ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ರಾಯಲ್ಸ್‌ಗೆ ರೋಚಕ ಜಯ

ಇನಿಂಗ್ಸ್‌ನ ಕೊನೆ ಓವರ್‌ನಲ್ಲಿ ವಿನಯ್ ಕುಮಾರ್ ಮಾರಕ ಬೌಲಿಂಗ್‌ನಿಂದ ಆರ್‌ಸಿಬಿ ತಂಡ ರೋಚಕ ಜಯ...

Rashmi Kasaragodu
Updated On : 5 Apr 2013, 1:56 am

ಬೆಂಗಳೂರು: ಇನಿಂಗ್ಸ್‌ನ ಕೊನೆ ಓವರ್‌ನಲ್ಲಿ ವಿನಯ್ ಕುಮಾರ್ ಮಾರಕ ಬೌಲಿಂಗ್‌ನಿಂದ ಆರ್‌ಸಿಬಿ ತಂಡ ರೋಚಕ 2 ರನ್‌ಗಳ ಜಯ ಸಾಧಿಸಿತು. ಇದಕ್ಕು ಮುನ್ನ ಕ್ರಿಸ್ ಗೇಯ್ಲ್‌ರ ಸ್ಪೋಟಕ ಬ್ಯಾಟಿಂಗ್‌ನಿಂದ ಆರ್‌ಸಿಬಿ ತಂಡ ಸವಾಲಿನ ಮೊತ್ತವನ್ನು ಪೇರಿಸಿತು.
 ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 156 ರನ್‌ಗಳಿಸಿತು.
ಆರ್‌ಸಿಬಿ ಪರ ಆರಂಭಿಕರಾದ ಕ್ರಿಸ್ ಗೇಯ್ಲ್ ಹಾಗೂ ದಿಲ್ಶಾನ್ ಉತ್ತಮ ಆರಂಭ ನೀಡಲಿಲ್ಲ. ಕೇವಲ ಒಂದು ರನ್‌ಗಳಿಸಿದ್ದ ದಿಲ್ಶಾನ್, ಮಿಚೆಲ್ ಜಾನ್ಸನ್ ಎಸೆತದಲ್ಲಿ ಬೌಲ್ಡ್ ಆಗಿ ನಿರಾಸೆ ಮೂಡಿಸಿದರು.
ಈ ವೇಳೆ ಗೇಯ್ಲ್ ಜತೆಗೂಡಿದ ನಾಯಕ ವಿರಾಟ್ ಕೋಹ್ಲಿ ಉತ್ತಮ ಆರಂಭ ಪಡೆದು 14 ಎಸೆತದಲ್ಲಿ 24 ರನ್‌ಗಳಸಿದರು ಆದರೆ ಈ ವೇಳೆ ಬುಮ್ರಾ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬೀಳುವ ಮೂಲಕ ಔಟಾದರು.
ನಂತರ ಬಂದ ಮಾಯಾಂಕ್ ಹೆಚ್ಚು ಹೊತ್ತು ಕ್ರಿಸ್‌ನಲ್ಲಿ ನಿಲ್ಲಲಿಲ್ಲ. ತಂಡದ ಮೊತ್ತ 31 ರನ್ ಆಗಿದ್ದಾಗ ಬುಮ್ರಾ ಎಸೆತದಲ್ಲಿ ಸಚಿನ್‌ಗೆ ಕ್ಯಾಚ್ ನೀಡಿ ಹೊರ ನಡೆದರು.
ಈ ವೇಳೆ ಕ್ರಿಸ್‌ಗೆ ಬಂದ ಡೇನಿಯಲ್ ಕ್ರಿಸ್ಚಿಯನ್, ತಂಡಕ್ಕೆ 44 ರನ್‌ಗಳ ಜತೆಯಾಟವಾಡಿದರು. ಈ ಜತೆಯಾಟದಲ್ಲಿ ಕ್ರಿಸ್ಚಿಯನ್ ಗಳಿಸಿದ್ದು 13 ಎಸೆತದಲ್ಲಿ ಕೇವಲ 4 ರನ್. ಈ ವೇಳೆ ಹರ್ಭಜನ್ ಎಸೆತದಲ್ಲಿ ಬೃಹತ್ ಹೊಡೆತಕ್ಕೆ ಮುಂದಾಗಿ ಔಟಾದರು.
ನಂತರ ಬಂದ ಕರುಣ್ ನಾಯರ್ ಶೂನ್ಯ ಸಂಪಾದನೆಗೆ ತಮ್ಮ ಇನಿಂಗ್ಸ್ ಮುಗಿಸಿದರು. ಈ ವೇಳೆ ಮತ್ತೆ ದಾಳಿಗಿಳಿದ ಬುಮ್ರಾ ನಾಯರ್ ಅವರನ್ನು ಎಲ್‌ಬಿ ಬಲೆಗೆ ಕೆಡವಿಕೊಂಡರು.
