ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕ್ರೀಡಾ ಮಸೂದೆ ಪರಿಷ್ಕರಣೆ ಸಭೆ ಗೊಂದಲಮಯ

Mainashree
Updated On : 3 Apr 2013, 11:50 am

ನವದೆಹಲಿ: ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ವಿಧೇಯಕದ ಪರಿಷ್ಕರಣಾ ಕಾರ್ಯನಿರ್ವಾಹಕ ಸಮಿತಿಯ ಸಭೆಯಲ್ಲಿ ಕ್ರೀಡಾ ಕಾರ್ಯದರ್ಶಿ ಪಿ.ಕೆ ದೇಬ್ ಭಾಗವಹಿಸಿದ್ದನ್ನು ವಿರೋಧಿಸಿ ಸದಸ್ಯರು ಅರ್ಧಕ್ಕೆ ಎದ್ದು ಹೋಗುವುದರೊಂದಿಗೆ, ಸಭೆ ನಾಟಕೀಯವಾಗಿ ಅಂತ್ಯಗೊಂಡಿದೆ.
ಆರ್ಚರಿ ಮತ್ತು ಅಥ್ಲೆಟಿಕ್ಸ್ ಫೆಡರೇಷನ್‌ಗಳಲ್ಲಿ ಕ್ರೀಡಾ ನೀತಿ ಸಂಹಿತೆಯನ್ನು ಜಾರಿಗೆ ತರುವಲ್ಲಿ ದೇಬ್ ವಿಫಲಾಗಿದ್ದಾರೆ ಎಂದು ಆಪಾದಿಸಿ, ವಕೀಲರಾದ ರಾಹುಲ್ ಮೆಹ್ರಾ ಸಭೆಯಿಂದ ಹೊರ ಹೋದರು.
ದೇಬ್ ಮಸೂಧೆಯ ಕುರಿತು ವಿವರಣೆ ನೀಡಿ ಹೊರ ಹೋದ ನಂತರ, ಮೆಹ್ರಾ ತಕ್ಷಣವೇ ಸಭೆಗೆ ಹಾಜರಾದರು. ನೀತಿ ಸಂಹಿತೆಯನ್ನು ಜಾರಿಗೊಳಿಸುವಲ್ಲಿ ವಿಫಲವಾಗಿರುವ ದೇಬ್ ಸಭೆಯಲ್ಲಿ ಭಾಗವಹಿಸುವ ಹಕ್ಕನ್ನು ಹೊಂದಿಲ್ಲ ಎಂದು ಮೆಹ್ರಾ ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement