ಈ ಬಾರಿ ಬೌಲಿಂಗ್ ಮಾಡಲ್ಲ: ಪಾಂಟಿಂಗ್
ಬೆಂಗಳೂರು: ಈ ಬಾರಿಯ ಐಪಿಎಲ್ನಲ್ಲಿ ತಾವು ಬೌಲಿಂಗ್ ಮಾಡುವುದಿಲ್ಲವೆಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ. ಭಾರತದಲ್ಲಿರುವ ಕ್ರೀಡಾಂಗಣಗಳು ತುಂಬಾ ಚಿಕ್ಕದಾಗಿದ್ದು, ತಮ್ಮ ಬೌಲಿಂಗ್ ಶೈಲಿಗೆ ಹೊಂದುವುದಿಲ್ಲವಾದ್ದರಿಂದ ತಾವು ಈ ಬಾರಿಯ ಐಪಿಎಲ್ನಲ್ಲಿ ಬೌಲಿಂಗ್ ಮಾಡುವುದಿಲ್ಲ ಎಂದು ಪಾಂಟಿಂಗ್ ವಿವರಿಸಿದರು.
ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಬಿಗ್ ಬ್ಯಾಷ್ ಟಿ20 ಪಂದ್ಯಾವಳಿಯಲ್ಲಿ ಅವರು ಬೌಲಿಂಗ್ ಮಾಡಿದ್ದರು. ಆದರೆ, ಐಪಿಎಲ್ನಲ್ಲಿ ಮಾತ್ರ ಅವರು ಬೌಲಿಂಗ್ ಕಡೆ ಗಮನ ಹರಿಸುವುದಿಲ್ಲವೆಂದು ಹೇಳಿದ್ದಾರೆ.