ಈ ವೇಳೆ ಏಕಾಂಗಿ ಹೋರಾಟ ನಡೆಸುತ್ತಿದ್ದ ಗೇಯ್ಲ್ 13.4 ನೇ ಓವರ್‌ನಲ್ಲಿ ಅರ್ಧ ಶತಕ ಪೂರೈಸಿದರು. ಗೇಯ್ಲ್ ಜತೆಗೂಡಿ ಇನಿಂಗ್ಸ್ ಕಟ್ಟಲು ಮುಂದಾದ ಅರುಣ್ ಕಾರ್ತಿಕ್ 19 ರನ್‌ಗಳಿಸಿ ಉತ್ತಮ ಸಾಥ್ ನೀಡಿದರು. ಈ ಜೋಡಿ 6ನೇ ವಿಕೆಟ್‌ಗೆ ಮುರಿಯದ 76 ರನ್ ಜತೆಯಾಟ ನೀಡಿದರು.
ಸಿಕ್ಸರ್ ಸುರಿಮಳೆ: ಗೇಯ್ಲ್ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡು ಕ್ರೀಡಾಂಗಣಕ್ಕೆ ಆಗಮಿಸಿದ ಕ್ರಿಕೆಟ್ ಅಭಿಮಾನಿಗಳಿಗೆ ಗೇಯ್ಲ್ ನಿರಾಸೆ ಮಾಡಲಿಲ್ಲ. ಗೇಯ್ಲ್ ಇನಿಂಗ್ಸ್‌ನ ಆರಂಭದಲ್ಲಿ ನಿಧಾನ ಗತಿಯ ಬ್ಯಾಟಿಂಗ್ ಆರಂಭಿಸಿದರಾದರೂ ನಂತರ ಪಂದ್ಯದಲ್ಲಿ 5 ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಆರ್ಭಟ ತೋರಿದರು. ಕೇವಲ 58 ಎಸೆತಗಳನ್ನು ಎದುರಿಸಿದ ಗೇಯ್ಲ್ 158.62 ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 92 ರನ್‌ಗಳಿಸಿದರು. ಗೇಯ್ಲ್‌ರ ಈ ಮೊತ್ತದಲ್ಲಿ 11 ಬೌಂಡರಿ ಹಾಗೂ 5 ಸಿಕ್ಸರ್ ಒಳಗೊಂಡಿತ್ತು.
ಎಡವಿದ ಮುಂಬೈ: ಆರ್‌ಸಿಬಿ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 154 ರನ್‌ಗಳನ್ನಷ್ಟೇ ಪೇರಿಸಿತು. ಆರಂಭಿಕರಾಗಿ ಕಣಕ್ಕಿಳಿ ನಾಯಕ ರಿಕಿ ಪಾಂಟಿಂಗ್ ಹಾಗೂ ಸಚಿನ್ ತೆಂಡೂಲ್ಕರ್ ತಂಡಕ್ಕೆ ಉತ್ತಮ ಬುನಾದಿ ಹಾಕಿದರು. ಮೊದಲ ವಿಕೆಟ್‌ಗೆ ಈ ಜೋಡಿ 52 ರನ್ ಕಲೆಹಾಕಿತು. ಈ ವೇಳೆ 23 ರನ್‌ಗಳಿಸಿದ್ದ ಸಚಿನ್ ಅನಾವಶ್ಯಕ ರನ್ ಕದಿಯಲು ಮುಂದಾಗಿ ರನೌಟ್ ಆದರು. ನಂತರದ ಕೆಲವೇ ಹೊತ್ತಿನಲ್ಲಿ 28 ರನ್‌ಗಳಿಸಿದ್ದ ಪಾಂಟಿಂಗ್ ಮುರಳಿ ಕಾರ್ತಿಕ್ ಎಸೆತದಲ್ಲಿ ಸ್ಟಂಪ್ ಔಟಾದರು. ಈ ವೇಳೆ ಕ್ರೀಸ್‌ಗಿಳಿದ ರೋಹಿತ್ ಶರ್ಮಾ ಕೇವಲ 11 ರನ್‌ಗಳಿಸಿ ವಿನಯ್ ಎಸೆತದಲ್ಲಿ ಬೌಲ್ಡ್ ಆದರು.  
ತಿರುವು ತಂದ ವಿನಯ್: ಶರ್ಮಾ ನಿರ್ಗಮನದ ನಂತರ, ದಿನೇಶ್ ಕಾರ್ತಿಕ್- ರಾಯುಡು ಜೋಡಿ 60 ರನ್‌ಗಳ ಜತೆಯಾಟ ನೀಡಿದರಾದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಅಂತಿಮ ಓವರ್‌ನಲ್ಲಿ ಗೆಲುವಿಗೆ 10 ರನ್‌ಗಳು ಬೇಕಿದ್ದಾಗ ಬೌಲಿಂಗ್ ಮಾಡಿದ ವಿನಯ್, ಕೇವಲ 7 ರನ್ ನೀಡಿ 2 ವಿಕೆಟ್ ಪಡೆದು ಮುಂಬೈ ತಂಡದ ಗೆಲುವನ್ನು ಕಸಿದುಕೊಂಡರು.

