ನಳನಳಿಸುತ್ತಿರುವ ಚಿನ್ನಸ್ವಾಮಿ ಸ್ಟೇಡಿಯಂ
ಬೆಂಗಳೂರು: ಐಪಿಎಲ್ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ಶೃಂಗಾರಗೊಂಡು ನಳನಳಿಸುತ್ತಿದೆ. ಆರ್ಸಿಬಿಯ ದೊಡ್ಡ ವಿನೈಲ್ ಪೋಸ್ಟರ್ಗಳು, ಡಿಸ್ಪ್ಲೇ ಬೋರ್ಡ್ಗಳು, ಎಲ್ಲೆಡೆ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ಕ್ರೀಡಾಂಗಣದಲ್ಲಿ ಪ್ರಮುಖವಾಗಿ ಗಮನ ಸೆಳೆಯುವ ಅಂಶವೆಂದರೆ, ಎಲೆಕ್ಟ್ರಾನಿಕ್ ಸ್ಕೋರ್ ಡಿಸ್ಪ್ಲೇ ಬೋರ್ಡ್ಗಳು. ಮುಖ್ಯ ದ್ವಾರದ ಬಳಿಯೇ ಕ್ರೀಡಾಂಗಣದ ಕಟ್ಟಡಕ್ಕೆ ಹೊಂದಿಕೊಂಡಂತೆ ಡಿಸ್ಪ್ಲೇ ಬೋರ್ಡ್ಗಳನ್ನು ಹಾಕಿರುವುದರಿಂದ ಕ್ರೀಡಾಂಗಣದ ಹೊರಗಿನ ಜನರೂ ಪಂದ್ಯದ ಸ್ಕೋರ್ ಅಪ್ಡೇಟ್ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಈ ಹಿಂದೆಯೇ ಇವನ್ನು ಅಳವಡಿಸಲಾಗಿತ್ತಾದರೂ, ಐಪಿಎಲ್ಗಾಗಿ ಇವನ್ನು ಉಪಯೋಗಿಸುತ್ತಿರುವುದು ಇದೇ ಮೊದಲು. ಇದಲ್ಲದೇ, ಕ್ರೀಡಾಂಗಣದ ಆವರಣದಲ್ಲಿ ವಿಶೇಷ ತುರ್ತು ಚಿಕಿತ್ಸಾ ವಿಭಾಗ ಹಾಗೂ ಪೊಲೀಸ್ ಚೌಕಿಗಳನ್ನು ಸ್ಥಾಪಿಸಲಾಗಿದೆ.