ಐ-ಲೀಗ್: ಡ್ರಾ ಸಾಧಿಸಿದ ಲ್ಯಾಂಗ್ಸ್ನಿಂಗ್
ಬೆಂಗಳೂರು: ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಐ ಲೀಗ್ನ ಅಂತಿಮ ಸುತ್ತಿನ ಮೊದಲ ಹಂತದ ಪಂದ್ಯದಲ್ಲಿ ಲ್ಯಾಂಗ್ಸ್ನಿಂಗ್ ತಂಡವು ಭವಾನಿಪೋರೆ ತಂಡದ ವಿರುದ್ಧ 3-3 ಅಂತರದ ಗೋಲು ದಾಖಲಿಸಿದೆ. ಎರಡು ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು, ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಲ್ಯಾಂಗ್ಸ್ನಿಂಗ್ ತಂಡದ ಪರ ಜೋಲ್ 11ನೇ, ಡೇನಿಯಲ್ 73ನೇ, ವಿಕ್ಟರ್ 90(3)ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಇತ್ತ ಭವಾನಿಪೋರೆ ತಂಡವು 3 ಗೋಲುಗಳನ್ನು ದಾಖಲಿಸಿದ್ದು, ಹಡ್ಸನ್ 7ನೇ, ಯೊಸೆಫ್26ನೇ ಹಾಗೂ ಜಗನಾಥ್ ಸನಾ 70ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಮಧ್ಯಾಹ್ನ ನಡೆದ ಮತ್ತೊಂದು ಪಂದ್ಯದಲ್ಲಿ ಸದರ್ನ್ ಸಮಿತಿ ತಂಡವು ಇಎಂಟಿಎ ಸ್ಪೋರ್ಟಿಂಗ್ ತಂಡದ ವಿರುದ್ಧ 0-1 ಗೋಲುಗಳ ಅಂತರದಲ್ಲಿ ಪರಾಭವಗೊಂಡಿದೆ. ಇಎಂಟಿಎ ತಂಡದ ಪರ ಜರ್ಯಾನ್ 69ನೇ ನಿಮಿಷದಲ್ಲಿ ಗೋಲು ದಾಖಲಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.