ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸ್ಟಾರ್ಕ್‌ಗೆ ದುಬಾರಿ ಒಪ್ಪಂದ

Mainashree
Updated On : 4 Apr 2013, 12:02 pm

ಸಿಡ್ನಿ: ಮುಂಬರುವ ಹೊಸ ಋತುವಿಗೆ 20 ಆಟಗಾರರನ್ನು ಆಯ್ಕೆ ಮಾಡಿ ಅವರ ಒಪ್ಪಂದ ಪಟ್ಟಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಬಿಡುಗಡೆ ಮಾಡಿದ್ದು, ವೇಗಿ ಮಿಚ್ಚೆಲ್ ಸ್ಟಾರ್ಕ್ ಈ ಬಾರಿ ಅತಿ ದುಬಾರಿ ಒಪ್ಪಂದವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇತ್ತೀಚೆಗೆ ಭಾರತದ ವಿರುದ್ಧ ಉತ್ತಮ ಹೋರಾಟದ ಪ್ರದರ್ಶನ ನೀಡಿದ ಸ್ಟಾರ್ಕ್ ಐಸಿಸಿ ರ್ಯಾಕಿಂಗ್ ಪಟ್ಟಿಯಲ್ಲಿ ಬಡ್ತಿ ಪಡೆದಿದ್ದರು. ಕಳೆದ ವರ್ಷ 1.3 ಕೋಟಿಯ ಒಪ್ಪಂದ ಪಡೆದಿದ್ದರು. ಆದರೆ ಈ ಬಾರಿ ಸ್ಟಾರ್ಕ್ 5.5 ಕೋಟಿಯ ಒಪ್ಪಂದವನ್ನು ಕ್ರಿಕೆಟ್ ಆಸ್ಟ್ರೇಲಿಯಾದಿಂದ ಪಡೆದುಕೊಂಡಿದ್ದಾರೆ. ಜತೆಗೆ ಜಾಕ್ಸನ್ ಬರ್ಡ್, ಮೊಯ್ಸಿಸ್ ಹೆನ್ರಿಕೇಸ್, ಉಸ್ಮಾನ್ ಖವಾಜ ಮತ್ತು ಸ್ಟೀವ್ ಸ್ಮಿತ್ ಅವರು ಈ ಬಾರಿಯ ಒಪ್ಪಂದ ಪಡೆಯುವಲ್ಲಿ ವಿಫಲರಾಗಿದ್ದು, ಈ ಆಟಗಾರರು ಒಪ್ಪಂದ ಪಡೆಯಲು ಅವಕಾಶ ಇದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಜಾನ್ ಇನ್‌ವೆರಾರಿಟಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement