ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮಿಯಾಮಿ ಮಾಸ್ಟರ್: ಮರ್ರೆಗೆ ಪ್ರಶಸ್ತಿ

Rashmi Kasaragodu
Updated On : 2 Apr 2013, 12:45 pm

ಮಿಯಾಮಿ: ಭಾರಿ ಹಣಾಹಣಿಯಿಂದ ನಡೆದ ಎಟಿಪಿ ಮಿಯಾಮಿ ಮಾಸ್ಟರ್ ಸಿಂಗಲ್ಸ್ನ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ನ ಆ್ಯಂಡಿ ಮರ್ರೆ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಫೈನಲ್ ಪಂದ್ಯದಲ್ಲಿ ಮರ್ರೆ, ಎದುರಾಳಿ ಸ್ಪೇನ್ನ ಡೇವಿಡ್ ಫೆರರ್ ಅವರನ್ನು 2-6, 6-4, 7-6 (7/1) ಸೆಟ್ಗಳ ಅಂತರದಿಂದ ಪ್ರಯಾಸದ ಜಯ ಸಾಧಿಸಿದರು. ಇದು ಮರ್ರೆ ಅವರ 26ನೇ ಪ್ರಶಸ್ತಿಯಾಗಿದೆ. ಅಲ್ಲದೆ ಈ ಮುನ್ನ ಬ್ರಸ್ಬೆನ್ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಮರ್ರೆ ಅವರಿಗೆ ಇದು ಋತುವಿನಲ್ಲಿ ಎರಡನೇ ಪ್ರಶಸ್ತಿಯಾಗಿದೆ. ಟೈ ಬ್ರೇಕರ್ನಲ್ಲಿ ಅಂತ್ಯಗೊಂಡ ಅಂತಿಮ ಸೆಟ್ನಲ್ಲಿ 2 ಅಂಕಗಳಿಂದ ಮುನ್ನಡೆ ಪಡೆದುಕೊಂಡ ಮರ್ರೆ ಜಯದ ಕೇಕೆ ಹಾಕಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement