ಐ- ಲೀಗ್: ಮುಂಬೈ ಟೈಗರ್ಸ್ ತಂಡಕ್ಕೆ ಜಯ
ಬೆಂಗಳೂರು: ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐ ಲೀಗ್ ಅಂತಿಮ ಸುತ್ತಿನ ಪಂದ್ಯಾವಳಿಯ ಮಂಗಳವಾರದ ಪಂದ್ಯದಲ್ಲಿ ಮುಂಬೈ ಟೈಗರ್ಸ್ ತಂಡ ಜಯಗಳಿಸಿದೆ.
ಮಧ್ಯಾಹ್ನ ನಡೆದ ಸದರ್ನ್ ಸಮಿತಿ ವಿರುದ್ಧದ ಪಂದ್ಯದಲ್ಲಿ ಮುಂಬೈ ಟೈಗರ್ಸ್, 3-0 ಅಂತರದಲ್ಲಿ ಪಂದ್ಯವನ್ನು ಗೆದ್ದುಕೊಂಡಿತು.
ಮುಂಬೈ ಪರವಾಗಿ ಪ್ರದೀಪ್ 64ನೇ ನಿಮಿಷದಲ್ಲಿ, ಡೆಂಬಾ ಡೆಖಾತೆ ಅವರು 79ನೇ ಹಾಗೂ 89ನೇ ನಿಮಿಷದಲ್ಲಿ ಗೋಲು ಗಳಿಸಿದರು.
ಈ ಪಂದ್ಯಕ್ಕೂ ಮುನ್ನ ನಡೆದಿದ್ದ ಐ-ಲೀಗ್ನ ಮತ್ತೊಂದು ಪಂದ್ಯದಲ್ಲಿ ಭವಾನಿ ತಂಡ ರಾಂಗ್ದಾಜೀದ್ ತಂಡದ ವಿರುದ್ಧ 1-0 ಅಂತರದಲ್ಲಿ ಜಯ ಗಳಿಸಿತು. ಪಂದ್ಯದ 90ನೇ ನಿಮಿಷದಲ್ಲಿ ಭವಾನಿ ತಂಡದ ಬಾರ್ಟೋ ಅವರು ತಮಗೆ ಸಿಕ್ಕಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಗಳಿಸಿ, ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಐ- ಲೀಗ್ ಅಂತಿಮ ಹಂತದ ಗುರುವಾರದ ಪಂದ್ಯದಲ್ಲಿ ಎಮಿಟಾ ಮೋಹಮ್ಮೇಡನ್ ಹಾಗೂ ಲ್ಯಾಂಗ್ಸ್ನಿಂಗ್ ತಂಡಗಳು ಮುಖಾಮುಖಿಯಾಗಲಿವೆ.