ಪ್ರತೀತಿ ಬೊರ್ಡೊಲೊಯ್ 
ವಿಶೇಷ

ವಿಶ್ವ ಚೆಸ್ ವೇದಿಕೆಯಲ್ಲಿ ಕನ್ನಡದ ಕೀರ್ತಿ ಪತಾಕೆ: ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಬೆಂಗಳೂರಿನ ಪ್ರತೀತಿ ಬೊರ್ಡೊಲೊಯ್..!

ಬೆಂಗಳೂರಿನ 13 ವರ್ಷದ ಮಹಿಳಾ ಫಿಡೆ ಮಾಸ್ಟರ್ (WFM) ಪ್ರತೀತಿ ಬೊರ್ಡೊಲೊಯ್, ಇಟಲಿಯಲ್ಲಿ ನಡೆದ ಫಿಡೆ ವಿಶ್ವ ಯುವ ಚೆಸ್ ಚಾಂಪಿಯನ್‌ಶಿಪ್‌ನ ಅಂಡರ್-18 ಬಾಲಕಿಯರ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಭಾರತದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದಿದ್ದಾರೆ.

ಬೆಂಗಳೂರು: ವಿಶ್ವ ಚೆಸ್ ವೇದಿಕೆಯಲ್ಲಿ ಕರ್ನಾಟಕದ ಬಾಲ ಪ್ರತಿಭೆ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾಳೆ.

ಬೆಂಗಳೂರಿನ 13 ವರ್ಷದ ಮಹಿಳಾ ಫಿಡೆ ಮಾಸ್ಟರ್ (WFM) ಪ್ರತೀತಿ ಬೊರ್ಡೊಲೊಯ್, ಇಟಲಿಯಲ್ಲಿ ನಡೆದ ಫಿಡೆ ವಿಶ್ವ ಯುವ ಚೆಸ್ ಚಾಂಪಿಯನ್‌ಶಿಪ್‌ನ ಅಂಡರ್-18 ಬಾಲಕಿಯರ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಭಾರತದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದಿದ್ದಾರೆ.

ಈ ಟೂರ್ನಿಯಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ಏಕೈಕ ಆಟಗಾರ್ತಿಯಾಗಿರುವ ಅವರು, ಇದೇ ವೇಳೆ ತಮ್ಮ ಮೊದಲ ಮಹಿಳಾ ಇಂಟರ್‌ನ್ಯಾಷನಲ್ ಮಾಸ್ಟರ್ (WIM) ನಾರ್ಮ್‌ನ್ನೂ ಸಂಪಾದಿಸಿ ಮತ್ತೊಂದು ಮೈಲಿಗಲ್ಲು ನಿರ್ಮಿಸಿದ್ದಾರೆ.

ಬೆಂಗಳೂರು ಮೂಲದ ಪ್ರತೀತಿ ಬೊರ್ಡೊಲೊಯ್ ಅವರು, ಶಿಶ್ಯ BEML ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿಯಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ಅಹಮದಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಅಂಡರ್-17 ಬಾಲಕಿಯರ ಚೆಸ್ ಚಾಂಪಿಯನ್‌ಶಿಪ್ ಗೆದ್ದು, ವಿಶ್ವ ಯುವ ಚಾಂಪಿಯನ್‌ಶಿಪ್‌ಗೆ ಭಾರತವನ್ನು ಪ್ರತಿನಿಧಿಸುವ ಅರ್ಹತೆ ಪಡೆದಿದ್ದರು.

