ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕೇಶ ಮಾದರಿ ನೀಡಲು ಸಂಧು ಸಲಹೆ

Rashmi Kasaragodu
Updated On : 2 Apr 2013, 12:44 pm

ಪಟಿಯಾಲ: ಡೋಪಿಂಗ್ ಟೆಸ್ಟ್ ನಡೆಸಲು ನಾಡಾಕ್ಕೆ ಕೇಶ, ರಕ್ತದ ಮಾದರಿಯನ್ನು ನೀಡುವಂತೆ ಹೆರಾಯಿನ್ ಮಾದಕ ವಸ್ತು ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿರುವ ಬಾಕ್ಸರ್ ವಿಜೇಂದರ್ಗೆ, ಭಾರತದ ರಾಷ್ಟ್ರೀಯ ಬಾಕ್ಸಿಂಗ್ ತರಬೇತುದಾರ ಜಿ.ಎಸ್ ಸಂಧು ಸಲಹೆ ನೀಡಿದ್ದಾರೆ.
'ವಿಜೇಂದ್ರ ತಾವಾಗಿಯೇ ಮುಂದೆ ಬಂದು, ಪೊಲೀಸರು ಮತ್ತು ತನಿಖಾ ಸಂಸ್ಥೆಗಳಿಗೆ ಕೇಶ ಮತ್ತು ರಕ್ತದ ಮಾದರಿಯನ್ನು ನೀಡಬೇಕು. ಅಲ್ಲದೆ ಪ್ರಕರಣವನ್ನು ನ್ಯಾಯಾಲಯಕ್ಕೆ ಎಳೆಯಲು ತನಿಖಾ ಸಂಸ್ಥೆಗಳು ಬಯಸಿವೆ' ಎಂದು ಸಂಧು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜೇಂದ್ರ ಸಿಂಗ್ ಸ್ನೇಹಿತ ರಾಮ್ ಸಿಂಗ್ ಅವರನ್ನು ಈಗಾಗಲೇ ಪೊಲೀಸ್ ಇಲಾಖೆ ಮತ್ತು ಕ್ರೀಡಾ ಸಂಸ್ಥೆಯಿಂದ ಅಮಾನತುಗೊಳಿಸಲಾಗಿದೆ. ಈ ಇಬ್ಬರು ಆಟಗಾರರು ವೈಯಕ್ತಿಕವಾಗಿ ಬಳಕೆ ಮಾಡಿರುವುದರಿಂದ ಪೊಲೀಸರು ಇದುವರೆಗೂ ಅವರನ್ನು ಬಂಧಿಸಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement