ವಿದ್ಯಾರ್ಥಿನಿಯರಿಗೆ ಉಚಿತ ಕ್ರಿಕೆಟ್ ಶಿಬಿರ
ಬೆಂಗಳೂರು: ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ನ ಮಹಿಳಾ ವಿಭಾಗ, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿನಿಯರಿಗಾಗಿ ಉಚಿತ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು ಆಯೋಜಿಸಿದೆ. ಬನ್ನೇರುಘಟ್ಟ ರಸ್ತೆಯಲ್ಲಿನ ಕ್ರಿಸ್ಟ್ ಶಾಲೆಯಲ್ಲಿ, ವೆಟ್ ಶಾಲೆಯ ಎದುರುಗಡೆ ಇರುವ ಜೆಪಿ ನಗರ ಸ್ಟೇಡಿಯಂನಲ್ಲಿ ಹಾಗೂ ಬಿಎಸ್ಕೆ ಎರಡನೇ ಹಂತದಲ್ಲಿರುವ ಬಿಎನ್ಎಂ ಕಾಲೇಜಿನಲ್ಲಿ ಶಿಬಿರಗಳು ನಡೆಯಲಿವೆ. ಇನ್ನೂ ಹೆಚ್ಚಿನ ಸ್ಥಳಗಳಲ್ಲಿ ಶಿಬಿರ ನಡೆಸಲು ಯೋಜಿಸಲಾಗಿದ್ದು, ಏಪ್ರಿಲ್ 8ರಿಂದ ಒಂದು ತಿಂಗಳ ಕಾಲ ಶಿಬಿರಗಳು ನಡೆಯಲಿವೆ. ರಾಜ್ಯದ ಮಾಜಿ ಮತ್ತು ಹಾಲಿ ಕ್ರಿಕೆಟ್ ಆಟಗಾರರು ಶಿಬಿರಗಳಲ್ಲಿ ತರಬೇತಿ ನೀಡಲಿದ್ದಾರೆ. ಪ್ರವೇಶಕ್ಕೆ ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಹೆಚ್ಚಿನ ವಿವರಗಳಿಗೆ ಹೇಮಲತಾ ಪಿ.ಜೆ. ದೂ. 9449812590ಗೆ ಸಂಪರ್ಕಿಸಿರಿ.