ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೃಷಿ ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಇಲ್ಲೊಬ್ಬ ವ್ಯಕ್ತಿ ಯಾವ ಸಾಫ್ಟವೇರ್ ಇಂಜಿನಿಯರ್ಗೂ ಕಮ್ಮಿ ಇಲ್ಲ ಎಂಬಂತೆ ಕೃಷಿ ಮಾಡಿ ಕೋಟಿ ಕೋಟಿ ಸಂಪಾದನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
ದಕ್ಷಿಣ ಕನ್ನಡದ ಲೋಹಿತ್ ಶೆಟ್ಟಿ ಅವರು ತರಗತಿಯ ಆಚೆಗೂ ಕಲಿಯಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಮನೆಯಲ್ಲಿದ್ದ ಹಣಕಾಸಿನ ಸಮಸ್ಯೆಯಿಂದಾಗಿ 10ನೇ ತರಗತಿಯನ್ನು ಅರ್ಧದಲ್ಲಿಯೇ ಬಿಟ್ಟ ಇವರು ಕೃಷಿಯತ್ತ ಮುಖ ಮಾಡಿದ್ದರು. ರಂಬುಟಾನ್, ಡ್ರ್ಯಾಗನ್ ಫ್ರೂಟ್ ಹಾಗೂ ಮ್ಯಾಂಗೋಸ್ಟೀನ್‌ನಂತಹ ವಿದೇಶಿ ಹಣ್ಣುಗಳನ್ನು ಬೆಳೆಯಲು ಶುರು ಮಾಡಿದ್ದರು.
ಇದಕ್ಕ ಮೊದಲು ಲೋಹಿತ್ ಅವರು ರಬ್ಬರ್ ಮತ್ತು ಅಡಿಕೆಯಂತಹ ಸಾಂಪ್ರಾದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ, ಇವುಗಳ ನಿರ್ವಹಣೆ ದುಬಾರಿ ಎಂಬುದು ತಿಳಿಸಿದಾಗ, ಇತರೆ ಬೆಳೆಗಳ ಬಗ್ಗೆ ಸಂಶೋಧನೆ ಆರಂಭಿಸಿದರು.
ಬಳಿಕ ಕೇರಳದಿಂದ ರಂಬುಟಾನ್ ಮತ್ತು ಮ್ಯಾಂಗೋಸ್ಟೀನ್ ಸಸಿಗಳನ್ನು ಖರೀದಿಸಿ ದಕ್ಷಿಣ ಕನ್ನಡದ ತಮ್ಮ ಜಮೀನಿನಲ್ಲಿ ನೆಟ್ಟರು. ರೈತರ ಕುಟುಂಬದಿಂದ ಬಂದ ಲೋಹಿತ್ ಅವರು, ತಮ್ಮ 21 ಎಕರೆ ಜಮೀನಿನಲ್ಲಿ ತಂದೆ ಮತ್ತು ಚಿಕ್ಕಪ್ಪ ಪಡುತ್ತಿದ್ದ ಶ್ರಮ ನೋಡುತ್ತಲೇ ಬೆಳೆದಿದ್ದರು. ಮನೆಯಲ್ಲಿದ್ದ ಹಣಕಾಸಿನ ಸಮಸ್ಯೆಯಿಂದಾಗಿ 10ನೇ ತರಗತಿಯನ್ನು ಅರ್ಧದಲ್ಲಿಯೇ ಬಿಟ್ಟು, ಅಂಗಡಿ ಹಾಗೂ ರೆಸ್ಟೋರೆಂಟ್ ಗಳನ್ನು ನಡೆಸಲು ಆರಂಭಿಸಿದ್ದರು. ಆದರೆ, ಸ್ನೇಹಿತರೊಬ್ಬರ ಶಿಫಾರಸು ಮೇರೆಗೆ ಧರ್ಮಸ್ಥಳದಲ್ಲಿ ಕೃಷಿ ಮಾಡಲು ಮುಂದಾಗಿದ್ದರು.
ಜಮೀನಿನಲ್ಲಿ ವಿಶಿಷ್ಟ ಹಣ್ಣುಗಳನ್ನು ಬೆಳೆಯುವ ಮೂಲಕ 8 ವರ್ಷಗಳಲ್ಲಿ ಉತ್ತಮ ಸಾಧನೆಗೈದರು. ಇಂದು ಲೋಹಿತ್ ಅವರು ಸ್ವಂತ ಫಾರ್ಮ್ ಹೌಸ್, ನರ್ಸರಿಯನ್ನು ಹೊಂದಿದ್ದು, ಇತರರಿಗೂ ಉದ್ಯಮ ಆರಂಭಿಸಲು ಸಹಾಯ ಮಾಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ.
2016ರಲ್ಲಿ ದಕ್ಷಿಣ ಕನ್ನಡಕ್ಕೆ ಮರಳಿದ ಅವರು, 20 ಎಕರೆ ಭೂಮಿಯನ್ನು ಗುತ್ತಿಗೆ ಪಡೆದರು. ಇದರ ಜೊತೆಗೆ ಕುಟುಂಬದ 21 ಎಕರ ಜಮೀನನನ್ನೂ ಸಂಯೋಜಿಸಿ, ದೊಡ್ಡ ಮಟ್ಟದಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿದರು. ವಿಶಿಷ್ಟ ಹಣ್ಣುಗಳನ್ನು ಬೆಳೆಯುವ ಮೂಲಕ ಇದೀಗ ವಾರ್ಷಿಕವಾಗಿ 1 ಕೋಟಿ ರೂ. ಅಧಿಕ ಲಾಭ ಗಳಿಸುತ್ತಿದ್ದಾರೆ.
ಮೂರು ವರ್ಷಗಳ ಕಾಲ ಸಸ್ಯಗಳನ್ನು ಪೋಷಿಸುತ್ತೇವೆ. ಅವು ಚೆನ್ನಾಗಿ ಇಳುವರಿಯನ್ನು ಪ್ರಾರಂಭಿಸಿದಾಗ ಮಾಲೀಕರಿಗೆ ಸುಪರ್ದಿಗೆ ನೀಡಲಾಗುತ್ತದೆ. ಈ ಮೂಲಕ ರೈತರಿಗೆ ಸಹಾಯ ಮಾಡಲಾಗುತ್ತಿದೆ.
ಪ್ರಸ್ತುತ 12 ಎಕರೆಯಲ್ಲಿ ರಂಬುಟಾನ್ ಕೃಷಿ ಮಾಡಲಾಗುತ್ತಿದ್ದು, 500 ಡ್ರ್ಯಾಗನ್ ಹಣ್ಣಿನ ಗಿಡಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಮ್ಯಾಂಗೋಸ್ಟೀನ್ ಅನ್ನು ನಮ್ಮ ಅಡಿಕೆ ತೋಟದಲ್ಲಿ ಬೆಳೆಯಲಾಗುತ್ತಿದೆ. ರಂಬುಟಾನ್ ಕೆಜಿಗೆ 180 ರಿಂದ 300 ರೂ.ಗೆ ಮಾರಾಟವಾಗುತ್ತಿದ್ದು, ಮ್ಯಾಂಗೋಸ್ಟೀನ್ ಕೆಜಿಗೆ 350 ರಿಂದ 750 ರೂ., ಡ್ರ್ಯಾಗನ್ ಹಣ್ಣು ಕೆಜಿಗೆ 100 ರಿಂದ 150 ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದು ಲೋಹಿತ್ ಅವರು ಹೇಳಿದ್ದಾರೆ.