ಜೂನ್ 15ರಿಂದ 26ರವರೆಗೆ ಇಟಲಿಯ ಮಾಂಟೆಸಿಲ್ವಾನೊದಲ್ಲಿ ನಡೆದ ಈ ಪ್ರತಿಷ್ಠಿತ ಟೂರ್ನಿಯಲ್ಲಿ 83 ದೇಶಗಳ 758ಕ್ಕೂ ಹೆಚ್ಚು ಆಟಗಾರರು ಅಂಡರ್-14, ಅಂಡರ್-16 ಮತ್ತು ಅಂಡರ್-18ರ ಮುಕ್ತ ಹಾಗೂ ಬಾಲಕಿಯರ ವಿಭಾಗಗಳಲ್ಲಿ ಸ್ಪರ್ಧಿಸಿದ್ದರು. ಭಾರತದಿಂದ ಒಟ್ಟು 13 ಆಟಗಾರರು ವಿವಿಧ ವಿಭಾಗಗಳಲ್ಲಿ ಪಾಲ್ಗೊಂಡಿದ್ದರೂ, ಪದಕ ಗೆದ್ದ ಏಕೈಕ ಭಾರತೀಯ ಆಟಗಾರ್ತಿ ಪ್ರತೀತಿಯಾಗಿದ್ದಾರೆ.

ಟೂರ್ನಿಯುದ್ದಕ್ಕೂ ಸೋಲು ಕಾಣದ ಪ್ರತೀತಿ, 11 ಸುತ್ತುಗಳಲ್ಲಿ 7 ಗೆಲುವು ಹಾಗೂ 4 ಡ್ರಾ ಮೂಲಕ ಒಟ್ಟು 9 ಅಂಕಗಳನ್ನು ಗಳಿಸಿದರು. ಮೊದಲ ನಾಲ್ಕು ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿ ಆರಂಭದಲ್ಲೇ ಜಂಟಿ ಮುನ್ನಡೆ ಪಡೆದ ಅವರು, ಅಂತಿಮವಾಗಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ಕಿರಿಯ ವಯಸ್ಸಿನಲ್ಲೇ ವಿಶ್ವ ಮಟ್ಟದಲ್ಲಿ ಸಾಧನೆ ಮಾಡಿದ ಪ್ರತೀತಿ ಬೊರ್ಡೊಲೊಯ್ ಅವರ ಈ ಯಶಸ್ಸು ಕರ್ನಾಟಕದ ಚೆಸ್ ಕ್ಷೇತ್ರಕ್ಕೆ ಹೆಮ್ಮೆಯ ಕ್ಷಣವಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ಅಂತರರಾಷ್ಟ್ರೀಯ ಸಾಧನೆ ಮಾಡುವ ಭರವಸೆಯನ್ನು ಮೂಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ಆದೇಶ ಬೆನ್ನಲ್ಲೇ ಇರಾನ್ ಮೇಲೆ ಅಮೆರಿಕಾ ಭಾರೀ ವೈಮಾನಿಕ ದಾಳಿ: 10 ಪ್ರಮುಖ ಸೇನಾ ನೆಲೆಗಳು ಧ್ವಂಸ, ಕದನ ವಿರಾಮ ಮತ್ತೆ ಪ್ರಶ್ನಾರ್ಥಕ..!

ಇರಾನ್‌ನಿಂದ ಅಮೆರಿಕ ಮಿತ್ರ ರಾಷ್ಟ್ರಗಳ ಮೇಲೆ ಕ್ಷಿಪಣಿ, ಡ್ರೋನ್ ದಾಳಿ; ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ..!

'ಪರಿಸ್ಥಿತಿ ಎದುರಾದರೆ ಇರಾನ್ ಸರ್ವನಾಶ'; ಟ್ರಂಪ್ ಕಠಿಣ ಎಚ್ಚರಿಕೆ, ಶುರುವಾಗುತ್ತಾ ಮಹಾಯುದ್ಧ...?

ಉಗ್ರರ ದಾಳಿ ಭೀತಿ; ದೆಹಲಿ-ಉತ್ತರಾಖಂಡದಲ್ಲಿ ಹೈ ಅಲರ್ಟ್, ದೇವಾಲಯ-ರೈಲು ನಿಲ್ದಾಣಗಳಿಗೆ ಬಿಗಿ ಭದ್ರತೆ..!

ಮಹಾಭೂಕಂಪಕ್ಕೆ ವೆನೆಜುವೆಲಾ ತತ್ತರ: ಸಾವಿನ ಸಂಖ್ಯೆ 1,430ಕ್ಕೆ ಏರಿಕೆ, 68 ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