ಒಮ್ಮತದ ಕೊರತೆ: ಐಒಸಿ, ಐಒಎ ಸಭೆ ಮುಂಡೂಡಿಕೆ
ನವದೆಹಲಿ: ರಾಷ್ಟ್ರೀಯ ಕ್ರೀಡಾ ನೀತಿ ಹಿನ್ನೆಲೆಯಲ್ಲಿ ಉಂಟಾಗಿದ್ದ ಗೊಂದಲ ನಿವಾರಣೆಗಾಗಿ ನಡೆಯಬೇಕಿದ್ದ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ (ಐಒಸಿ) ಹಾಗೂ ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ನಡುವೆ ಗುರುವಾರ ನಡೆದಿದ್ದ ಸಭೆ ಮುಂಡೂಡಲ್ಪಟ್ಟಿದೆ.
ಮತ್ತೊಂದು ಸಭೆಯನ್ನು ಏ. 15 ಹಾಗೂ 106ರಂದು ಸ್ವಿಡ್ಜರ್ಲೆಂಡ್ನ ಲೂಸಾನ್ನೆಯಲ್ಲಿ ಸಭೆಯನ್ನು ನಡೆಸಲು ಉದ್ದೇಶಿಸಲಾಗಿದೆ.
ಗುರುವಾರ ನಡೆದ ಸಭೆಯಲ್ಲಿ ಐಒಎಯನ್ನು ಪ್ರತಿನಿಧಿಸಿದ್ದ ವಿ.ಕೆ. ಮಲ್ಹೋತ್ರಾ, ರಣಬೀರ್ ಸಿಂಗ್ ಹಾಗೂ ಕೇಂದ್ರ ಕ್ರೀಡಾ ಸಚಿವಾಲಯದ ಕೆಲ ಅಧಿಕಾರಿಗಳು ಹಾಗೂ ಐಒಸಿಯ ಅಧಿಕಾರಿಗಳ ನಡುವಿನ ಮಾತುಕತೆಯಲ್ಲಿ ಒಮ್ಮತ ಮೂಡಲಿಲ್ಲ.
ಹಾಗಾಗಿ, ಸಭೆಯನ್ನು ಮುಂದೂಡಲಾಯಿತು ಎಂದು ಮೂಲಗಳು ಹೇಳಿವೆ.