್ರೇಲ್ ಸೇರಿದಂತೆ ವಿವಿಧ ದೇಶಗಳ ರೈತರ ಯಶಸ್ಸಿನ ಕಥೆಗಳನ್ನು ಪ್ರದರ್ಶಿಸುತ್ತದೆ. ಆಲಕೆರೆಯಲ್ಲಿ ಎರಡು ತಿಂಗಳಲ್ಲಿ ಸೆಮಿನಾರ್ ಹಾಲ್ ಮತ್ತು ಕೆಲವು ತರಗತಿ ಕೊಠಡಿಗಳು ಸಿದ್ಧಗೊಳ್ಳಲಿವೆ. ರಾಜ್ಯಾದ್ಯಂತ ಇಂತಹ ಹಲವು ಶಾಲೆಗಳನ್ನು ತೆರೆಯುವ ಯೋಜನೆ ಒಳಗೊಂಡಿದೆ ಎಂದು ಮಂಡ್ಯದ ಉಪನ್ಯಾಸಕ ಸತ್ಯಮೂರ್ತಿ ತಿಳಿಸಿದ್ದಾರೆ.

ಸತ್ಯಮೂರ್ತಿ ಮಾತನಾಡಿ, ರೈತರು ಕೃಷಿ ಮಾರ್ಗದರ್ಶನಕ್ಕಾಗಿ ಶಾಲೆಗೆ ತೆರಳಲು ಮುಕ್ತರಾಗಿದ್ದಾರೆ. "ನಾವು ಕೃಷಿಯಲ್ಲಿ ಉತ್ಸುಕರಾಗಿರುವ ಟೆಕ್ಕಿಗಳು ಸೇರಿದಂತೆ ಯುವಕರಿಗೆ ಮಾರ್ಗದರ್ಶನ ನೀಡುತ್ತೇವೆ" ಎಂದು ಅವರು ಹೇಳಿದರು.

ಉಪನ್ಯಾಸಕರಾದ ಪ್ರದೀಪ್ ಕುಮಾರ್ ಮಾತನಾಡಿ, ಗುಂಪು 500 ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬೀಜಗಳನ್ನು ವಿತರಿಸಿದೆ ಮತ್ತು ಅವುಗಳನ್ನು ಭವಿಷ್ಯಕ್ಕಾಗಿ ಸಂರಕ್ಷಿಸಲು ಅವರನ್ನು ಪ್ರೋತ್ಸಾಹಿಸುತ್ತಿದೆ. ಬೀಜಗಳಿಗಾಗಿ ಬಹುರಾಷ್ಟ್ರೀಯ ಕಂಪನಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಇದು ಅವರಿಗೆ ಸಹಾಯ ಮಾಡುತ್ತದೆ. ರೈತರು ಉದ್ಯೋಗ ಅರಸಿ ಸಮೀಪದ ಪಟ್ಟಣಗಳು ​​ಮತ್ತು ನಗರಗಳಿಗೆ ವಲಸೆ ಹೋಗಿರುವುದರಿಂದ ಆಲಕೆರೆ ಮತ್ತು ಕೀಲಾರ ಗ್ರಾಮಗಳಲ್ಲಿ ಅನೇಕ ಮನೆಗಳಿಗೆ ಬೀಗ ಹಾಕಲಾಗಿದೆ. ಅವರು ಮರಳಿ ಬಂದು ಕೃಷಿಯನ್ನು ಪುನರಾರಂಭಿಸಬೇಕೆಂದು ನಾವು ಆಶಯವಾಗಿದೆ ಎಂದು ಹೇಳಿದರು.

ಭತ್ತ ಕಟಾವು ಮಾಡುವ ಯಂತ್ರ ಮತ್ತು ಇತರೆ ಕೃಷಿ ಉಪಕರಣಗಳನ್ನು ರೈತರಿಗೆ ಅತ್ಯಲ್ಪ ಬಾಡಿಗೆಗೆ ನೀಡುವ ಯೋಜನೆಯನ್ನು ಹೊಂದಿದ್ದೇವೆ. ಸಾವಯವ ಮತ್ತು ನೈಸರ್ಗಿಕ ಕೃಷಿಯನ್ನು ಕೈಗೊಳ್ಳಲು ಪ್ರೋತ್ಸಾಹಿಸಲು ಮತ್ತು ರಸಗೊಬ್ಬರ ಮತ್ತು ಕೀಟನಾಶಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಶಾಲೆಯು ಪ್ರಗತಿಪರ ರೈತರ ಪಟ್ಟಿಯನ್ನು ಸಿದ್ಧಪಡಿಸಿದೆ ಎಂದು ಅವರು ವಿವರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ರಾಜ್ಯದಲ್ಲಿ 'PPP' ಮಾದರಿಯಲ್ಲಿ ಎಂಟು ವೈದ್ಯಕೀಯ ಕಾಲೇಜುಗಳು: ಸರ್ಕಾರದ ಪ್ರಸ್ತಾವನೆಗೆ ಶಿಕ್ಷಣ ತಜ್ಞರ ಆಕ್ಷೇಪ!

ಬೆಂಗಳೂರಿನ ಮೂಲಸೌಕರ್ಯ ಬಗ್ಗೆ ಟೀಕೆ: ನಾವು ಹೇಗಿದ್ವಿ, ಹೇಗಾದ್ವಿ? ಅನ್ನೋದನ್ನ ಮರೆತು ಮಾತಡ್ತಾರೆ; ಉದ್ಯಮಿ ಗಳಿಗೆ ಡಿಕೆಶಿ ಟಾಂಗ್!

ಬಿಜೆಪಿ ವಿರುದ್ಧ ‘ವೋಟ್ ಚೋರ್ ಗದ್ದಿ ಚೋಡ್ ’: ಪ್ರತಿ ಕ್ಷೇತ್ರದಲ್ಲಿ 2 ಲಕ್ಷ ಸಹಿ ಸಂಗ್ರಹಿಸಲು ಶಿವಕುಮಾರ್ ಟಾರ್ಗೆಟ್!

Big step or big threat? ರಷ್ಯಾದಿಂದ ತೈಲ ಖರೀದಿ, ಭಾರತಕ್ಕೆ ಮತ್ತೆ ಭಾರಿ ಸುಂಕದ ಎಚ್ಚರಿಕೆ ನೀಡಿದ ಟ್ರಂಪ್!

ಅಕ್ಟೋಬರ್ 31ರವರೆಗೆ 'ಜಾತಿ ಗಣತಿ' ಸಮೀಕ್ಷೆ ವಿಸ್ತರಣೆ: ಸಮೀಕ್ಷಾದಾರರಿಗೆ ಇಂದಿನಿಂದ ಮೂರು ದಿನ ರಜೆ!

SCROLL FOR NEXT