ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಟ್ರಯಾತ್ಲಾನ್: ಭಾರತಕ್ಕೆ 2 ಪದಕ

Rashmi Kasaragodu
Updated On : 2 Apr 2013, 12:46 pm

ನವದೆಹಲಿ: ಆಕರ್ಷಕ ಪ್ರದರ್ಶನ ನೀಡಿದ ಭಾರತದ ಅಥ್ಲೀಟ್ಗಳು ನೇಪಾಳದಲ್ಲಿ ಸೋಮವಾರ ನಡೆದ ದಕ್ಷಿಣ ಏಷ್ಯಾ ಟ್ರಯಾತ್ಲಾನ್ ಚಾಂಪಿಯನ್ಷಿಪ್ನಲ್ಲಿ ಒಂದು ಚಿನ್ನ ಸೇರಿದಂತೆ ಎರಡು ಪದಕ ಗೆದ್ದುಕೊಂಡಿದ್ದಾರೆ. ಪೂಜಾ ಚೌರಿಶಿ, ಈಜು, ಸೈಕ್ಲಿಂಗ್ ಮತ್ತು ಓಟವನ್ನೊಳಗೊಂಡಿದ್ದ ಮಹಿಳೆಯರ ಓಟದ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ. ಇನ್ನು ಪುರುಷರ ವಿಭಾಗದ ಓಟದಲ್ಲಿ ಮಧರಜ್ಯಾ ಬೋರಾ ಒಂದು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. 750 ಮೀ. ಈಜು, 20 ಕಿ.ಮೀ ಸೈಕ್ಲಿಂಗ್ ಹಾಗೂ 5 ಕಿ.ಮೀ ಓಟ ಟ್ರಯಾತ್ಲಾನ್ನಲ್ಲಿ ಸೇರಿತ್ತು. ಅಥ್ಲೀಟ್ಗಳನ್ನು ಭಾರತೀಯ ಟ್ರಯಾತ್ಲಾನ್ ಫೆಡರೇಷನ್ ಅಭಿನಂದಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement