ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಟಿ20: ಕ್ಲೀನ್ ಸ್ವೀಪ್ ಮಾಡಿದ ಭಾರತ

Mainashree
Updated On : 6 Apr 2013, 12:17 pm

ವಡೋದರಾ: ಪ್ರವಾಸಿ ಬಾಂಗ್ಲಾದೇಶದ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಭಾರತ ವನಿತೆಯರ ತಂಡ ಮೂರು ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಮೊದಲ ಪಂದ್ಯದಲ್ಲಿ 49 ರನ್‌ಗಳ ಗೆಲುವು ದಾಖಲಿಸಿದ್ದ ಭಾರತ ವನಿತೆಯರು, ಎರಡನೇ ಪಂದ್ಯದಲ್ಲಿ 7 ವಿಕೆಟ್‌ಗಳ ಜಯ ಸಾಧಿಸಿದರು. ನಂತರ ಶುಕ್ರವಾರ ನಡೆದ ಮೂರನೇ ಪಂದ್ಯದಲ್ಲಿ 10 ರನ್‌ಗಳ ಜಯ ಸಾಧಿಸಿದ ಭಾರತ ವನಿತೆಯರು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 123 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು.
ಭಾರತದ ಪರ ಉತ್ತಮ ಬ್ಯಾಟಿಂಗ್‌ನಡೆಸಿದ ಮೊನಾ ಮೆಶ್ರಮ್ 22, ಸ್ಮೃತಿ ಮಂದನಾ 39 ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ 20 ರನ್‌ಗಳಿಸಿದರು. ಈ ಮೂವರು ಬ್ಯಾಟರ್‌ಗಳನ್ನು ಹೊರತು ಪಡೆಸಿ ಉಳಿದ ಯಾವುದೇ ಬ್ಯಾಟರ್‌ಗಳು ಹೆಚ್ಚಿನ ರನ್‌ಗಳಿಸಲಿಲ್ಲ.
ಬಾಂಗ್ಲಾದೇಶದ ಪರ ಸಲ್ಮಾ ಖತುನ್ ಹಾಗೂ ಪನ್ನಾ ಘೋಶ್ ತಲಾ 2 ವಿಕೆಟ್ ಪಡೆದರೆ, ಜಹನಾರ ಅಲಂ, ಫಾಹಿಮಾ ಖತುನ್ ಹಾಗೂ ಶುಖ್ತಾರ ರೆಹಮಾನ್ ತಲಾ 1 ವಿಕೆಟ್ ಪಡೆದರು. ಭಾರತ ತಂಡ ನೀಡಿದ ಗುರಿಯನ್ನು ಬೆನ್ನಟ್ಟಿದ ಬಾಂಗಾದೇಶದ ಪರ ಶುಖ್ತಾರ ರೆಹಮಾನ್ 25 ಹಾಗೂ ಲತಾ ಮೊಂದಲ್ 32 ರನ್‌ಗಳಿಸಿದ್ದು ಬಿಟ್ಟರೆ ಉಳಿದ ಯಾವುದೇ ಬ್ಯಾಟರ್‌ಗಳು ಹೆಚ್ಚು ರನ್‌ಗಳಿಸಲಿಲ್ಲ.
ಅಂತಿಮವಾಗಿ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡ ಬಾಂಗ್ಲಾ ಕೇವಲ 113 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಈ ಮೂಲಕ 10 ರನ್‌ಗಳ ಸೋಲನುಭವಿಸಿತು.
ಸಂಕ್ಷಿಪ್ತ ಸ್ಕೋರ್
ಭಾರತ ವನಿತೆಯರು 123/9 (20 ಓವರ್)
ಮಂದನಾ 39
ಮೆಶ್ರಮ್ 22
ಬೌಲಿಂಗ್: ಸಲ್ಮಾ ಖತುನ್ 30/2 ಪನ್ನಾ ಘೋಶ್ 24/2
ಬಾಂಗ್ಲಾದೇಶ ವನಿತೆಯರು 113/7 (20 ಓವರ್)
ಮೊಂದಲ್ 32
ರೆಹಮಾನ್ 25
ಬೌಲಿಂಗ್: ಯಾದವ್ 21/3, ಬಿಷ್ತ್ 28/2

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement