ಫಿಟ್ನೆಸ್ಗಾಗಿ 'ಮೀನಿನೂಟ'
ಕೋಲ್ಕತಾ: ಈ ಬಾರಿಯ ಐಪಿಎಲ್ನಲ್ಲಿ ಕಣಕ್ಕಿಳಿಯಲಿರುವ ಕೆಕೆಆರ್ ತಂಡದ ವ್ಯವಸ್ಥಾಪಕ ಮಂಡಳಿ ತಮ್ಮ ತಂಡದ ಆಟಗಾರರನ್ನು ದೈಹಿಕವಾಗಿಯೂ ಫಿಟ್ ಆಗಿಸುವಲ್ಲಿ ವಿಭಿನ್ನ ಪ್ರಯತ್ನ ನಡೆಸಿದೆ. ತಮ್ಮ ತಂಡದ ಆಟಗಾರರ ಕ್ಷಮತೆಯನ್ನು ಹೆಚ್ಚಿಸಲು ಬಂಗಾಳದ ಖ್ಯಾತ ಮೀನಿನೂಟ 'ಭಾಪಾ' ಖಾದ್ಯವನ್ನು ನೀಡುತ್ತಿದೆ ಎಂದು ಮೂಲಗಳು ಹೇಳಿವೆ. ಇದರೊಂದಿಗೆ ಕೋಳಿ ಮಾಂಸದೂಟವನ್ನೂ ನೀಡಲಾಗುತ್ತಿದೆಯಂತೆ.