ಸುದ್ದಿ ಸಂಕ್ಷೇಪ
ಮೊದಲ ಪಂದ್ಯಕ್ಕೆ ವ್ಯಾಟ್ಸನ್ ಡೌಟ್
ನವದೆಹಲಿ: ರಾಜಸ್ಥಾನ್ ರಾಯಲ್ಸ್ ತಂಡ ಈ ಬಾರಿಯ ಮೊದಲ ಪಂದ್ಯದಲ್ಲಿ ತನ್ನ ಪ್ರಮುಖ ಆಟಗಾರ ಶೇನ್ ವಾಟ್ಸನ್ ಅವರ ಅನುಪಸ್ಥಿತಿಯನ್ನು ಎದುರಿಸಲಿದೆ. ರಾಜಸ್ಥಾನ್ ತಂಡ ಶನಿವಾರ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡವನ್ನು ಎದುರಿಸಲಿದ್ದು, ಪಂದ್ಯಾವಳಿಯಲ್ಲಿ ಉತ್ತಮ ಆರಂಭ ಪಡೆಯಲು ಕಾಯುತ್ತಿದೆ.
ಐಪಿಎಲ್‌ನಿಂದ ಪ್ಯಾಟಿನ್ಸನ್ ಔಟ್
ಮೆಲ್ಬೊರ್ನ್: ಈ ಬಾರಿಯ ಐಪಿಎಲ್‌ನಲ್ಲಿ ಬಹುತೇಕ ತಂಡಗಳು ಗಾಯದ ಸಮಸ್ಯೆಯಿಂದ ತಂಡದ ಪ್ರಮುಖ ಆಟಗಾರರ ಅನುಪಸ್ಥಿತಿಯನ್ನು ಎದುರಿಸುತ್ತಿದ್ದು, ಈಗ ಕೆಕೆಆರ್ ತಂಡ ವೇಗಿ ಪ್ಯಾಟಿನ್ಸನ್ ಉದರದ ಶಸ್ತ್ರ ಚಿಕಿತ್ಸೆಯ ಕಾರಣ ಐಪಿಎಲ್‌ನಿಂದ ಹೊರಗುಳಿದಿದ್ದಾರೆ. ಉದರದ ಅನಾರೋಗ್ಯಕ್ಕೆ ಅವರು ಒಳಗಾಗಿದ್ದಾರೆ.