ಸ್ಕೋರ್ ಬೋರ್ಡ್
ರಾಯಲ್ ಚಾಲೆಂಜರ್ಸ್:  156/5 (20 ಓವರ್)
ಕ್ರಿಸ್ ಗೇಯ್ಲ್ ಅಜೇಯ 92 (58), ದಿಲ್ಶಾನ್ ಬಿ ಜಾನ್ಸನ್ 0 (8), ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯೂ ಬಿ ಬುಮ್ರಾ 24 (14), ಮಾಯಾಂಕ್ ಅಗರ್ವಾಲ್ ಸಿ ತೆಂಡೂಲ್ಕರ್ ಬಿ ಬುಮ್ರಾ 1 (5), ಡೇನಿಯಲ್ ಕ್ರಿಶ್ಚಿಯನ್ ಸಿ ಜಾನ್ಸನ್ ಬಿ ಹರ್ಭಜನ್ ಸಿಂಗ್ 4 (13), ಕರುಣ್ ನಾಯರ್ ಎಲ್‌ಬಿಡಬ್ಲ್ಯೂ ಬಿ 0 (3), ಅರುಣ್ ಕಾರ್ತಿಕ್ ಅಜೇಯ 19 (19). ಇತರೆ 16.
ವಿಕೆಟ್ ಪತನ: 1-3, 2-28, 3-31, 4-75, 5-80.
ಬೌಲಿಂಗ್: ಜಾನ್ಸನ್ 3-0-15-1, ಮುನಾಫ್ ಪಟೇಲ್ 4-0-40-0, ಬ್ಯುಮ್ರಾ 4-0-32-3, ಓರಮ್ 4-0-23-0, ಹರ್ಭಜನ್ ಸಿಂಗ್ 4-0-21-1, ಪೊಲಾರ್ಡ್ 1-0-15-0.
ಮುಂಬೈ ಇಂಡಿಯನ್ಸ್: 154/5 (20 ಓವರ್)
ರಿಕಿ ಪಾಂಟಿಂಗ್ ಸ್ಟಂಪ್ಡ್ ಅರುಣ್ ಕಾರ್ತಿಕ್ ಬಿ ಮುರಳಿ ಕಾರ್ತಿಕ್ 28 (33), ಸಚಿನ್ ತೆಂಡೂಲ್ಕರ್ ರನೌಟ್ (ಉನಾದ್ಕತ್/ಅರುಣ್ ಕಾರ್ತಿಕ್) 23 (19), ದಿನೇಶ್ ಕಾರ್ತಿಕ್ ಸಿ ಅಗರ್ವಾಲ್ ಬಿ ವಿನಯ್ ಕುಮಾರ್ 60 (37), ರೋಹಿತ್ ಶರ್ಮಾ ಬಿ ವಿನಯ್ ಕುಮಾರ್ 11 (11), ಆಂಬಟಿ ರಾಯುಡು ಬಿ ವಿನಯ್ 18 (18), ಇತರೆ 8.
ವಿಕೆಟ್ ಪತನ: 1-52, 2-62, 3-88, 4-148, 5-148.
ಬೌಲಿಂಗ್: ಉನಾದ್ಕತ್ 4-0-26-0, ಕ್ರಿಶ್ಚಿಯನ್ 4-0-42-0, ವಿನಯ್ ಕುಮಾರ್ 4-0-27-3, ಮುತ್ತಯ್ಯ ಮುರಳೀಧರನ್ 4-0-30-0, ಮುರಳಿ ಕಾರ್ತಿಕ್ 4-0-24-1.    

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement