ಡೆಲ್ಲಿಗೆ ಬೆನ್ ರೊಹ್ರರ್
ನವದೆಹಲಿ: ಗಾಯದ ಸಮಸ್ಯೆಗೆ ತತ್ತರಿಸಿರುವ ಡೆಲ್ಲಿ ಡೇರ್ಡೆವಿಲ್ಸ್ ತಂಡ ಈಗ ನ್ಯೂ ಸೌತ್ ವೇಲ್ಸ್ನ ನಾಯಕ ಹಾಗೂ ಎಡಗೈ ಬ್ಯಾಟ್ಸ್ಮನ್ ಬೆನ್ ರೊಹ್ರರ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಕಳೆದ ವರ್ಷದಿಂದ ಗಾಯದ ಸಮಸ್ಯೆಗೆ ಸಿಲುಕಿರುವ ವೇಗಿ ವರುಣ್ ಆ್ಯರನ್ ಇನ್ನು ಗುಣ ಮುಖರಾಗದ ಹಿನ್ನಲೆಯಲ್ಲಿ ಅವರ ಬದಲಿಗೆ ರೊಹ್ರರ್ ಅವರನ್ನು ಡೆಲ್ಲಿ ತಂಡ ಆಯ್ಕೆ ಮಾಡಿಕೊಂಡಿರುವುದಾಗಿ ತಂಡದ ವಕ್ತಾರ ತಿಳಿಸಿದ್ದಾರೆ.