ಮೂರನೇ ಸುತ್ತಿಗೆ ಗುರುಸಾಯಿ
ಬೆಂಗಳೂರು: ಭಾರತದ ಶಟ್ಲರ್ ಗುರುಸಾಯಿ ದತ್ ಅವರು ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಪಂದ್ಯಾವಳಿಯ ಪುರುಷರ ವಿಭಾಗದ ಮೂರನೇ ಸುತ್ತನ್ನು ಪ್ರವೇಶಿಸಿದ್ದಾರೆ. ಬುಧವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಅವರು, ಥಾಯ್ಲೆಂಡ್ನ ಸುಪ್ಪನ್ಯು ಅವಿಹಿಂಗ್ಸ್ಯಾನನೋನ್ ಅವರನ್ನು 21-14, 18-21, 21-19 ಅಂತರದಲ್ಲಿ ಸೋಲಿಸಿದರು.
ಆದರೆ, ಪಂದ್ಯಾವಳಿಯಲ್ಲಿ ಮೊದಲ ಸುತ್ತಿನಲ್ಲಿ ಜಯಗಳಿಸಿ, ದ್ವಿತೀಯ ಸುತ್ತನ್ನು ಪ್ರವೇಶಿಸಿದ್ದ ಭಾರತದ ಮತ್ತಿತರ ಆಟಗಾರರಾದ ಅಜಯ್ ಜಯರಾಮ್ ಸೋಲು ಕಂಡು ನಿರಾಸೆಗೊಳಿಸಿದರು. ಬುಧವಾರ ನಡೆದ ಪಂದ್ಯದಲ್ಲಿ ಅವರು, ದಕ್ಷಿಣ ಕೊರಿಯಾದ ಡಾಂಗ್ ಕ್ಯುನ್ ಲೀ ಅವರ ವಿರುದ್ಧ 24-26, 19-21 ಅಂತರದಲ್ಲಿ ಸೋಲಿಸಿದರು.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲು ಬುಧವಾರ ಅಂತ್ಯಗೊಂಡಿತು. ಉದಯೋನ್ಮುಖ ಆಟಗಾರ್ತಿಯಾದ ಶಾರದಾ ಜಸ್ತಿ ಅವರು ಜಪಾನ್ನ ಯುಯ್ ಹಶಿಮೊಟೋ ಅವರ ವಿರುದ್ಧ 5-21, 13-21 ಅಂತರದಲ್ಲಿ ಪರಾಭವಗೊಂಡರು.