'ಅದ್ಧೂರಿಯ ಸಮಾರಂಭವಿದು'
ಕೋಲ್ಕತಾ: ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಐಪಿಎಲ್ ಉದ್ಘಾಟನಾ ಸಮಾರಂಭ, ಈ ಹಿಂದಿನ ಐಪಿಎಲ್ ಉದ್ಘಾಟನಾ ಸಮಾರಂಭಗಳಿಗಿಂತ ವಿಭಿನ್ನವಾಗಿರುತ್ತದೆ ಎಂದು ಕೋಲ್ಕತಾ ನೈಟ್ ರೈಡರ್ಸ್ ತಂಡದ ಸಹ ಮಾಲೀಕ ಶಾರುಖ್ ಖಾನ್ ತಿಳಿಸಿದ್ದಾರೆ.
ಈ ಸಮಾರಂಭ ಭಾರತದಲ್ಲಿ ಹಿಂದೆಂದೂ ಕಂಡಿರದಂಥಾ ಉದ್ಘಾಟನಾ ಸಮಾರಂಭವಾಗಲಿದೆ ಎಂದು ಹೇಳಿದ ಶಾರುಖ್, 'ಭಾರತ ಎಂದೂ ಕಂಡಿರದಂಥ ಉದ್ಘಾಟನಾ ಸಮಾರಂಭ ಇದಾಗಲಿದೆ. ಸಮಾರಂಭದಲ್ಲಿ ನಾನೂ ಕಾರ್ಯಕ್ರಮ ನೀಡುತ್ತಿದ್ದೇನೆ. ನನ್ನ ಅಭಿನಯದ ಕೆಲವು ಹಾಡುಗಳಿಗೆ ನಾನು ನೃತ್ಯ ಮಾಡುತ್ತೇನೆ. ಬಾಲಿವುಡ್ನ ಖ್ಯಾತ ತಾರೆಗಳಾದ ಕತ್ರಿನಾ ಕೈಫ್ ಹಾಗೂ ದೀಪಿಕಾ ಪಡುಕೋಣೆ ಸಹ ಕಾರ್ಯಕ್ರಮಗಳನ್ನು ನೀಡಲಿದ್ದಾರೆ' ಎಂದರು.